ಮಂಗಳೂರು ವಿಶ್ವವಿದ್ಯಾಲಯ ಮಹಿಳಾ ಕಬಡ್ಡಿಯಲ್ಲಿ ಎನ್‌ಎಂಸಿ ದ್ವಿತೀಯ ಸ್ಥಾನ

ಕು. ವೀಕ್ಷಾಳಿಗೆ ಅತ್ಯುತ್ತಮ ಆಲ್‌ರೌಂಡ್ ಆಟಗಾರ್ತಿ ಪ್ರಶಸ್ತಿ ಸುಳ್ಯ: ಮಂಗಳೂರು ವಿಶ್ವವಿದ್ಯಾಲಯದ ಅಂತರ್‌ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಮಹಿಳಾ ಕಬಡ್ಡಿ ತಂಡವು ಪ್ರಿ-ಚಾಂಪಿಯನ್‌ಶಿಪ್ ಹಂತದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಧರ್ಮಸ್ಥಳದ ಎಸ್‌ಡಿಎಂ ಕಾಲೇಜು, ಉಜಿರೆ ಇಲ್ಲಿ ಸೆಪ್ಟೆಂಬರ್ 29ರಿಂದ 30ರವರೆಗೆ ನಡೆದ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಎನ್‌ಎಂಸಿ ಮಹಿಳಾ ತಂಡವು ಉತ್ತಮ ಪ್ರದರ್ಶನ ನೀಡಿ ಪ್ರಿ-ಚಾಂಪಿಯನ್‌ಶಿಪ್ ಹಂತದ ಫೈನಲ್‌ಗೆ ಪ್ರವೇಶಿಸಿತು. ಫೈನಲ್ ಪಂದ್ಯದಲ್ಲಿ ತಂಡವು ದ್ವಿತೀಯ ಸ್ಥಾನವನ್ನು ಗಳಿಸಿತು.ತಂಡದ ಆಟಗಾರ್ತಿ ಹಾಗೂ […]

Read More

ಪೈಚಾರು ಶಾಂತಿನಗರ ಕ್ರಾಸ್ ಬಳಿ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಸವಾರರಿಗೆ ಗಾಯ

ಸುಳ್ಯ: ಇಲ್ಲಿನ ಪೈಚಾರು ಸಮೀಪದ ಶಾಂತಿನಗರ ಕ್ರಾಸ್ ರಸ್ತೆಯಲ್ಲಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸವಾರರು ಗಾಯಗೊಂಡ ಘಟನೆ ನಡೆದಿದೆ. ಸುಳ್ಯದಿಂದ ಪೈಚಾರು ಕಡೆಗೆ ಬರುತ್ತಿದ್ದ ಬೈಕ್ ಹಾಗೂ ಪೈಚಾರು ಕಡೆಯಿಂದ ಸುಳ್ಯ ನಗರದತ್ತ ಹೋಗುತ್ತಿದ್ದ ಇನ್ನೊಂದು ಬೈಕ್ ನಡುವೆ ಶಾಂತಿನಗರ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಎರಡೂ ಬೈಕ್‌ಗಳು ರಸ್ತೆಗೆ ಉರುಳಿ ಬಿದ್ದಿದ್ದು, ವಾಹನಗಳು ಭಾಗಶಃ ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ

Read More

ಅರಂತೋಡು ನುಸ್ರತುಲ್ ಇಸ್ಲಾಂ ಮದರಸದಲ್ಲಿ ಆದರ್ಶ ಕ್ಯಾಂಪೇನ್

ಎಸ್.ಕೆ.ಎಸ್.ಬಿ.ವಿ, ಅರಂತೋಡು ಶಾಖೆ ಇದರ ಆಶ್ರಯದಲ್ಲಿ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಆದರ್ಶ ಕ್ಯಾಂಪೇನ್ ಕಾರ್ಯಕ್ರಮವು ಅ.4 ರಂದು ಅರಂತೋಡು ನುಸ್ರತುಲ್ ಇಸ್ಲಾಂ ಮದರಸದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅರಂತೋಡು ಬದ್ರಿಯಾ ಜುಮಾಮಸೀದಿ ಖತೀಬರಾದ ಬಹು ಆಸಿಫ್ ಅಝ್ ಹರಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಅಜ್ಜಾವರ ಮುಹಿದ್ಧೀನ್ ಜುಮಾ ಮಸೀದಿ ಖತೀಬರಾದ ಬಹು ಹಸೈನಾರ್ ಫೈಝಿ ಮಾತನಾಡಿ ಸತ್ಯ ನೈತಿಕತೆ, ದಯೆ ಹಾಗೂ ಸನ್ಮಾರ್ಗದಹಾದಿಯಲ್ಲಿ ಮುನ್ನಡೆಯಬೇಕೆಂದರು ಜಮಾಅತ್ ಅಧ್ಯಕ್ಷ ಅಸ್ರಫ್ ಗುಂಡಿ ಅಧ್ಯಕ್ಷತೆ ವಹಿಸಿದರು. ಸದರ್ ರವೂಫ್ […]

