ಸುಳ್ಯ: ಹಿರಿಯ ಪತ್ರಕರ್ತ ಜೆ.ಕೆ. ರೈ (54) ನಿಧನ

ಸುಳ್ಯದ ಪ್ರಮುಖ ಹಾಗೂ ಹಿರಿಯ ಪತ್ರಕರ್ತರಲ್ಲೊಬ್ಬರಾದ ಜೆ.ಕೆ. ರೈ (ಜಯಕೃಷ್ಣ ರೈ) ಅವರು ಅಕ್ಟೋಬರ್ 31 ರ ರಾತ್ರಿ 11 ಗಂಟೆಗೆ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು. ನಿವೃತ್ತ ಫಾರೆಸ್ಟರ್, ಸುಳ್ಯದ ಗಾಂಧಿನಗರ ನಿವಾಸಿ ನಾರಾಯಣ ರೈ ಹಾಗೂ ಡಿ. ಕಮಲ ರೈ ದಂಪತಿಯ ಎರಡನೇ ಪುತ್ರರಾದ ಜಿ.ಕೆ. ರೈ ಅವರು ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಆರೋಗ್ಯ ಕ್ಷೀಣಿಸುತ್ತಾ ಬಂದು ಉಸಿರಾಟದ ತೊಂದರೆಗೊಳಗಾಗಿ ಅ. 28 ರಂದು ಕೆ.ವಿ.ಜಿ. […]

Read More

ಆಲೆಟ್ಟಿ: ಯಶಸ್ವಿಯಾಗಿ ಜರುಗಿದ ‘ಪ್ರಜಾಸೇವೆ’ ಕಾರ್ಯಕ್ರಮ

ಭೇದಭಾವವಿಲ್ಲದೆ, ಸಮಾನತೆಯಿಂದ ಬಡವರ ಸೇವೆಯೇ ‘ಪ್ರಜಾಸೇವೆಯ’ ಮುಖ್ಯ ದ್ಯೇಯ – ಟಿ.ಎಂ. ಶಾಹೀದ್ ತೆಕ್ಕಿಲ್ ಸುಳ್ಯ: ಆಲೆಟ್ಟಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ‘ಪ್ರಜಾಸೇವೆ’ ಕಾರ್ಯಕ್ರಮವು ಅ.31 ರಂದು ಯಶಸ್ವಿಯಾಗಿ ಜರುಗಿತು.ಕಾರ್ಯಕ್ರಮದಲ್ಲಿ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ದರ್ಜೆ) ಟಿ.ಎಂ. ಶಾಹೀದ್ ತೆಕ್ಕಿಲ್ ಅವರು ಮಾತನಾಡಿ, ಸರ್ಕಾರದ ಜನಪರ ಯೋಜನೆಗಳು ಮತ್ತು ‘ಪ್ರಜಾಸೇವೆ’ ವ್ಯವಸ್ಥೆಯ ಮಹತ್ವವನ್ನು ವಿವರಿಸಿದರು. ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗೂ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಮತ್ತು ಆಡಳಿತವನ್ನು ಜನರ ಮನೆ […]

Read More

ಸಂಪಾಜೆ: ರಸ್ತೆ ಅಪಘಾತ ಸುರಕ್ಷತಾ ಸಪ್ತಾಹ ಹಾಗೂ ಮಾದಕ ದ್ರವ್ಯ ವಿರೋಧಿ ಜಾಗೃತಿ ವಾಹನ ಜಾಥಾ ಯಶಸ್ವಿ

ಸಂಪಾಜೆ: ರಸ್ತೆ ಅಪಘಾತ ಸುರಕ್ಷತಾ ಸಪ್ತಾಹ ಹಾಗೂ ಮಾದಕ ದ್ರವ್ಯ ವಿರೋಧಿ ಅಭಿಯಾನದ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಂಪಾಜೆಯಲ್ಲಿ ಅಕ್ಟೋಬರ್ 30ರಂದು ವಾಹನ ಜಾಥಾ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ವಿವರಗಳು ಉದ್ಘಾಟನೆ ಮತ್ತು ಮುಖಂಡರ ಮಾತುಗಳು ಗಣ್ಯರ ಹಾಗೂ ಸಂಘ-ಸಂಸ್ಥೆಗಳ ಭಾಗಿ ಈ ಜಾಥಾದಲ್ಲಿ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು: ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಹಸೈನ್ […]

