ಸಿಕ್ಕಿಂನಲ್ಲಿ ವಾಹನವೊಂದು ರಸ್ತೆಯಿಂದ ಜಾರಿ ಸುಮಾರು 700 ಅಡಿ ಆಳದ ಕಮರಿಗೆ ಬಿದ್ದ ಪರಿಣಾಮ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಸಿಕ್ಕಿಂನ ಪಕ್ಯೋಂಗ್ ಜಿಲ್ಲೆಯ ಸಿಲ್ಕ್ ಮಾರ್ಗದಲ್ಲಿ ಪಶ್ಚಿಮ ಬಂಗಾಳದ ಪೆಡಾಂಗ್ನಿಂದ ಜುಲುಕ್ಗೆ ಈ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. 

ಸಿಕ್ಕಿಂನ ರೆನಾಕ್ ರೊಂಗ್ಲಿ ರಾಜ್ಯ ಹೆದ್ದಾರಿಯ ದಲೋಪ್ಚಂದ್ ದಾರಾ ಬಳಿ ಈ ಘಟನೆ ನಡೆದಿದೆ.

ಎಲ್ಲಾ ಸಿಬ್ಬಂದಿ ಪಶ್ಚಿಮ ಬಂಗಾಳದ ಬಿನಾಗುರಿಯ ಎನ್ರೂಟ್ ಮಿಷನ್ ಕಮಾಂಡ್ ಘಟಕಕ್ಕೆ ಸೇರಿದವರು.

Leave a Reply

Your email address will not be published. Required fields are marked *