NAAC ಲಂಚ ಪ್ರಕರಣ : ದಾವಣಗೆರೆ ವಿವಿ ಪ್ರೊ.ಗಾಯತ್ರಿ ದೇವರಾಜ್ ಅಮಾನತು
ನ್ಯಾಕ್ ಪರಿಶೀಲನಾ ಸಮಿತಿಯ ಲಂಚ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿರುವ ದಾವಣಗೆರೆ ವಿಶ್ವವಿದ್ಯಾಲಯದ ಮೈಕ್ರೋ ಬಯಾಲಜಿ ವಿಭಾಗದ ಪ್ರಾಧ್ಯಾಪಕಿ ಪ್ರೊ. ಗಾಯತ್ರಿ ದೇವರಾಜ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಗುರುವಾರ (ಫೆ.6) ನಡೆದ ದಾವಣಗೆರೆ ವಿಶ್ವವಿದ್ಯಾಲಯದ ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಈ ವಿಷಯದ ಬಗ್ಗೆ…
ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ ಸಂಘದ ಕಾರ್ಯಕಾರಿ ಸಮಿತಿಗೆ ಎನ್ನೆಂಸಿಯ ಡಾ. ಅನುರಾಧಾ ಕುರುಂಜಿ ಆಯ್ಕೆ
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಅನುರಾಧಾ ಕುರುಂಜಿಯವರು ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಕನ್ನಡ ಅಧ್ಯಾಪಕರ ಸಂಘ, ವಿಕಾಸದಕಾರ್ಯಕಾರಿ ಸಮಿತಿಗೆ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ. ಈ ಸಮಿತಿಯು ಮುಂದಿನ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ
ಕಾಸರಗೋಡು: ಹುಲಿ ಭೀತಿ ಹಿನ್ನೆಲೆ; ಅರಣ್ಯ ಇಲಾಖೆ ವಿಶೇಷ ಕ್ರಮ
ಕಾಸರಗೋಡು ಜಿಲ್ಲೆಯ ಕಾರಡ್ಕ, ಮುಳ್ಳಿಯಾರ್, ದೇಲಂಪಾಡಿ, ಪುಲ್ಲೂರು-ಪೆರಿಯ, ಬೇಡಡ್ಕ, ಕುಟ್ಟಿಕ್ಕೋಲ್ ಪಂಚಾಯತ್ ವ್ಯಾಪ್ತಿಯ ಅರಣ್ಯದ ಗಡಿ ಭಾಗದ ನಿವಾಸಿಗಳಲ್ಲಿ ಹುಲಿ ಕಾಣಿಸಿಕೊಂಡಿರುವುದು ವ್ಯಾಪಕ ಆತಂಕಕ್ಕೆ ಕಾರಣವಾಗಿದೆ. ಭಯಕ್ಕೆ ಪ್ರತಿಕ್ರಿಯೆಯಾಗಿ, ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅರಣ್ಯ ಇಲಾಖೆ ವಿಶೇಷ ಕ್ರಮಗಳನ್ನು ಪ್ರಾರಂಭಿಸಿದೆ.ಬೋವಿಕ್ಕಾನದಲ್ಲಿ ಬೀಡುಬಿಟ್ಟಿರುವ…
ಪೇರಡ್ಕ ಗೂನಡ್ಕ ಉರೂಸ್: ದೇಶದ ನಿವೃತ್ತ ಯೋಧರಿಗೆ ದೇಶ ರಕ್ಷಕರಿಗೆ ಸನ್ಮಾನ
ಸುಳ್ಯ :ಸಂಪಾಜೆ ಗ್ರಾಮದ ಪೇರಡ್ಕ – ಗೂನಡ್ಕ ವಲಿಯುಲ್ಲಾಹಿ ದರ್ಗಾ ಶರೀಫಿನ ಉರೂಸ್ ಕಾರ್ಯಕ್ರಮದಲ್ಲಿ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ದೇಶ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರುಗಳಾದ ವಸಂತ ಪೆಲ್ತಡ್ಕ, ಪಧ್ಮನಾಭ ಪೆಲ್ತಡ್ಕ, ಹಾಗೂ ಜಮ್ಮು ಕಾಶ್ಮೀರ…
ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿಗೆ ವಿ.ಟಿ.ಯು. ರ್ಯಾಂಕ್
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಂ.ಟೆಕ್ ಪರೀಕ್ಷೆಯಲ್ಲಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ಎಂ.ಟೆಕ್ ವಿಭಾಗದ ವಿದ್ಯಾರ್ಥಿನಿ ಫರಾನ ಐ.ಎಂ. ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ೨ನೇ ರ್ಯಾಂಕ್ ಮತ್ತು ಲಿಖಿತ ಎ.ಬಿ. ೩ನೇ ರ್ಯಾಂಕ್…