Read More

ಅರಂತೋಡು: ಅರಂತೋಡು -ತೊಡಿಕಾನ ಗ್ರಾಮ ಕಾಂಗ್ರೆಸ್ ಸಭೆ

ಅರಂತೋಡು ಮತ್ತು ತೊಡಿಕಾನ ಗ್ರಾಮ ಕಾಂಗ್ರೆಸ್ ಸಮಿತಿ ಸಭೆ ಅರಂತೋಡು ತೆಕ್ಕಿಲ್ ಸಭಾ ಭವನದಲ್ಲಿ ಆ.4ರಂದು ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅಧ್ಯಕ್ಷತೆ ವಹಿಸಿ ಮಾತನಾಡಿ ಪಕ್ಷದ ಸಂಘಟನೆಯಲ್ಲಿ ಬೂತ್ ಮಟ್ಟದಿಂದ ತೊಡಗಿಸಿಕೊಳ್ಳಬೇಕು, ಮುಂದಿನ ಚುನಾವಣೆಗೆ ತಯಾರಿಯಾಗುವ ಹಿನ್ನೆಲೆಯಲ್ಲಿ ಮಾರ್ಗದರ್ಶನ ನೀಡಿದರು. ಪ್ರತೀ ಕಾರ್ಯಕರ್ತರು ಧೈರ್ಯ ದಿಂದ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳಿ ನಿಮ್ಮ ಜೊತೆ ಬ್ಲಾಕ್ ಕಾಂಗ್ರೆಸ್ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದರು.ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ […]

Read More

ಮಾರ್ಕೆಟ್ ಸುಳ್ಯ ಫುಟ್‌ಬಾಲ್ ಪಂದ್ಯಾಕೂಟ; ಜೆಬಿ ಯುನೈಟೆಡ್’ಗೆ ಚಾಂಪಿಯನ್ ಹಾಗೂ ರನ್ನರ್ ಅಪ್ ಪ್ರಶಸ್ತಿ

ಅರಂಬೂರಿನ ಟರ್ಫ್ ಮೈದಾನದಲ್ಲಿ ಮಾರ್ಕೆಟ್ ಸುಳ್ಯ ಎಫ್‌ಸಿ ಆಶ್ರಯದಲ್ಲಿ ಜರುಗಿದ ರೋಮಾಂಚಕ 5 ಜನರ ಫುಟ್‌ಬಾಲ್ ಪಂದ್ಯಾವಳಿಯು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಕಳೆದ ಎರಡು ಆದಿತ್ಯವಾರಗಳಲ್ಲಿ  ನಡೆದ ಈ ಪಂದ್ಯಾವಳಿಯಲ್ಲಿ, ಸೆ.27  ಆದಿತ್ಯವಾರ ನಡೆದ ಅಂಡರ್-18 ವಿಭಾಗದಲ್ಲಿ ಜೆಬಿ ಯುನೈಟೆಡ್ ‘ಬಿ’ ತಂಡವು ಫೈನಲ್ ಪ್ರವೇಶಿಸಿತ್ತು. ತದನಂತರ ನಿನ್ನೆ ಅ.4 ರಂದು ನಡೆದ ಅಂಡರ್-22 ವಿಭಾಗದ ಪಂದ್ಯದಲ್ಲಿ ಜೆಬಿ ಯುನೈಟೆಡ್ ‘ಎ’ ತಂಡವು ಫೈನಲ್ ತಲುಪಿತು. ಇದರೊಂದಿಗೆ ನಿನ್ನೆ ನಡೆದ ರೋಚಕ ಅಂತಿಮ ಹಣಾಹಣಿಯಲ್ಲಿ ಜೆಬಿ ಯುನೈಟೆಡ್ […]

