ಕೆಪಿಸಿಸಿ ಸಂಯೋಜಕ ಹುದ್ದೆಗೆ ಅರ್ಜಿ ಸಲ್ಲಿಸಿದ ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ

ಬೆಂಗಳೂರು: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ (AICC) ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ಸಂಘಟನ್ – ಸೃಜನ್ ಅಭಿಯಾನ್’ ಕಾರ್ಯಕ್ರಮದಡಿಯಲ್ಲಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ಕೆಪಿಸಿಸಿ ಕಾರ್ಯದರ್ಶಿ ಮತ್ತು ಸಂಯೋಜಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ನಿಕಟಪೂರ್ವ ಕಾರ್ಯದರ್ಶಿ ಕೆ.ಎಂ. ಮುಸ್ತಫ ಅವರು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸಂಯೋಜಕರ ಹುದ್ದೆಗಾಗಿ […]

Read More

ನಮ್ಮ ಸುಳ್ಯದಲ್ಲೂ ಬೆಚ್ಚಿಬೀಳಿಸುತ್ತಿರುವ ದಿನಸಿ ಬೆಲೆ ಏರಿಕೆ: ಕಣ್ಣೀರು ಹಾಕುತ್ತಿರುವ ಜನಸಾಮಾನ್ಯರು!

ಸುಳ್ಯ: ದೇಶದಾದ್ಯಂತ ದಿನದಿಂದ ದಿನಕ್ಕೆ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳು ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆ ಮಾಡುತ್ತಿವೆ. ಅದರಲ್ಲೂ ವಿಶೇಷವಾಗಿ ಪ್ರತಿನಿತ್ಯದ ಊಟದ ತಟ್ಟೆಗೆ ಅನಿವಾರ್ಯವಾಗಿರುವ ಅಕ್ಕಿ ಹಾಗೂ ಬೇಳೆ ಕಾಳುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಕುಟುಂಬದ ಮಾಸಿಕ ಬಜೆಟ್ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಆದರೆ, ಆಹಾರ ಹಣದುಬ್ಬರವನ್ನು ಹತೋಟಿಗೆ ತರುವಲ್ಲಿ ಮತ್ತು ಮಾರುಕಟ್ಟೆಯನ್ನು ಸಮರ್ಪಕವಾಗಿ ನಿಯಂತ್ರಿಸುವಲ್ಲಿ ಆಡಳಿತ ನಡೆಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿಗಳು ಸಂಪೂರ್ಣ ವಿಫಲವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಎರಡು ತಿಂಗಳ ಅಂತರದಲ್ಲಿ […]

Read More

ಎನ್ನೆಂಸಿ ವಿಜ್ಞಾನ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಎನ್ನೆಂಸಿ ಸುಳ್ಯ; ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ವಿಜ್ಞಾನ ಸಂಘ ಇದರ 2026-27ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ನಡೆಯಿತು. ಸರಕಾರಿ ಪದವಿ ಕಾಲೇಜು ಸುಳ್ಯ ಇಲ್ಲಿನ ಭೌತ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಮೋನಿಷಾ ಕೆ, ದೀಪ ಬೆಳಗಿ, ವೈಜ್ಞಾನಿಕವಾಗಿ ರಾಸಾಯನಿಕ ವಸ್ತುಗಳನ್ನು ಬಳಸಿ ಕಾಮನ ಬಿಲ್ಲಿನ ಬಣ್ಣಗಳನ್ನು ಉತ್ಪಾದಿಸಿ ವಿನೂತನ ರೀತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ “ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳ ಸಾಧನೆ” ವಿಷಯದ ಕುರಿತಾಗಿ ಬಹಳ […]

Read More

ಅರಂತೋಡು ವಲಯದಲ್ಲಿ ಪವರ್ ಮ್ಯಾನ್ ಕೊರತೆ: ನಿರ್ಲಕ್ಷಿಸಿದರೆ ಮೆಸ್ಕಾಂ ಕಚೇರಿಗೆ ಮುತ್ತಿಗೆ – ಜಿ.ಕೆ. ಹಮೀದ್ ಗೂನಡ್ಕ ಎಚ್ಚರಿಕೆ

ಸುಳ್ಯ/ಸಂಪಾಜೆ: ಸುಳ್ಯ ಮೆಸ್ಕಾಂ ವ್ಯಾಪ್ತಿಯ ಅರಂತೋಡು ವಲಯದಲ್ಲಿ ಪವರ್ ಮ್ಯಾನ್‌ಗಳ (ವಿದ್ಯುತ್ ಸಿಬ್ಬಂದಿ) ತೀವ್ರ ಕೊರತೆ ಎದುರಾಗಿದ್ದು, ಗ್ರಾಮೀಣ ಭಾಗಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಈ ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಅಕ್ಟೋಬರ್ 27ರಂದು ಸುಳ್ಯ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಜಿ.ಕೆ. ಹಮೀದ್ ಗೂನಡ್ಕ ಅವರು ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್‌ಗೆ ಎಚ್ಚರಿಕೆ ನೀಡಿದ್ದಾರೆ. ಪ್ರಮುಖ ಅಂಶಗಳು: ಈ […]