SSF sullia: ಸೆಕ್ಟರ್ ನೂತನ ಪದಾಧಿಕಾರಿಗಳ ಆಯ್ಕೆಅಧ್ಯಕ್ಷರಾಗಿ ಅಬಿದ್ ಕಲ್ಲುಮುಟ್ಲು, ಪ್ರಧಾನ ಕಾರ್ಯದರ್ಶಿಯಾಗಿ ಸಲ್ಮಾನ್ ಹಿಮಮಿ, ಕೋಶಾಧಿಕಾರಿಯಾಗಿ ನಾಸಿರ್ ಎಲಿಮಲೆ
SSF ಸುಳ್ಯ ಸೆಕ್ಟರ್ ಇದರ ಸಭೆಯು ಫೆಬ್ರವರಿ 4 ರಂದು ಸಮೀರ್ ಡಿ ಎಚ್ ರವರ ಅಧ್ಯಕ್ಷತೆಯಲ್ಲಿ ಮಗ್ರಿಬ್ ನಮಾಝ್ ಬಳಿಕ ಸುಳ್ಯ ಸುನ್ನಿ ಸೆಂಟರ್ ನಲ್ಲಿ ನಡೆಯಿತು. ಸಭೆಗೆ ಡಿವಿಷನ್ ವೀಕ್ಷಕರಾದ ಡಿವಿಷನ್ ಅಧ್ಯಕ್ಷ ಸಿದ್ದೀಕ್ ಹಿಮಮಿ ಸಖಾಫಿ,ಡಿವಿಷನ್ ಪ್ರಧಾನ…
ಅಮೃತಸರ ತಲುಪಿದ ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕ ಮಿಲಿಟರಿ ವಿಮಾನ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಕ್ರಮ ವಲಸಿಗರ ವಿರುದ್ಧದ ಅಭಿಯಾನದ ಭಾಗವಾಗಿ ಗಡೀಪಾರು ಮಾಡಲ್ಪಟ್ಟ 205 ಭಾರತೀಯರನ್ನು ಸಾಗಿಸುತ್ತಿದ್ದ ಮಿಲಿಟರಿ ವಿಮಾನ ಇಂದು ಮಧ್ಯಾಹ್ನ ಅಮೃತಸರದಲ್ಲಿ ಬಂದಿಳಿದಿದೆ. ಸಿ -17 ಮಿಲಿಟರಿ ವಿಮಾನ ನಿನ್ನೆ ಟೆಕ್ಸಾಸ್‌ನ ವಿಮಾನ ನಿಲ್ದಾಣದಿಂದ ಹಾರಿತು.…
ಸುಳ್ಯ: ಕು|ಪೂಜಾ ಬೋರ್ಕಾರ್ ಗೆ ಆಕ್ಸೀಸ್ ಮ್ಯಾಕ್ಸ್ ಕಲಾರತ್ನ ಪ್ರಶಸ್ತಿ
ಸುಳ್ಯ ದ ಅಪ್ರತಿಮ ಕಲಾವಿದೆ ಪೆನ್ಸಿಲ್ ಆರ್ಟ್ ಮೂಲಕ ಪ್ರಸಿದ್ಧಿ ಪಡೆದ ಸುಳ್ಯ ದ ಬೆಟ್ಟಂಪಾಡಿ ನಿವಾಸಿ ಕು|ಪೂಜಾ ಬೋರ್ಕಾರ್ ಗೆ ಪ್ರತಿಷ್ಠಿತ ಆಕ್ಸೀಸ್ ಮ್ಯಾಕ್ಸ್ ಸಂಸ್ಥೆಯು ಕಲಾರತ್ನ ಪ್ರಶಸ್ತಿ ಪ್ರಶಸ್ತಿ ನೀಡಿ ಗೌರವಿಸಿತು. ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ…
ಪಾಲ್ತಾಡ್: ಪಿಪಿಎಲ್ ಸೀಸನ್ -12; ರಾಯಲ್ ಡಿಎಕ್ಸ್’ಬಿ ಚಾಂಪಿಯನ್, ಯುನೈಟೆಡ್ ಎಮಿರೇಟ್ಸ್ ರನ್ನರ್ ಅಪ್
ಪಾಲ್ತಾಡು: ನ್ಯೂ ಬ್ರದರ್ಸ್ ಆರ್ಟ್ & ಸ್ಪೋರ್ಟ್ಸ್ ಕ್ಲಬ್ ಪಾಲ್ತಾಡ್ ಅರ್ಪಿಸುವ ಮ್ಯಾನ್ & ಮೋಡಾ ಪಾಲ್ತಾಡ್ ಪ್ರೀಮಿಯರ್ ಲೀಗ್(ಪಿಪಿಎಲ್) ಹನ್ನೆರಡನೇ ಆವೃತ್ತಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ದಿನಾಂಕ ಫೆ.2 ರಂದು ಸರಕಾರಿ ಪ್ರಾಥಮಿಕ ಶಾಲೆ ಮಣಿಕ್ಕರ ಮೈದಾನದಲ್ಲಿ ನಡೆಯಿತು.…
ಕಲ್ಮಡ್ಕ ಕುಡಿಯುವ ನೀರಿನ ಸಮಸ್ಯೆಯನ್ನು ಹಾಗೂ ದಾರಿದೀಪವನ್ನು ದುರಸ್ತಿ ಪಡಿಸಲು ಎಸ್ ಡಿ ಪಿ ಐ ಮನವಿ
ನಿಂತಿಕಲ್ಲು. ಫೆ. 3 ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಮುಚ್ಚಿಲ ಎಂಬಲ್ಲಿ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕುಡಿಯುವ ನೀರಿಗೆ ಬೇಕಾಗಿ ನಿರ್ಮಿಸಲಾದ ಕೊಳವೆ ಬಾವಿಗೆ ಪಂಪು ಅಳವಡಿಸಿ ಆರು ಏಳು ತಿಂಗಳಿಂದ ಬಳಕೆದಾರರಿಗೆ ನೀರನ್ನು ಪೂರೈಸಿದ್ದು ಇದೇ ಜನವರಿ…
