ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ!

Bengaluru: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು. ನನಗೆ ಈಗ 80 ವರ್ಷ ವಯಸ್ಸು ಆಗಿದೆ ಹಾಗಾಗಿ ಮುಂದಿನ ಚುನಾವಣೆಗೆ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಇನ್ನೂ ದೆಹಲಿಯಲ್ಲಿ ಸೋನಿಯಾ ಗಾಂಧಿ ಪುಸ್ತಕ ರಿಲೀಸ್ ಕಾರ್ಯಕ್ರಮದಲ್ಲಿ ಹಿಂದೆ ಕುಳಿತ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸೋನಿಯಾ ಗಾಂಧಿಯವರ ಪುಸ್ತಕ ರಿಲೀಸಿಗೆ ನಾನು ತಡವಾಗಿ ಹೋಗಿದ್ದೆ, ತಡವಾಗಿ ಹೋಗಿದ್ದಕ್ಕೆ ನಾನು ಹಿಂದೆ ಕುಳಿತೆ, ಈಗಾಗಲೇ ಈ […]

Read More

ಸುಳ್ಯ: ಮೇಯಲು ಬಿಟ್ಟಿದ್ದ ದನಗಳ ಕಳ್ಳತನಕ್ಕೆ ಯತ್ನ; ಇಬ್ಬರ ಸೆರೆ, ಕೇರಳಕ್ಕೆ ಸಾಗಿಸಲು ಸಂಚು!

ಸುಳ್ಯದ ಗಾಂಧಿನಗರದಲ್ಲಿ ಮೇಯಲು ಬಿಟ್ಟಿದ್ದ ಜಾನುವಾರುಗಳನ್ನು ಕಳ್ಳತನ ಮಾಡಿ ಕೇರಳ ರಾಜ್ಯಕ್ಕೆ ಸಾಗಿಸಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ನವೆಂಬರ್ 18ರ ಮುಂಜಾನೆ ಯಶಸ್ವಿಯಾಗಿ ಬಂಧಿಸಿದ್ದಾರೆ. ಏಣಾವರದ ಹಾಕಿರ್.ಎ (28) ಹಾಗೂ ಅರಂಬೂರಿನ ಸಂಶುದ್ದೀನ್.ಎಸ್.ಎಂ. (25) ಬಂಧಿತ ಆರೋಪಿಗಳಾಗಿದ್ದಾರೆ. ಗಾಂಧಿನಗರ ಶಾಲೆಯ ಮೈದಾನದಲ್ಲಿ ಇಬ್ಬರು ವ್ಯಕ್ತಿಗಳು ಜಾನುವಾರುಗಳ ಕುತ್ತಿಗೆಗೆ ಹಗ್ಗ ಕಟ್ಟಿ, ಮೈದಾನದಲ್ಲಿದ್ದ ಕಂಬಕ್ಕೆ ಕಟ್ಟಿಹಾಕಿ ಕಳ್ಳತನ ಮಾಡಿ ಕೇರಳ ರಾಜ್ಯಕ್ಕೆ ಸಾಗಿಸಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸುಳ್ಯ ಪೊಲೀಸ್ ಠಾಣೆಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ […]

Read More

ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ 20ನೇ ಸ್ವಲಾತ್ ವಾರ್ಷಿಕ;‌ಡಿ.14, 15 ರಂದು  ವಿವಿಧ ಧಾರ್ಮಿಕ ಕಾರ್ಯಕ್ರಮ

ಪೈಚಾರ್: ಅಲ್-ಅಮೀನ್ ಯೂತ್ ಸೆಂಟರ್ (ರಿ.) ಪೈಚಾರ್ ಇದರ ವತಿಯಿಂದ 20ನೇ ಸ್ಪಲಾತ್ ವಾರ್ಷಿಕ ಕಾರ್ಯಕ್ರಮವು ಬದ್ರಿಯಾ ನಗರ ಪೈಚಾರ್‌ನಲ್ಲಿ ಡಿಸೆಂಬರ್ 14 ಮತ್ತು 15, 2026 ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ಡಿಸೆಂಬರ್ 14 (ಸೋಮವಾರ):ದುಆ: ಸುಳ್ಯದ ಸಯ್ಯಿದ್ ಕುಂಞಿಕೋಯ ತಂಜಲ್ ಸಅದಿ ಅವರು ದುಆ ನೆರವೇರಿಸಲಿದ್ದಾರೆ. ಕೇರಳ ಇಡುಕ್ಕಿಯ ಅಲ್ ಹಾಫಿಲ್ ಅನ್ವರ್ ಮನ್ನಾನಿ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಡಿಸೆಂಬರ್ 15 (ಮಂಗಳವಾರ): ಮುನೀರ್ ಸಅದಿ ಅಲ್ ಅರ್ಶದಿ ನೆಲ್ಲಿಕುನ್ನು […]

Read More

ಮಾನವೀಯ ಸೇವೆಯೇ ಶ್ರೇಷ್ಠ ಸೇವೆ: ರಫಾ ಫೌಂಡೇಶನ್ ಹಾಗೂ ಅಲ್ ಫಲಾಹ್ ಯಂಗ್ ಮೆನ್ಸ್ ಅಸೋಸಿಯೇಷನ್ ವತಿಯಿಂದ ಬೃಹತ್ ರಕ್ತದಾನ ಶಿಬಿರ..!

ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಸೇವೆಯ ಉದ್ದೇಶದೊಂದಿಗೆ ರಫಾ ಫೌಂಡೇಶನ್ ಮತ್ತು ಅಲ್ ಫಲಾಹ್ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.ಬೆಳ್ಳಾರೆ ಜುಮಾ ಮಸೀದಿಯ ಖತೀಬಾರದ ನಸೀಹ್ ದಾರಿಮಿ ದುವಾದೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿ ಮಾತನಾಡಿ, ರಕ್ತದಾನವು ಜೀವ ಉಳಿಸುವ ಮಹತ್ಕಾರ್ಯವಾಗಿದ್ದು, ಒಬ್ಬ ವ್ಯಕ್ತಿ ಮಾಡುವ ರಕ್ತದಾನದಿಂದ ಮತ್ತೊಬ್ಬರಿಗೆ ಹೊಸ ಜೀವನ ನೀಡಲು ಸಾಧ್ಯವಿದೆ. ರಕ್ತಕ್ಕೆ ಪರ್ಯಾಯವಿಲ್ಲದ ಕಾರಣ ಯುವಜನತೆ ಸ್ವಯಂಪ್ರೇರಿತವಾಗಿ ರಕ್ತದಾನದಲ್ಲಿ ತೊಡಗಿಸಿಕೊಳ್ಳಬೇಕು ಎಂದು […]

Read More

ಮಂಗಳೂರು: ನ.23 ರಂದು ನಡೆಯಲಿರುವ ಸಲೀಂ ಅಹಮದ್ ಸಾರ್ವಜನಿಕ ಸನ್ಮಾನ

ಗುರುಪುರದಲ್ಲಿ ಆಮಂತ್ರಣ ಪತ್ರ ಬಿಡುಗಡೆ ಮಂಗಳೂರು: ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ರವರ ಸಾರ್ವಜನಿಕ ಸನ್ಮಾನ ಸಮಿತಿ ವತಿಯಿಂದ ದಿನಾಂಕ ನವೆಂಬರ್ 23ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ (ಟೌನ್ ಹಾಲ್) ಜರುಗಲಿರುವ ಸಾರ್ವಜನಿಕ ಸನ್ಮಾನ ಸಮಾರಂಭದ ಆಮಂತ್ರಣ ಪತ್ರವನ್ನು ಇಂದು ನ.17 ರಂದು ಗುರುಪುರದಲ್ಲಿ ಬಿಡುಗಡೆಗೊಳಿಸಲಾಯಿತು.ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮರಾಜ್ ಪೂಜಾರಿ ಅವರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರಿಗೆ ಆಮಂತ್ರಣ ಪತ್ರವನ್ನು ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಬಿಡುಗಡೆ […]

Read More

ಡಾ. ಎಸ್.ವಿ. ಪ್ರಸಾದ್ ಅವರಿಗೆ ಪಿಡಿಎಫ್ ಪ್ರಮಾಣಪತ್ರ

ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ಪುತ್ತೂರಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (ಡೇಟಾ ಸೈನ್ಸ್) ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಎಸ್.ವಿ. ಪ್ರಸಾದ್ ಅವರು ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದಿಂದ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ (PDF) ಪ್ರಮಾಣಪತ್ರ ವನ್ನು ಪಡೆದಿದ್ದಾರೆ.ಅವರು ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ. ಸತ್ಯನಾರಾಯಣ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಂಶೋಧನೆ ನಡೆಸಿದ್ದಾರೆ. “ಡಿಸೈನ್ ಅಂಡ್ ಇಂಪ್ಲಿಮೆಂಟೇಷನ್ ಆಫ್ ಹೈ ಪರ್ಫಾರ್ಮೆನ್ಸ್ ಫ್ಲೋಟಿಂಗ್ ಪಾಯಿಂಟ್ ಮಲ್ಟಿಪ್ಲಯರ್ಸ್ […]