Read More

ಸುಳ್ಯದಲ್ಲಿ ಅಕ್ಟೋಬರ್ 18 ರಂದು ‘ಫ್ರೆಂಡ್ಸ್ ಟ್ರೋಫಿ ಲೀಗ್’ ಫುಟ್ಬಾಲ್ ಪಂದ್ಯಾಟ; ಅ. 5 ರಂದು ಮೆಗಾ ಹರಾಜು ಪ್ರಕ್ರಿಯೆ

ಸುಳ್ಯ: ಫ್ರೆಂಡ್ಸ್ ಸುಳ್ಯ (Friends Sullia) ವತಿಯಿಂದ ಕ್ರೀಡಾಭಿಮಾನಿಗಳನ್ನು ರಂಜಿಸಲು ಪ್ರತಿಷ್ಠಿತ ‘ಫ್ರೆಂಡ್ಸ್ ಟ್ರೋಫಿ ಲೀಗ್ – ಸೀಸನ್ 1’ (Friends Trophy League – Season 1) ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಪಂದ್ಯಾಟವು 2026ರ ಅಕ್ಟೋಬರ್ 18, ಭಾನುವಾರದಂದು ಸುಳ್ಯದ ಗಾಂಧಿನಗರ ಶಾಲಾ ಮೈದಾನದಲ್ಲಿ ಜರುಗಲಿದೆ. ಪಂದ್ಯಾವಳಿಯ ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ನೀಡಲಾಗುತ್ತಿದ್ದು, ವಿವರಗಳು ಹೀಗಿವೆ: ಅಕ್ಟೋಬರ್ 5 ರಂದು ಮೆಗಾ ಆಕ್ಷನ್ (FTL Mega Auction 2K26): […]

Read More

ಗಾಂಧಿನಗರ ಮುಹಿಯ್ಯದ್ದೀನ್ ಜುಮ್ಮಾ ಮಸೀದಿಯಲ್ಲಿ ಶೇಖ್ ಜೀಲಾನಿ ಸಂಸ್ಮರಣೆ, ರಾತೀಬು ನೇರ್ಚೆ ಹಾಗೂ ಪ್ರಾರ್ಥನಾ ಸಂಗಮ

ಇಸ್ಲಾಂ ಧರ್ಮದ ಮಹಾನ್ ಆಧ್ಯಾತ್ಮಿಕ ಗುರು, ಸುಲ್ತಾನುಲ್ ಅವುಲಿಯಾ ಶೇಖ್ ಮುಹಿಯುದ್ದೀನ್ ಅಬ್ದುಲ್ ಖಾದರ್ ಜೀಲಾನಿ ಅವರ ಸಂಸ್ಮರಣೆಯ ಅಂಗವಾಗಿ ಗಾಂಧಿನಗರದ ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿ ವತಿಯಿಂದ ವಾರ್ಷಿಕ ರಾತೀಬು ನೇರ್ಚೆ ಮತ್ತು ಪ್ರಾರ್ಥನಾ ಸಂಗಮ ಭಕ್ತಿಭಾವದಿಂದ ನೆರವೇರಿತು. ಪ್ರತಿ ವರ್ಷ ಅರಬಿಕ್ ಮಾಸ ರಬೀವುಲ್ ಆಖರ್ 22ರಂದು ಸಾಂಪ್ರದಾಯಿಕವಾಗಿ ಆಯೋಜಿಸಿಕೊಂಡು ಬರುತ್ತಿರುವ ಈ ಪುಣ್ಯ ಕಾರ್ಯಕ್ರಮದ ನೇತೃತ್ವವನ್ನು ಮುಹಿಯ್ಯದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ […]

Read More

ತಿಲಾವಃ ಪ್ರೀ ಸ್ಕೂಲ್‌ನಿಂದ ‘ಸ್ಟೇಟಸ್ ಚಾಲೆಂಜ್‌’; ಗೋಲ್ಡ್ ಕಾಯಿನ್ ಹಾಗೂ ವಿಶೇಷ ಆಫರ್‌ಗಳ ವಿಜೇತರ ಘೋಷಣೆ

