ಸುಳ್ಯ: ಜಿಲ್ಲೆಯ ಪ್ರತಿಷ್ಠಿತ ಕ್ರಿಕೆಟ್ ಕ್ಲಬ್ ಗಳಲ್ಲಿ‌ಒಂದಾಗಿರುವ ಮಾರ್ನಿಂಗ್ ಕ್ರಿಕೆಟ್ ಕ್ಲಬ್ ಸುಳ್ಯ ಇದರ ಆಶ್ರಯದಲ್ಲಿ ಹನ್ನೊಂದು ಜನರ ಹನ್ನೊಂದು ಓವರ್‌ಗಳ ಎರಡು ದಿನಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಬಹಳ ಅದ್ದೂರಿಯಂದ ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲು ಹಾಗೂ ಜೂನಿಯರ್ ಕಾಲೇಜ್ ಸುಳ್ಯ ಮೈದಾನದಲ್ಲಿ ನಡೆಯಿತು. ಪಂದ್ಯಾಟವೂ ವೀಕ್ಷಕರಿಗೆ ರೋಮಾಂಚಕಾರಿಯಾಗಿತ್ತು. ಪ್ರತಿ‌ ಸಿಕ್ಸರ್,ಗೆ ₹100 ನಗದು, ಪ್ರತಿ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಗೆ 5kg ಸಕ್ಕರೆ ನೀಡಿ ಗೌರವಿಸಲಾಯಿತು.

ಎರಡು ದಿನಗಳ ಕಾಲ ಮಧ್ಯಾಹ್ನದ ಭೋಜನ ವ್ಯವಸ್ಥೆ ಕೂಡಾ ಕಲ್ಪಿಸಲಾಗಿತ್ತು. ಎರಡು‌ ದಿನಗಳ ನಡೆದ ಪಂದ್ಯದಲ್ಲಿ ಎಂಸಿಸಿ ಹಾಗೂ ಎಂ.ಎಸ್.ಸಿ ಐವರ್ನಾಡು ಫೈನಲ್ ಪ್ರವೇಶಿಸಿತು. ಈ ಪಂದ್ಯಾಕೂಟದ ಚಾಂಪಿಯನ್ ಪಟ್ಟವನ್ನು ಅತಿಥೇಯ ಎಂ.ಸಿ.ಸಿ ತಂಡ ಗಳಿಸಿದರೆ, ದ್ವಿತೀಯ ಸ್ಥಾನವನ್ನು ಎಂ.ಎಸ್.ಸಿ ಐವರ್ನಾಡು ತನ್ನದಾಗಿಸಿಕೊಂಡಿತು.

ಇನ್ನೂ ವೈಯಕ್ತಿಕ ಬೆಸ್ಟ್ ಬ್ಯಾಟ್ಸಮನ್ ಪುನೀತ್ , ಬೆಸ್ಟ್ ಬೌಲರ್ ಕಿರಣ್ ಜಬಳೆ , ಬೆಸ್ಟ್ ಫೀಲ್ಡರ್ ಚಂದ್ರ, ಬೆಸ್ಟ್ ‌ಕೀಪರ್ ಇಲ್ಯಾಸ್, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಝುಬೈರ್ ಮೆನ್ಸ್ ಪಾರ್ಕ್ , ಮ್ಯಾನ್ ಅಫ್ ದಿ‌ ಸಿರೀಸ್ ರವಿಕ್ ದೊಡ್ಡೇರಿ , ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಂಜಿತ್ ಕುಮಾರ್ ಕೆ.ಆರ್ (ಅಧ್ಯಕ್ಷರು ಎಂಸಿಸಿ ಸುಳ್ಯ) ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಪ್ರಸನ್ನಕುಮಾರ್.ಎ ಇಂಜಿನಿಯರ್ ಸುಳ್ಯ, ಶ್ರೀ ದಯಾನಂದ DK ಆ‌ರ್.ಕೆ ಇಂಟರ್ನ್ಯಾಷನಲ್ ಹೊಲಿಡೇಸ್ INC ಸುಳ್ಯ, ಶ್ರೀ ವೆಂಕಪ್ರ.ಎಂ, ಸದಸ್ಯರು ನಗರ ಪಂಚಾಯತ್ ಸುಳ್ಯ, ಶ್ರೀ ಹರೀಶ್ ನಾಯ್ಕ ಚೊಕ್ಕಾಡಿ ಸುಳ್ಯ ತಾಲೂಕು, ಶ್ರೀ ಪ್ರಕಾಶ್ ಮೂಡಿತ್ತಾಯ ಪ್ರಾಂಶುಪಾಲರು ಸರಕಾರಿ ಪ್ರೌಢಶಾಲೆ ಸುಳ್ಯ, ಶ್ರೀ ಹಂಝ ಖಾತೂನ್ ಸ್ಥಾಪಕಾಧ್ಯಕ್ಷರು ಎಂಸಿಸಿ ಸುಳ್ಯ, ಶ್ರೀ ರಾಜೇಶ್ ರೈ ಸಂಚಾಲಕರು ಎಂಸಿಸಿ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *