ವಿಜಯವಾಣಿ ಮಂಗಳೂರು ಆವೃತ್ತಿಯ ಹಿರಿಯ ಉಪಸಂಪಾದಕ ಗಿರೀಶ್ ಕೆ ಎಲ್ ಹೃದಯಾಘಾತದಿಂದ ನಿಧನ

ಮಂಗಳೂರು ಫೆಬ್ರವರಿ 03: ವಿಜಯವಾಣಿ ಮಂಗಳೂರು ಆವೃತ್ತಿಯ ಹಿರಿಯ ಉಪಸಂಪಾದಕ, ಮಂಗಳೂರು ಶಕ್ತಿನಗರ ನಿವಾಸಿ ಗಿರೀಶ್ ಕೆ.ಎಲ್(49) ಸೋಮವಾರ ಹೃದಯಾಘಾತದಿಂದ ನಿಧನರಾದರು.ಶಕ್ತಿ, ಉಷಾಕಿರಣ, ಉದಯವಾಣಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು. ವಿಜಯವಾಣಿ ಆರಂಭದಿಂದಲೇ ಹಿರಿಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪತ್ನಿ, ಪುತ್ರನನ್ನು ಅಗಲಿದ್ದಾರೆ.…

ಇಂದು(ಫೆ.4) ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ

33 ಕಾವು – ಸುಳ್ಯ ಏಕ ಪಥ ವಿದ್ಯುತ್ ಲೈನನ್ನು ಕೌಡಿಚಾರ್ ನಿಂದ ಕಾವು ಜಂಕ್ಷನ್ ವರೆಗೆ ದ್ವಿ ಪಥ ಮಾರ್ಗವನ್ನಾಗಿ ಪರಿವರ್ತಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.04ರಂದು ಮಂಗಳವಾರ ಬೆಳಿಗ್ಗೆ 10.00 ರಿಂದ ಸಂಜೆ 6.00 ಗಂಟೆಯವರೆಗೆ ಕಾವು ಮತ್ತು ಸುಳ್ಯ…

ಉಬೈಸ್ ಗೂನಡ್ಕರವರಿಗೆ ರಾಷ್ಟ್ರೀಯ ಪ್ರೇರಣಾ ದೂತ ಪ್ರಶಸ್ತಿ ಪ್ರದಾನ

ಉಬೈಸ್ ಗೂನಡ್ಕರವರಿಗೆ ಸಿಲ್ವರ್ ಮೆಡಲ್ ಮತ್ತು ರಾಷ್ಟ್ರೀಯ ಪ್ರೇರಣಾ ದೂತ ಪ್ರಶಸ್ತಿಯನ್ನು ರಾಮಕೃಷ್ಣ ಮಠದ ಕಾರ್ಯದರ್ಶಿ ಸ್ವಾಮಿ ಅತಿದೇವಾನಂದ ಮಹಾರಾಜ್ ಸ್ವೀಕರಿಸಿದರು ಹಿರಿಯ ಐಎಎಸ್ ಅಧಿಕಾರಿ ರಿತೇಶ್ ಕುಮಾರ್ ಮತ್ತು ಬಿಹಾರದ ಮಾಜಿ ಕಾರ್ಮಿಕ ಸಚಿವ ಸುರೇಂದ್ರ ರಾಂ ಉಪಸ್ಥಿತರಿದ್ದರು. ಉಬೈಸ್…

ಪೇರಡ್ಕ ಉರೂಸ್ : ಸರ್ವ ಧರ್ಮ ಸಮ್ಮೇಳನಸರ್ವಧರ್ಮ ಸಮ್ಮೇಳನಗಳು ಎಲ್ಲೆಡೆ ನಡೆಯುವ ಅಗತ್ಯ ಇದೆ -ಸದಾನಂದ ಮಾವಜಿ

ಪ್ರಸ್ತುತ ಕಾಲಘಟ್ಟದಲ್ಲಿ ಸರ್ವಧರ್ಮ ಸಮ್ಮೇಳನಗಳು ಎಲ್ಲೆಡೆ ನಡೆಯುವ ಅಗತ್ಯ ಇದೆ ಎಂದು ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂಧ ಮಾಜಿ ಹೇಳಿದರು. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸರ್ವಧರ್ಮ ಸಮ್ಮೇಳನಗಳು ನಶಿಸಿ ಹೋಗಿದೆ ಇಂದು ಇದರ ಅಗತ್ಯ ಇದೆ. ಪೇರಡ್ಕದ ಸೌಹಾರ್ಧತೆಯು ತೆಕ್ಕಿಲ್…

ಒಬ್ಬನೊಂದಿಗೆ ತಾಯಿ – ಮಗಳ ಅನೈತಿಕ ಸಂಬಂಧ; ಪತಿ ವಿರೋಧಿಸಿದ್ದಕ್ಕೆ ಪ್ರಿಯಕರನೊಂದಿಗೆ ಸೇರಿ ಹತ್ಯೆ