Read More

ಸುಳ್ಯ: ಆರ್.ಜಿ.ಯು.ಎಚ್.ಎಸ್. ಮಂಗಳೂರು ವಲಯ ಅಂತರ್‌ ಕಾಲೇಜು ವಾಲಿಬಾಲ್ ಪಂದ್ಯಾವಳಿ-2026 ಯಶಸ್ವಿ ಸಮಾರೋಪ

ಸುಳ್ಯ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (RGUHS) ಮಂಗಳೂರು ವಲಯದ ಅಂತರ್‌ ಕಾಲೇಜು ಪುರುಷರ ಮತ್ತು ಮಹಿಳೆಯರ ವಾಲಿಬಾಲ್ ಪಂದ್ಯಾವಳಿ-2026 ಸುಳ್ಯದ ಕೆ.ವಿ.ಜಿ. ವೈದ್ಯಕೀಯ ಕಾಲೇಜು ಆವರಣದಲ್ಲಿ ಅಕ್ಟೋಬರ್ 28 ಮತ್ತು 29 ರಂದು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಪಂದ್ಯಾವಳಿಯಲ್ಲಿ ವಿವಿಧ ಕಾಲೇಜುಗಳ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಿ ಅತ್ಯುತ್ತಮ ಕ್ರೀಡಾಸ್ಪೂರ್ತಿ ಹಾಗೂ ಪ್ರತಿಭೆಯನ್ನು ಪ್ರದರ್ಶಿಸಿದರು. ಪಂದ್ಯಾವಳಿಯ ಅಂತಿಮ ಫಲಿತಾಂಶಗಳು ಈ ಕೆಳಗಿನಂತಿವೆ: ಪುರುಷರ ವಿಭಾಗದ ಫಲಿತಾಂಶಗಳು: ಮಹಿಳೆಯರ ವಿಭಾಗದ ಫಲಿತಾಂಶಗಳು: ಈ ಕ್ರೀಡಾಕೂಟವನ್ನು ಅತ್ಯುತ್ತಮವಾಗಿ […]

Read More

ಸಂಪಾಜೆ – ಕನಕಮಜಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತ ತಡೆಗೆ ತಜ್ಞರ ತಂಡದಿಂದ ತಾಂತ್ರಿಕ ರಸ್ತೆ ಸುರಕ್ಷತಾ ಪರಿಶೀಲನೆಗೆ ಆಗ್ರಹ

ಸುಳ್ಯ: ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆ, ಸುಳ್ಯ ಹಾಗೂ ಕನಕಮಜಲು ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಅನೇಕ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ತಜ್ಞರ ತಂಡದಿಂದ ಸಮಗ್ರ ತಾಂತ್ರಿಕ ರಸ್ತೆ ಸುರಕ್ಷತಾ ಪರಿಶೀಲನೆ (Technical Road Safety Audit) ನಡೆಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ […]

Read More

ಕ್ರಿಸ್ಟಿಯಾನೋ ರೊನಾಲ್ಡೋಗೆ ‘B.O.A.T.’ ಸಾರ್ವಕಾಲಿಕ ಶ್ರೇಷ್ಠ ಪ್ರಶಸ್ತಿ ಗರಿಮೆ!