Read More

ಎನ್ನೆಂಸಿ; ವಾರ್ಷಿಕ ಕ್ರೀಡೋತ್ಸವ 2026 ಸುವರ್ಣ ಸಂಭ್ರಮದ ವರ್ಷಕ್ಕೆ ವಿಶೇಷ ಮೆರುಗು

ಸುಳ್ಯ ಅ.13: ನೆಹರೂ ಮೆಮೋರಿಯಲ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟವು ಅಕ್ಟೋಬರ್ 13 ಮಂಗಳವಾರದಂದು ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟವನ್ನು ಎನ್.ಎಂ.ಸಿ.ಯ ಹಿರಿಯ ವಿದ್ಯಾರ್ಥಿ ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇಲ್ಲಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ ಉದ್ಘಾಟಿಸಿ ಮಾತನಾಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿ ಕ್ರೀಡೋತ್ಸವಕ್ಕೆ ಶುಭಹಾರೈಸಿದರು. ನೆಹರೂ ಮೆಮೋರಿಯಲ್ ಕಾಲೇಜಿನ ಸುವರ್ಣ ಸಂಭ್ರಮ ವರ್ಷದ ವಾರ್ಷಿಕ ಕ್ರೀಡೋತ್ಸವದಲ್ಲಿ ಭಾಗವಹಿಸುವುದು ನಮ್ಮೆಲ್ಲರ ಅದೃಷ್ಟ, ಇಲ್ಲಿನ ಉತ್ಸಾಹಿ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಎನ್ ಸಿ ಸಿ ಬ್ಯಾಂಡ್ ಜೊತೆಗಿನ […]

Read More

ಕೆ.ಪಿ.ಸಿ.ಸಿ ಸಂಘಟನಾ ಸೃಜನ್ ಅಭಿಯಾನ್ – 2 ಹಾವೇರಿ ಜಿಲ್ಲಾ ವೀಕ್ಷಕರಾಗಿ ಟಿ.ಎಂ. ಶಹೀದ್ ತೆಕ್ಕಿಲ್ ನೇಮಕ

ಹಾವೇರಿ ಜಿಲ್ಲೆಯ ಎಲ್ಲಾ ಬ್ಲಾಕ್ ಅಧ್ಯಕ್ಷರನ್ನು ಬದಲಾಯಿಸಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಕೆ.ಪಿ.ಸಿ.ಸಿ.ಯ ಸಂಘಟನಾ ಸೃಜನ್ ಅಭಿಯಾನ್ 2 ಇದರ ಹಾವೇರಿ ಜಿಲ್ಲೆಯ ವೀಕ್ಷಕರಾಗಿ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಬಿ.ಕೆ ಹರಿಪ್ರಸಾದ್ ರವರು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಶಹೀದ್ ತೆಕ್ಕಿಲ್ ರವರನ್ನು ನೇಮಕಗೊಳಿಸಿರುತ್ತಾರೆ. ಕೆ.ಪಿ.ಸಿ.ಸಿ ವೀಕ್ಷಕರಾಗಿರುವ ಟಿ.ಎಂ ಶಹೀದ್ ತೆಕ್ಕಿಲ್ ರವರು ಪ್ರಸ್ತುತ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾಗಿ (ಸಚಿವ ದರ್ಜೆ) ಸೇವೆ ಸಲ್ಲಿಸುತ್ತಿದ್ದು, ಇವರು ಸುಳ್ಯ ತಾಲೂಕು, ಜಿಲ್ಲಾ, ರಾಜ್ಯ ಎಸ್.ಎಸ್.ಯು.ಐ […]

Read More

ಸುಳ್ಯ: ಜಯನಗರದಲ್ಲಿ ಪೊಲೀಸ್ ಇಲಾಖೆಯಿಂದ ವಿಶೇಷ ಬೀಟ್ ಮೀಟಿಂಗ್; ಮಾದಕ ವಸ್ತು, ಸೈಬರ್ ಕ್ರೈಮ್ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಜಾಗೃತಿ

ಸುಳ್ಯ: ಸಾರ್ವಜನಿಕರಲ್ಲಿ ಕಾನೂನು ಹಾಗೂ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸುಳ್ಯ ಪೊಲೀಸ್ ಇಲಾಖೆಯ ವತಿಯಿಂದ ಸುಳ್ಯದ ಜಯನಗರದಲ್ಲಿ ವಿಶೇಷ ಬೀಟ್ ಸಭೆಯನ್ನು ನಡೆಸಲಾಯಿತು. ಸ್ಥಳೀಯರು ಹಾಗೂ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಪ್ರಸ್ತುತ ಸಮಾಜವನ್ನು ಕಾಡುತ್ತಿರುವ ಪ್ರಮುಖ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ವಿಷಯಗಳು: ಉಪಸ್ಥಿತರಿದ್ದ ಗಣ್ಯರು: ಈ ಸಭೆಯಲ್ಲಿ ಸುಳ್ಯ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪನಿರೀಕ್ಷಕರು (PSI) ಆದ ಉದಯ […]

Read More

ಪರೀಕ್ಷಾ ಭದ್ರತೆಯ ನೆಪದಲ್ಲಿ ಮಹಿಳಾ ಅಭ್ಯರ್ಥಿಗಳ ಘನತೆಗೆ ಧಕ್ಕೆ ತರುವುದು ಅಕ್ಷಮ್ಯ: ವಿಎಒ ಪರೀಕ್ಷೆಯ ಅನ್ಯಾಯದ ವಿರುದ್ಧ ಆಶಾ ಮೂಡಿಗೆರೆ ಆಕ್ರೋಶ

ಬೆಂಗಳೂರು: ದಿನಾಂಕ 04-10-2026ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಗ್ರಾಮ ಆಡಳಿತಾಧಿಕಾರಿ (VAO) ನೇಮಕಾತಿ ಪರೀಕ್ಷೆಯ ಸಂದರ್ಭದಲ್ಲಿ, ಹಿಜಾಬ್ ಹಾಗೂ ವೇಲ್ ಧರಿಸಿದ್ದ ಮಹಿಳಾ ಪರೀಕ್ಷಾರ್ಥಿಗಳನ್ನು ತಡೆದು ನಿಲ್ಲಿಸಿ, ಗೊಂದಲ ವಾತಾವರಣ ಸೃಷ್ಟಿಸುವ ಮೂಲಕ ಮಾನಸಿಕ ಕಿರುಕುಳ ನೀಡಿರುವುದನ್ನುವಿಮೆನ್ ಇಂಡಿಯಾ ಮೂವ್ಮೆಂಟ್ ನ ರಾಜ್ಯ ಕಾರ್ಯದರ್ಶಿ ಆಶಾ ಮೂಡಿಗೆರೆ ತೀವ್ರವಾಗಿ ಖಂಡಿಸಿದ್ದಾರೆ.ಪರೀಕ್ಷಾ ಕೇಂದ್ರಗಳಲ್ಲಿ ಉಂಟಾದ ಈ ಅವ್ಯವಸ್ಥೆ ಮತ್ತು ಅಭ್ಯರ್ಥಿಗಳ ಮೇಲಾದ ಮಾನಸಿಕ ಒತ್ತಡದ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ಮುಂಬರುವ ಪರೀಕ್ಷೆಗಳಲ್ಲಿ ಇಂತಹ […]

Read More

ನೆಹರು ಮೆಮೋರಿಯಲ್ ಕಾಲೇಜು: ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ವಾಣಿಜ್ಯ ಸಂಘದ ವತಿಯಿಂದ “ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳಲ್ಲಿ ಉದಯೋನ್ಮುಖ ಕೌಶಲ್ಯಗಳು ಹಾಗೂ ವೃತ್ತಿ ಅವಕಾಶಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ಅಕ್ಟೋಬರ್ 9ರಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ. ವಹಿಸಿದ್ದರು. ಕರ್ನಾಟಕ ಬ್ಯಾಂಕ್‌ ಬೆಂಗಳೂರಿನ ಎಚ್‌ಬಿಆರ್ ಲೇಔಟ್ ಶಾಖೆಯ ಹಿರಿಯ ವ್ಯವಸ್ಥಾಪಕರಾದ ಶ್ರೀ ಗುರುಪ್ರಸಾದ್ ಎಸ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಬ್ಯಾಂಕಿಂಗ್ ಮತ್ತು ಹಣಕಾಸು […]

Read More

ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ‘ಮಂಡಿ ಹೌಸ್ ಚಲೊ’ ಪ್ರತಿಭಟನೆ

ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಣಕಹಳೆ: ಮಂಡಿ ಹೌಸ್‌ನಲ್ಲಿ ಮುಗಿಲು ಮುಟ್ಟಿದ ಧಿಕ್ಕಾರದ ಕೂಗು ನವದೆಹಲಿ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳು, ತಾರತಮ್ಯ ಧೋರಣೆ ಹಾಗೂ ಜ್ಞಾನೇಶ್ ಕುಮಾರ್ ಅವರ ನಡವಳಿಕೆ ವಿರುದ್ಧ ಕರ್ನಾಟಕ ಕಾಂಗ್ರೆಸ್ ನಾಯಕರು ದೇಶದ ರಾಜಧಾನಿ ನವದೆಹಲಿಯಲ್ಲಿ ರಣಕಹಳೆ ಮೊಳಗಿಸಿ ಬೃಹತ್ ಪ್ರತಿಭಟನೆ ನಡೆಸಿದರು. ನವದೆಹಲಿಯ ಭಗವಾನ್ ದಾಸ್ ರಸ್ತೆಯಲ್ಲಿರುವ ಹಿಮಾಚಲ ಪ್ರದೇಶ ಭವನದ ಬಳಿ ಜಮಾಯಿಸಿದ ನಾಯಕರು ಹಾಗೂ ನೂರಾರು ಕಾರ್ಯಕರ್ತರು, ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಅವರ […]

Read More