ಸುಳ್ಯ: ಸುಳ್ಯ ಎ.ಪಿ.ಎಂ.ಸಿ.ಯ ಮಾಜಿ ನಿರ್ದೇಶಕರು ಹಾಗೂ ಐವರ್ನಾಡು ಸಹಕಾರಿ ಸಂಘದ ಮಾಜಿ ನಿರ್ದೇಶಕರಾದ, ಐವರ್ನಾಡು ಗ್ರಾಮದ ನೆಕ್ರಿಪ್ಪಾಡಿ ಕುಟುಂಬದ ಹಿರಿಯರಾದ ನೆಕ್ರಪ್ಪಾಡಿ ಕೃಷ್ಣಪ್ಪ ಗೌಡ (88 ವರ್ಷ) ಅವರು ವಯೋಸಹಜ ಅಸೌಖ್ಯದಿಂದ ನವೆಂಬರ್ 10ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಸಾರ್ವಜನಿಕ ಹಾಗೂ ಸಾಮಾಜಿಕ ಸೇವೆ:
ಕೃಷ್ಣಪ್ಪ ಗೌಡರು ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಐವರ್ನಾಡು ಗ್ರಾಮ ಪಂಚಾಯತ್ ಸದಸ್ಯರಾಗಿ ಹಾಗೂ ಪಾಲೆಪ್ಪಾಡಿ ಇವೆರ್ ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ ಸಮಾಜಕ್ಕೆ ಅಮೂಲ್ಯ ಸೇವೆಯನ್ನು ಸಲ್ಲಿಸಿದ್ದರು. ಅಲ್ಲದೆ, ಊರಿನ ಗೌಡರಾಗಿಯೂ ಸೇವೆ ಸಲ್ಲಿಸುತ್ತಾ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಅಗಲಿಕೆ:
ಮೃತರು ಪತ್ನಿ ಶ್ರೀಮತಿ ಸರಸ್ವತಿ, ಪುತ್ರರಾದ ಕರುಣಾಕರ ಗೌಡ ನೆಕ್ರಿಪ್ಪಾಡಿ, ಶಿವರಾಮ ಗೌಡ ನೆಕ್ರಿಪ್ಪಾಡಿ, ಜಯಪ್ರಕಾಶ್ ಗೌಡ ನೆಕ್ರಿಪ್ಪಾಡಿ, ನಂದಕುಮಾರ್ ಗೌಡ, ರಾಜೇಶ್ ನೆಕ್ರಿಪ್ಪಾಡಿ, ಪುತ್ರಿಯರಾದ ಶ್ರೀಮತಿ ಜಯಂತಿ ಕೊಯಿಕುಳಿ, ಶ್ರೀಮತಿ ಪ್ರಶಾಂತಿ ಬರೆಪ್ಪಾಡಿ, ಉಷಾ ಕುಮಾರಿ ಮುಡ್ಡಾಜೆ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ:
ಮೃತರ ಅಂತ್ಯಸಂಸ್ಕಾರದ ಕಾರ್ಯಕ್ರಮವು ಇಂದು ಮಧ್ಯಾಹ್ನ ನೆಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.