nammasullia: ಜಾಗತಿಕ ಫುಟ್‌ಬಾಲ್ ಲೋಕದ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೋ (Cristiano Ronaldo) ಮತ್ತೊಂದು ಐತಿಹಾಸಿಕ ಗೌರವಕ್ಕೆ ಪಾತ್ರರಾಗಿದ್ದಾರೆ. ಫ್ರಾನ್ಸ್ ಫುಟ್‌ಬಾಲ್ ಸಂಸ್ಥೆ ಪರಿಚಯಿಸಿರುವ ಪ್ರತಿಷ್ಠಿತ ಹಾಗೂ ನೂತನ ‘B.O.A.T.’ (Ballon d’Or of All Time – ಸಾರ್ವಕಾಲಿಕ ಶ್ರೇಷ್ಠ ಬ್ಯಾಲನ್ ಡಿ’ಓರ್) ಪ್ರಶಸ್ತಿಯನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. 2008ರ ಪ್ರಮುಖ ಪಂದ್ಯಗಳು ಮತ್ತು ಪ್ರಶಸ್ತಿಗಳ ಪ್ರಮುಖ ಅಂಶಗಳು:* ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಗೆಲುವು: ಮ್ಯಾಂಚೆಸ್ಟರ್ ಯುನೈಟೆಡ್ (Manchester United) ಕ್ಲಬ್ ಪರ ಆಡುತ್ತಾ, 2007-08ರ ಸಾಲಿನಲ್ಲಿ UEFA […]

Read More

ಪೈಚಾರಿನ ಫಲುಲುದ್ದೀನ್ ನಿಧನ

ಮಂಗಳೂರು: ಪೈಚಾರ್ ನಿವಾಸಿ ಹಾಗೂ ಪೈಚಾರ್ ಬದ್ರಿಯಾ ಜುಮಾ ಮಸೀದಿ ಜಮಾತ್‌ನ ಸದಸ್ಯರಾದ ಫಲುಲುದ್ದೀನ್ (45ವ) ಅವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ದಿವಂಗತ ಬೀರಾನ್ ಅವರ ಪುತ್ರರಾಗಿದ್ದಾರೆ. ಇವರು ಐದು ಜನ ಸಹೋದರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕತ್ಯಜಿಸಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರ ನಿಧನಕ್ಕೆ ಪೈಚಾರ್ ಬದ್ರಿಯಾ ಜುಮಾ ಮಸೀದಿ […]

Read More

ಅರಂತೋಡು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ಸುವರ್ಣ ಮಹೋತ್ಸವ ಸ್ವಾಗತ ಸಮಿತಿ ರಚನೆ

ಗೌರವಾಧ್ಯಕ್ಷರಾಗಿ ಟಿ.ಎಂ ಶಹೀದ್ ತೆಕ್ಕಿಲ್ ಅಧ್ಯಕ್ಷರಾಗಿ ಅಮೀರ್ ಕುಕ್ಕುಂಬಳ, ಪ್ರ. ಕಾರ್ಯದರ್ಶಿಯಾಗಿ ಪಸೀಲು .ಎ ಆಯ್ಕೆ. ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ (ರಿ) ಅರಂತೋಡು ಇದರ 50 ನೇ ವರ್ಷಾಚರಣೆ ಅಂಗವಾಗಿ ಸುವರ್ಣ ಮಹೋತ್ಸವ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಸುವರ್ಣ ಮಹೋತ್ಸವ ಸ್ವಾಗತ ಸಮಿತಿಯನ್ನು ಅ.23 ರಂದು ರಚಿಸಲಾಯಿತು.ಸಮಿತಿಯ ಗೌರವಾಧ್ಯಕ್ಷರಾಗಿ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ದರ್ಜೆ) ಟಿ.ಎಂ ಶಹೀದ್ ತೆಕ್ಕಿಲ್, ಅಧ್ಯಕ್ಷರಾಗಿ ಅಮೀರ್ ಕುಕ್ಕುಂಬಳ, ಕಾರ್ಯದ್ಯಕ್ಷರಾಗಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, […]

Read More

ಹ್ಯಾರಿ ಕೇನ್‌ಗೆ 2026ರ ಪ್ರತಿಷ್ಠಿತ ಬ್ಯಾಲನ್ ಡಿ’ಓರ್ ಪ್ರಶಸ್ತಿ ಗರಿ: ಇಂಗ್ಲೆಂಡ್‌ಗೆ 25 ವರ್ಷಗಳ ಬಳಿಕ ಐತಿಹಾಸಿಕ ಗೌರವ

