ತಿರುವನಂತಪುರ : ರಿಯಾದ್ ಕ್ರಿಮಿನಲ್ ನ್ಯಾಯಾಲಯದ ಮರಣದಂಡನೆಯನ್ನು ರದ್ದುಗೊಳಿಸಿದ ಆದೇಶದ ನಂತರ ಅಬ್ದುಲ್ ರಹೀಮ್ ಬಾಬಿ ಚೆಮ್ಮನ್ನೂರ್ ಅವರಿಗೆ ದೂರವಾಣಿ ಮೂಲಕ ಧನ್ಯವಾದ ತಿಳಿಸಿದ್ದಾರೆ. ತಾವು ಮಾಡಿದ ಸಹಾಯವನ್ನು ಯಾವತ್ತು ಮರೆಯುವುದಿಲ್ಲ ಎಂದು ಹೇಳಿದರು.
ಖುದ್ದು ಭೇಟಿಯಾಗಿ ಬಾಬಿ ಚೆಮ್ಮನ್ನೂರ್ ಹಾಗೂ ಅವರ ಕುಟುಂಬಕ್ಕಾಗಿ ಪ್ರಾರ್ಥಿಸುವುದಾಗಿ ರಹೀಮ್ ಹೇಳಿದ್ದಾರೆ. ಅಬ್ದುಲ್ ರಹೀಮ್ ಅವರ ಫೋನ್ ಕರೆಯನ್ನು ಬಾಬಿ ಚೆಮ್ಮನ್ನೂರ್ ಅವರು ಇನ್ಸಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಸೃಷ್ಟಿಕರ್ತನಿಗೆ ಧನ್ಯವಾದ ಹೇಳಬೇಕು, ನನಗೆ ಧನ್ಯವಾದ ಹೇಳುವ ಅಗತ್ಯವಿಲ್ಲ ಎಂದು ಬಾಬಿ ಚೆಮ್ಮನ್ನೂರ್ ಹೇಳಿದ್ದಾರೆ. ಮದುವೆಯಾಗಿ ಸುಖವಾಗಿ ಬಾಳಬೇಕು, 18 ವರ್ಷಗಳ ಹಿಂದೆ ಅಂದುಕೊಂಡಿದ್ದನ್ನು ಮಾಡಬೇಕು ಎಂದರು. ಮರಳಿ ದೇಶಕ್ಕೆ ಬಂದ ನಂತರ ಆಟೋರಿಕ್ಷಾ ಓಡಿಸಬೇಕಿಲ್ಲ, ನರಳಬೇಕಿಲ್ಲ, ವ್ಯಾಪಾರದಲ್ಲಿ ಪಾಲುದಾರರಾಗಿ ವ್ಯಾಪಾರವನ್ನು ಸರಿಪಡಿಸಿಕೊಳ್ಳುವುದಾಗಿ ಬಾಬಿ ಚೆಮ್ಮನ್ನೂರ್ ರಹೀಮ್ ಗೆ ತಿಳಿಸಿದರು.