ಸುಳ್ಯ: ಸುಳ್ಯ ಗಾಂಧಿನಗರದ KA ನಾಲೆಡ್ಜ್ ಸೆಂಟರ್‌ನ ತಿಲಾವಃ ಪ್ರೀ ಸ್ಕೂಲ್ ಆಯೋಜಿಸಿದ್ದ ‘ಸ್ಟೇಟಸ್ ಚಾಲೆಂಜ್’ ನಲ್ಲಿ ಟೋಕನ್ ಸಂಖ್ಯೆ 308-ಹಸೀಬಾ ಜುನೈದ್ ಹಳೆಗೇಟು ಚಿನ್ನದ ನಾಣ್ಯದ ಬಹುಮಾನವನ್ನು ಪಡೆದುಕೊಂಡಿದ್ದಾರೆ.ಲಕ್ಕಿ ಡ್ರಾ ಮೂಲಕ ಆಯ್ಕೆಯಾದ 10 ಕುಟುಂಬಗಳ ಮಕ್ಕಳಿಗೆ ಪ್ರವೇಶಾತಿ ಶುಲ್ಕದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ,20 ಕುಟುಂಬಗಳ ಮಕ್ಕಳಿಗೆ ಶೇಕಡಾ 35 ರಷ್ಟು ರಿಯಾಯಿತಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಶೇಕಡಾ 15 ರಷ್ಟು ಪ್ರವೇಶಾತಿ ರಿಯಾಯಿತಿ ಲಭ್ಯವಾಗಲಿದೆ.ಮಕ್ಕಳ ಬಾಲ್ಯವು ಕೇವಲ ಆಟಕ್ಕಷ್ಟೇ ಸೀಮಿತವಾಗಿರದೆ, ಅವರ […]

Read More

ಎಂಆರ್‌‌ಪಿಎಲ್‌ಗೆ ಟಿ.ಎಂ. ಶಾಹಿದ್ ತೆಕ್ಕಿಲ್ ಭೇಟಿ

ಕಾರ್ಮಿಕರ ಮತ್ತು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಲು ಸೂಚನೆ ಮಂಗಳೂರು: ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಘಟಕದಲ್ಲಿ ಇತ್ತೀಚೆಗೆ ನಡೆದ ಸ್ಫೋಟದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ (ಸಚಿವ ದರ್ಜೆ) ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಘಟನಾ ಸ್ಥಳವನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಘಟಕದಲ್ಲಿ ದುಡಿಯುವ ಕಾರ್ಮಿಕರ ಹಿತರಕ್ಷಣೆ ಮತ್ತು ಸಾರ್ವಜನಿಕರ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು. ಕೈಗಾರಿಕಾ ಘಟಕದಲ್ಲಿ […]

Read More

ಬರಕಾ ಇಂಟರ್‌ನ್ಯಾಷನಲ್ ಸ್ಕೂಲ್ ಅಂಡ್ ಕಾಲೇಜು: ಪಿಯುಸಿ ವಿದ್ಯಾರ್ಥಿನಿಯರಿಗೆ ರಫೀಕ್ ಮಾಸ್ಟರ್ ಅವರಿಂದ ಪ್ರೇರಣಾದಾಯಕ ಉಪನ್ಯಾಸ

ಮಂಗಳೂರು: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಬರಕಾ ಇಂಟರ್‌‌ನ್ಯಾಷನಲ್ ಸ್ಕೂಲ್ ಅಂಡ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿನಿಯರಿಗಾಗಿ ಖ್ಯಾತ ಮಾರ್ಗದರ್ಶಕ ರಫೀಕ್ ಮಾಸ್ಟರ್ ಅವರಿಂದ “ನಿಮ್ಮೊಳಗಿನ ಶಕ್ತಿ – ಪ್ರೇರಣೆ ಮತ್ತು ಕಲಿಕೆಯ ಒಂದು ದಿನ” ಎಂಬ ವಿಷಯದ ಕುರಿತು ವಿಶೇಷ ಪ್ರೇರಣಾದಾಯಕ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಫೀಕ್ ಮಾಸ್ಟರ್ ಅವರು, ಜೀವನದಲ್ಲಿ ಉನ್ನತ ಯಶಸ್ಸು ಗಳಿಸಲು ಆತ್ಮವಿಶ್ವಾಸ, ಸ್ವಯಂ ನಂಬಿಕೆ, ಕಠಿಣ ಪರಿಶ್ರಮ ಹಾಗೂ ನಿರಂತರ ಅಭ್ಯಾಸ ಅತ್ಯಂತ ಅಗತ್ಯ ಎಂದು ಒತ್ತಿ ಹೇಳಿದರು. […]

Read More