Nammasullia: ಇಂಗ್ಲೆಂಡ್‌ನ ಸ್ಟಾರ್ ಫುಟ್‌ಬಾಲ್ ಆಟಗಾರ ಹ್ಯಾರಿ ಕೇನ್ (Harry Kane) 2026ನೇ ಸಾಲಿನ ಪ್ರತಿಷ್ಠಿತ ಬ್ಯಾಲನ್ ಡಿ’ಓರ್ (Ballon d’Or) ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೊನೆಯದಾಗಿ 2001ರಲ್ಲಿ ಮೈಕೆಲ್ ಓವನ್ ಈ ಪ್ರಶಸ್ತಿ ಪಡೆದಿದ್ದರು. ಈಗ ಬರೋಬ್ಬರಿ 25 ವರ್ಷಗಳ ಬಳಿಕ ಈ ಪ್ರಶಸ್ತಿ ಗೆದ್ದ ಮೊದಲ ಇಂಗ್ಲಿಷ್ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ಹ್ಯಾರಿ ಕೇನ್ ಬರೆದಿದ್ದಾರೆ. ರಿಯಲ್ ಮ್ಯಾಡ್ರಿಡ್‌ ತಂಡದ ಕಿಲಿಯನ್ ಎನ್‌ಬಾಪ್ಪೆ ಎರಡನೇ ಸ್ಥಾನ ಹಾಗೂ ಬಾರ್ಸಿಲೋನಾದ ಯುವ ಪ್ರತಿಭೆ ಲಮಿನ್ ಯಮಾಲ್ […]

Read More

ಸುಳ್ಯ ಒರ್ಕುಟ್ ಮೊಬೈಲ್‌ನಲ್ಲಿ ದೀಪಾವಳಿ ‘ಫೆಸ್ಟಿವಲ್ ಸೇಲ್’: ಪ್ರತಿ ಖರೀದಿಗೆ ಚಿನ್ನದ ನಾಣ್ಯ, ಸ್ಮಾರ್ಟ್ ಟಿವಿ ಗೆಲ್ಲುವ ಸುವರ್ಣಾವಕಾಶ!

ಸುಳ್ಯ: ಹಬ್ಬದ ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸಲು ಸುಳ್ಯದ ಜನಪ್ರಿಯ ಡಿಜಿಟಲ್ ಮಳಿಗೆ ‘ಒರ್ಕುಟ್ ಮೊಬೈಲ್’ (Orkut Mobile) ವತಿಯಿಂದ ಗ್ರಾಹಕರಿಗಾಗಿ ಭರ್ಜರಿ ಕೊಡುಗೆಗಳೊಂದಿಗೆ ‘ಫೆಸ್ಟಿವಲ್ ಸೇಲ್’ (Festival Sale) ಆರಂಭಗೊಂಡಿದೆ. ಸುಳ್ಯದ ಮುಖ್ಯ ರಸ್ತೆಯ ಗ್ಲೋಬಲ್ ಕಾಂಪ್ಲೆಕ್ಸ್‌ನಲ್ಲಿರುವ ಜನತಾ ಸ್ಟೋರ್ ಎದುರಿನ ಒರ್ಕುಟ್ ಮೊಬೈಲ್ ಮಳಿಗೆಯಲ್ಲಿ ಹಬ್ಬದ ವಿಶೇಷ ಆಫರ್‌ಗಳ ಮಹಾಪೂರವೇ ಹರಿದುಬಂದಿದ್ದು, ಗ್ರಾಹಕರು ಇದರ ಸಂಪೂರ್ಣ ಲಾಭ ಪಡೆದುಕೊಳ್ಳಬಹುದಾಗಿದೆ. ಆಕರ್ಷಕ ಆಫರ್‌ಗಳು ಮತ್ತು ಸೌಲಭ್ಯಗಳು: ‘ಲಕ್ಕಿ ಕೂಪನ್’ ಮೂಲಕ ಅದೃಷ್ಟದ ಉಡುಗೊರೆ: ಹಬ್ಬದ ಈ ವಿಶೇಷ […]

Read More