ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಆಯುಧ ಪೂಜೆ ಮತ್ತು ಶಾರದಾ ಪೂಜೋತ್ಸವ

News

ಎನ್ನೆಂಸಿ; ಕೆವಿಜಿ ಸಮೂಹ ಸಂಸ್ಥೆಗಳ ಮಾತೃಸಂಸ್ಥೆ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅಕ್ಟೋಬರ್ 20 ಮಂಗಳವಾರದಂದು ಆಯುಧ ಪೂಜೆ ಮತ್ತು ಶಾರದಾ ಪೂಜೆ ನಡೆಸಲಾಯಿತು.

ಕಾಲೇಜಿನ ವಿವಿಧ ಘಟಕಗಳ ಕಚೇರಿಗಳು, ವಿಭಾಗಗಳು ಮತ್ತು ಪ್ರಯೋಗಾಲಯಗಳಲ್ಲಿ ಆಯುಧ ಪೂಜೆ; ಕಾಲೇಜು ಮುಂಭಾಗದಲ್ಲಿ ವಾಹನ ಪೂಜೆ ನೆರವೇರಿಸಿ ಮುಖ್ಯ ಕಚೇರಿಯಲ್ಲಿ ಶಾರದಾ ಮಾತೆಗೆ ಪೂಜೆ ಸಲ್ಲಿಸಲಾಯಿತು.

ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ರಿ. ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ ಸಿ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ ಎಂ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಿಥಾಲಿ ಪಿ ರೈ, ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಡಾ. ಮಮತಾ ಕೆ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಧರ್ ವಿ, ಕಛೇರಿ ಅಧೀಕ್ಷಕಿ ಸೌಮ್ಯಶ್ರೀ, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ಉಪನ್ಯಾಸಕೇತರ ವೃಂದದವರು, ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ತರಗತಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಹಕರಿಸಿದರು.

Leave a Reply

Your email address will not be published. Required fields are marked *