ಬಿಹಾರ: ಭಾಗಲ್ಪುರದಲ್ಲಿ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬರಿ ರಾಮಾಸಿ ಗ್ರಾಮದಲ್ಲಿ ಕೈಲು ದಾಸ್ (35) ಎಂಬಾತನನ್ನು ಅವರ ಪತ್ನಿ, ಮಗಳು ಹಾಗೂ ಮಗಳ ಪ್ರಿಯಕರ ಸೇರಿ ಕೊಲೆಗೈದು ಮನೆಯಂಗಳದಲ್ಲೇ ಹೂತು ಹಾಕಿದ್ದಾರೆ. ಕೈಲು ದಾಸ್ ಪತ್ನಿ ಸರಿತಾ ದೇವಿ,…

ಎನ್ನೆಂಸಿ: ಡಾ. ಟಿ ಸುಧಾಕರನ್ ವೃತ್ತಿ ಜೀವನಕ್ಕೆ ವಿದಾಯ- ಬೀಳ್ಕೊಡುಗೆ ಕಾರ್ಯಕ್ರಮ

ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಡಾ. ಕೆ ಸುಧಾಕರನ್ ಜನವರಿ 31 ರಂದು ಸೇವಾ ನಿವೃತ್ತರಾದರು. 1988ರಲ್ಲಿ ನೆಹರು ಮಮೋರಿಯಲ್ ಕಾಲೇಜಿಗೆ ರಸಾಯನ ಶಾಸ್ತ್ರ ಉಪನ್ಯಾಸಕರಾಗಿ ಸೇವೆಗೆ ಸೇರಿದ್ದ ಇವರು 2009ರಲ್ಲಿ…

ಸುಳ್ಯ: ಗಾರ್ಡ್ ಶೆಡ್ ಬಳಿ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ!

ಸುಳ್ಯ : ಗಾಂಧಿನಗರದ ಗಾಡ್೯ ಶೇಡ್ ಬಳಿ ಇರುವ ಕೆ ಎಫ್ ಡಿ ಸಿ (KFDC) ಕಚೇರಿ ಯ ಹಿಂಭಾಗದಲ್ಲಿ ಕೊಳೆತಿರುವ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಹೆಚ್ಚಿನ ವಿವರ ಇನ್ನಷ್ಟೇ ಲಭಿಸಬೇಕಿದೆ

ಸರ್ವ ಧರ್ಮ ಸಮನ್ವಯ ಕೇಂದ್ರ ಪೇರಡ್ಕ ಗೂನಡ್ಕ ಊರೂಸ್ ಸಮಾರಂಭ ಮತ್ತು ಸೌಹಾರ್ದ ಸಮ್ಮೇಳನ

ಇಂದಿನಿಂದ ಮಡಿಕೇರಿ ಜ.30 : ಇತಿಹಾಸ ಪ್ರಸಿದ್ಧ ಪೇರಡ್ಕ-ಗೂನಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಸಮಾರಂಭ ಮತ್ತು ಸರ್ವಧರ್ಮ ಸಮ್ಮೇಳನವು ಜ.31 ರಿಂದ ಫೆ.2ರ ವರೆಗೆ ಪೇರಡ್ಕ ತೆಕ್ಕಿಲ್ ಮೊಹಮದ್ ಹಾಜಿ ವೇದಿಕೆಯಲ್ಲಿ ನಡೆಯಲಿದೆ ಎಂದು ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ…

38ನೇ ನ್ಯಾಷನಲ್ ಗೇಮ್ಸ್: 2025 ರ ಕರ್ನಾಟಕ ಕಬಡ್ಡಿ ತಂಡಕ್ಕೆ ಆಯ್ಕೆಯಾದ ಕಾಣಿಯೂರಿನ ಸೌಮ್ಯ ಪೂಜಾರಿ

ಪುತ್ತೂರು ಜನವರಿ 29: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ 38ನೇ ನ್ಯಾಷನಲ್ ಗೇಮ್ಸ್ -2025 ರಲ್ಲಿ ರಾಷ್ಟ್ರೀಯ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಕಾಣಿಯೂರಿನ ಸೌಮ್ಯ ಪೂಜಾರಿ ರವರು ಆಯ್ಕೆ ಆಗಿದ್ದಾರೆ. ಇವರು ಕಾಣಿಯೂರು ಅಬೀರ ರಾಮಣ್ಣ ಪೂಜಾರಿ…

27 ಕೆಜಿ ಚಿನ್ನ, 1,562 ಎಕರೆ ‘ಜಯಲಲಿತಾ ಆಸ್ತಿ’ ಹಿಂದಿರುಗಿಸಲು ‘ಕರ್ನಾಟಕ ಹೈಕೋರ್ಟ್’ ಆದೇಶ.!

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸೇರಿದ 1,562 ಎಕರೆ ಭೂಮಿಗೆ 27 ಕೆಜಿ ಚಿನ್ನ, ಬೆಳ್ಳಿ, ವಜ್ರದ ಆಭರಣಗಳು ಮತ್ತು ದಾಖಲೆಗಳನ್ನು ತಮಿಳುನಾಡು ಭ್ರಷ್ಟಾಚಾರ ನಿಗ್ರಹ ಇಲಾಖೆಗೆ ಹಸ್ತಾಂತರಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ತಮ್ಮ…