ಮಡಿಕೇರಿ ನೊಂದವರ ಬಾಳಿನ ಆಶಾಕಿರಣ ಹಾಗೂ ಸಂತೆ ಮಾರುಕಟ್ಟೆ ರಕ್ಷಣಾ ಸಮಿತಿ ಸಂಯುಕ್ತಾಶ್ರಯದಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಮಡಿಕೇರಿಯ ಮಾರುಕಟ್ಟೆಯ ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಸ್ಥಳೀಯ ರುದ್ರಾಶ್ರಮದ ಹಿರಿಯರೊಂದಿಗೆ ಆಚರಿಸಲಾದ ಈ ಕಾರ್ಯಕ್ರಮದಲ್ಲಿ ಬೆಳಗ್ಗೆ ಒಂಬತ್ತು ಮೂವತ್ತಕ್ಕೆ ಸರಿಯಾಗಿ ಸುಬೇದಾರ್ ಕ್ಯಾಪ್ಟನ್ ಡೇವಿಡ್ ಹೆನ್ರಿವೇಗಸ್ ಧ್ವಜಾರೋಹಣವನ್ನು ನೆರವೇರಿಸಿದರು.
ಬಳಿಕ ನೆರೆದ ರುದ್ರಶ್ರಮದ ಹಿರಿಯರ ಸಮ್ಮುಖದಲ್ಲಿ ಭಾಷಾ ಫೈವ್ ಸ್ಟಾರ್ ಸಿಂಗರ್ ತಂಡದ ನಾಯಕತ್ವದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ವೇದಿಕೆಯಲ್ಲಿ ನೋಂದವರ ಬಾಳಿನ ಆಶಾಕಿರಣದ ಅಧ್ಯಕ್ಷ ಮಹಮ್ಮದಲಿ, ಮಾರುಕಟ್ಟೆ ಸಂತೆ ವ್ಯಾಪಾರ ಹಿತರಕ್ಷಣ ಸಮಿತಿಯ ಅಧ್ಯಕ್ಷರಾದ ಎಂಎಂ ಇಸ್ಮಾಯಿಲ್,ಪ್ರಧಾನ ಕಾರ್ಯದರ್ಶಿ ಎಮ್ ಎ ಅಬ್ದುಲ್ ರಜಾಕ್, ವಿಕಾಸ್ ಆಶ್ರಮದ ಮುಖ್ಯಸ್ಥರಾದ ಸಂತೋಷ್, ರುದ್ರ ಆಶ್ರಮದ ಹಿರಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅರ್ಹರಿಗೆ ಗಾಲಿ ಕುರ್ಚಿ,ಹಾಗೂ ಶಟರ್ ವಸ್ತ್ರ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ನುರಾರು ದೇಶ ಪ್ರೇಮಿಗಳು, ಸಂಘಟನೆಯ ಮುಖಂಡರುಗಳು, ಸದಸ್ಯರು ಭಾಗವಹಿಸಿದ್ದರು.