Read More

ಕುಂಬಳೆ: ರೋಮಾಂಚನಕಾರಿ ‘ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ

ದಕ್ಷಿಣ ಭಾರತದ ನಾನಾ ರಾಜ್ಯಗಳ ಸ್ಪರ್ಧಿಗಳ ಉತ್ಸಾಹಭರಿತ ಭಾಗಿ,  ಗ್ರಾಮೀಣ ಸಂಸ್ಕೃತಿಯ ಸೊಗಡು ಸಾರಿದ ರಾಷ್ಟ್ರಮಟ್ಟದ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಟಿ.ಎಂ. ಶಾಹೀದ್ ತೆಕ್ಕಿಲ್ ಹರ್ಷ ಕುಂಬಳೆ:  ಕಾಸರಗೋಡು ಜಿಲ್ಲೆಯ ಕುಂಬ್ಳೆ ಸಮೀಪದ ಅರಿಕಲ್ ಶಿರಿಯಾ ನದಿಯ ದಂಡೆಯಲ್ಲಿ ರಾಷ್ಟ್ರ ಮಟ್ಟದ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯನ್ನು ನ.15 ರಂದು ನಡೆಯಿತು. ಕಾಸರಗೋಡು ಜಿಲ್ಲಾ ಟೂರಿಸಂ ಪ್ರಮೋಷನ್ ಕೌನ್ಸಿಲ್, ಭಾರತ ಸರ್ಕಾರ ಪ್ರವಾಸೋದ್ಯಮ ಇಲಾಖೆ ಇದರ ಪ್ರಾಯೋಜಕತ್ವದಲ್ಲಿ ಕೇರಳ ಸರಕಾರ, ಕಾಸರಗೋಡು ತಾಲ್ಲೂಕು […]

Read More

ಬಾಳುಗೋಡು: ಪದಕ ನೂತನ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ.

Baalugodu: ಕಾಂಗ್ರೆಸ್ ಆಡಳಿತದಲ್ಲಿ ನಿರಂತರ ಅಭಿವೃದ್ಧಿ – ಭರತ್ ಮುಂಡೋಡಿ.ಸುಳ್ಯ ತಾಲೂಕು ಬಾಳುಗೋಡು ಗ್ರಾಮದ ಪದಕ ಮುಳುಗು ಸೇತುವೆ ಇದ್ದಲ್ಲಿ ನೂತನ ಸೇತುವೆ ನಿರ್ಮಾಣಕ್ಕಾಗಿ ಕರ್ನಾಟಕ ಘನ ರಾಜ್ಯ ಸರ್ಕಾರದ ಲೋಕೋಪಯೋಗಿ ಸಚಿವ ಶ್ರೀ ಸತೀಶ್ ಜಾರಕಿಹೊಳಿ ಅವರು 1.75ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು, ಈ ಸೇತುವೆ ನಿರ್ಮಾಣಕ್ಕಾಗಿ ಬಾಳುಗೋಡು ಗ್ರಾಮ ಕಾಂಗ್ರೆಸ್ ಕಾರ್ಯಕರ್ತರ ಬೇಡಿಕೆಯ ಮೇರೆಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ ರಾಮಕುಂಜ ನಿರಂತರ ಪ್ರಯತ್ನ ನಡೆಸಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ […]

Read More

ಕಡಬ: ಗೂಡ್ಸ್ ಆಪೆ-ಕಾರು ಮಧ್ಯೆ ಢಿಕ್ಕಿ: ಓರ್ವ ಮೃತ್ಯು, ಇನ್ನೋರ್ವ ಗಂಭೀರ

Kadaba: , ನ.14: ಹಣ್ಣುಹಂಪಲು ಸಾಗಾಟದ ಗೂಡ್ಸ್ ಆಪೆ ವಾಹನ ಹಾಗೂ ಕಾರೊಂದರ ನಡುವೆ ಅಪಘಾತ ಸಂಭವಿಸಿದ ಪರಿಣಾಮ ತಮೀಮ್ ಎಂಬ ಯುವಕ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಕಡಬ ಆಲಂಕಾರು ಸಮೀಪದ ನೆಕ್ಕರೆ ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಇಂದು ಬೆಳಗ್ಗೆ ಮಂಗಳೂರಿನಿಂದ ಕಡಬದ ಕಳಾರಕ್ಕೆ ಹಣ್ಣು ಹಂಪಲು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಮತ್ತು ವಿರುದ್ಧ ದಿಕ್ಕಿನಿಂದ ಬಂದ ಕಾರು ನಡುವೆ ಢಿಕ್ಕಿ ಸಂಭವಿಸಿದೆ. ಇದರಿಂದ ಪಿಕಪ್ ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. […]

Read More

ಸುಳ್ಯ ತಾಲೂಕು ಪಂಚಾಯತ್‌ನಲ್ಲಿ ಉದ್ಯೋಗ ಮೇಳ ಉದ್ಘಾಟನೆ: 38ಕ್ಕೂ ಅಧಿಕ ಕಂಪನಿಗಳ ಭಾಗಿ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಮಂಗಳೂರು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ದ.ಕ. ಜಿಲ್ಲೆ, ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಸುಳ್ಯ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸುಳ್ಯ ತಾಲೂಕು ಪಂಚಾಯತ್‌ನಲ್ಲಿ ಬೃಹತ್ ಉದ್ಯೋಗ ಮೇಳವು ನಡೆಯಿತು.ಕರ್ನಾಟಕ ಸರ್ಕಾರದ ಕಾರ್ಮಿಕ ಕನಿಷ್ಠ ವೇತನ ಸಮಿತಿ ಅಧ್ಯಕ್ಷ (ಸಚಿವ ಸ್ಥಾನಮಾನ) ಟಿ.ಎಂ. ಶಾಹೀದ್ ತೆಕ್ಕಿಲ್ ಅವರು ದೀಪ ಬೆಳಗಿ […]

Read More