ಸುಳ್ಯದಿಂದ ಜಟ್ಟಿಪಳ್ಳ ರಸ್ತೆಗೆ ಹೋಗುವಲ್ಲಿ ತೆಂಗಿನ ಮರವೊಂದು ರಸ್ತೆಗೆ ಉರುಳಿ ಬಿದ್ದಿದೆ. ತೆಂಗಿನ ಮರ ಬಿದ್ದ ಪರಿಣಾಮ ಕರೆಂಟ್ ಕಂಬ ಕೂಡಾ ಬೀಳುವಂತ ಸ್ಥಿತಿ ನಿರ್ಮಾಣವಾಗಿದೆ
ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ವಿದ್ಯುತ್ ವೈರ್ ಅನ್ನು ತುಂಡರಿಸಿಕೊಂಡೇ ತೆಂಗಿನ ಮರ ರಸ್ತೆಗೆ ಉರುಳಿ ಬಿದ್ದಿದೆ. ಸುಳ್ಯದ ಮುಖ್ಯ ರಸ್ತೆಗೆ ಸಂಪರ್ಕ ಹೊಂದಿರುವ ಈ ರಸ್ತೆಯಲ್ಲಿ ಸದಾ ಜನ ಓಡಾಟ, ವಾಹನಗಳ ಓಡಾಟ ಇದ್ದರೂ ಯಾವುದೇ ಅಪಾಯ ಸಂಭವಿಸಿಲ್ಲ ಅನ್ನುವುದು ಸಮಾಧಾನಕರ ಸಂಗತಿ. ನಿನ್ನೆಯಿಂದ ಕರೆಂಟ್ ಅನ್ನುವುದೇ ಸುಳ್ಯದಲ್ಲಿ ಇರಲಿಲ್ಲ, ಇದೀಗ ಮತ್ತೊಂದು ತೊಂದರೆ ಎದುರಾಗಿದೆ