SSF ಕಲ್ಲುಗುಂಡಿ ಯೂನಿಟ್ ವತಿಯಿಂದ ಬೆಳಗ್ಗೆ 6:30 ಗಂಟೆಗೆ ಸುನ್ನಿ ಸೆಂಟರ್ ಮುಂಭಾಗದಲ್ಲಿ ಯೂನಿಟ್ ಅಧ್ಯಕ್ಷರಾದ ಆಶಿಕ್ ಕೆ ಹೆಚ್ ರವರು ಧ್ವಜಾರೋಹಣ ನೆರವೇರಿಸಿದರು, ಯೂನಿಟ್ ಪ್ರಧಾನ ಕಾರ್ಯದರ್ಶಿ ರುನೈಝ್ ಕೊಯನಾಡು ಸರ್ವರನ್ನು ಸ್ವಾಗತಿಸಿದರು,
ಯೂನಿಟ್ ಕಾರ್ಯಕಾರಿ ಸಮಿತಿ ಸದಸ್ಯ ಸವಾದ್ ಕಲ್ಲುಗುಂಡಿ ಸಂದೇಶ ಭಾಷಣ ನಡೆಸಿದರು, ಪ್ರಸ್ತುತ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಯೂನಿಟ್ ಅಧ್ಯಕ್ಷ ಹಂಸ ಕೊಯನಾಡು, SYS ಕಲ್ಲುಗುಂಡಿ ಯೂನಿಟ್ ಕೋಶಾಧಿಕಾರಿ ಅಶ್ರಫ್ ನೆಲ್ಲಿಕುಮೇರಿ, ಸದಸ್ಯರಾದ ಜಲೀಲ್ ಭಾರತ್, SSF ಕಲ್ಲುಗುಂಡಿ ಯೂನಿಟ್ CC ಕಾರ್ಯದರ್ಶಿ ಸೇಲಿಕ್ ಮತ್ತಿತರು ಸದಸ್ಯರು ಉಪಸ್ಥಿತರಿದ್ದರು.