ಉಪ್ಪಿನಂಗಡಿ: ಗಲ್ಫ್ ಫ್ರೆಂಡ್ಸ್ ತೆಕ್ಕಾರು ನೂತನ ಸಮಿತಿ ಅಸ್ತಿತ್ವಕ್ಕೆ

News

ತೆಕ್ಕಾರು, ಸೆ.22: ಗಲ್ಫ್ ಫ್ರೆಂಡ್ಸ್ ತೆಕ್ಕಾರು ಸಂಸ್ಥೆಯ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 20ರಂದು ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಿ, ನೂತನ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು.

ಗೌರವಾನ್ವಿತ ಖಾಸಿಮ್ ಮದನಿ ಉಸ್ತಾದ್ ಅವರ ದುಆ ಹಾಗೂ ಮಾರ್ಗದರ್ಶನದೊಂದಿಗೆ, ಹಿರಿಯರಾದ ಝಕರೀಯಾ ಅವರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ BT ಅಶ್ರಫ್ ಲತೀಫಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಮಸೂದ್ ಹೊಸಮೊಗರು ಹಾಗೂ ಖಜಾಂಚಿಯಾಗಿ ಅಶ್ರಫ್ ಎಂ.ಎಂ. ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಸಮಾಜಮುಖಿ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ನಿಟ್ಟಿನಲ್ಲಿ ನೂತನ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಗಿದೆ.

ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಸಂಸ್ಥೆಯ ಮುಂದಿನ ಎಲ್ಲಾ ಸಮಾಜಮುಖಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಒಗ್ಗಟ್ಟು, ಅಭಿವೃದ್ಧಿ ಮತ್ತು ಬರಕತ್ ಲಭಿಸಲಿ ಎಂದು ಹಾರೈಸಲಾಯಿತು.

Leave a Reply

Your email address will not be published. Required fields are marked *