ಮಂಗಳೂರು ಅಕ್ಟೋಬರ್ 06: ಯುವತಿಯೊಬ್ಬಳಿಗೆ ರಾತ್ರಿ ಕರೆ ವಿಡಿಯೋ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಯುವಕನಿಗೆ ಮಹಿಳೆಯರು ಧರ್ಮದೇಟು ನೀಡಿದ ಘಟನೆ ಮಂಗಳೂರಿನ ಕುಳೂರಿನಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಆರೋಪಿ ಯುವಕ ಜನರಲ್ ಸ್ಟೋರ್ ಅಂಗಡಿಯವನಾಗಿದ್ದು ಅಲ್ಲಿಗೆ ಬರುತ್ತಿದ್ದ ಗ್ರಾಹಕಿಯೂ ಆಗಿರುವ ಯುವತಿಗೆ ತಡರಾತ್ರಿ ವಿಡಿಯೋ ಕರೆ ಮಾಡಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಇದನ್ನು ತಿಳಿದ ಮನೆಯ ಹಿರಿಯ ಮಹಿಳೆಯರಿಬ್ಬರು ಅಂಗಡಿಗೆ ಬಂದು ಕಪಾಳಕ್ಕೆ ಬಾರಿಸಿ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.