ಸುಳ್ಯ: ಅರಂಬೂರಿನ ನಿವಾಸಿ ಅಝೀಝ್ ಸಾಹೇಬ್ ಅರುಂಬೂರು (87) ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು (ನವೆಂಬರ್ 10, 2026) ಬೆಳಗಿನ ಜಾವ 1:40 ರ ಸುಮಾರಿಗೆ ನಿಧನರಾಗಿದ್ದಾರೆ.
ಮೃತರು ಅಡುಗೆ ಗಫೂರ್ ಹಾಗೂ ಫಯಾಝ್ ಅರಂಬೂರು ಅವರ ತಂದೆಯಾಗಿದ್ದಾರೆ. ಇವರು 8 ಜನ ಮಕ್ಕಳು ಹಾಗೂ ಅಪಾರ ಮೊಮ್ಮಕ್ಕಳು ಮತ್ತು ಬಂಧು-ಬಳಗವನ್ನು ಅಗಲಿದ್ದಾರೆ.
ಜನಾಝ ನಮಾಝ್ ಮತ್ತು ದಫನ ಕಾರ್ಯ ವಿವರ:
ಮೃತರ ಅಂತಿಮ ದಫನ ಕಾರ್ಯ ಹಾಗೂ ಜನಾಝ ನಮಾಝ್ ಇಂದು ಝುಹರ್ ನಮಾಝ್ ತಕ್ಷಣ ಮೊಹಿಯುದ್ದೀನ್ ಜುಮಾ ಮಸೀದಿ, ಪೆರಾಜೆ ಇಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
