ದೇಶದ ಪ್ರತಿಷ್ಠಿತ ಯೇನೆಪೋಯ ವಿಶ್ವವಿದ್ಯಾ ನಿಲಯದ ಅಧೀನ ದಲ್ಲಿರುವ ಯೇನೆಪೋಯ ಮೆಡಿಕಲ್ ಕಾಲೇಜು 25 ವರ್ಷಗಳನ್ನು ಪೂರೈಸಿ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಉಪಕುಲಪತಿ ಯೇನೆಪೋಯ ಅಬ್ದುಲ್ಲ ಕುoಞ ಯವರನ್ನು ಮಂಗಳೂರಿನಲ್ಲಿ ಭೇಟಿ ಮಾಡಿ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ಮಾತನಾಡಿ ಜಿಲ್ಲೆ ಯಲ್ಲಿ ಅಂತರಾಷ್ಟ್ರೀಯ ಗುಣ ಮಟ್ಟದ ಶಿಕ್ಷಣ ಸಂಸ್ಥೆ ಗಳನ್ನು ಜಿಲ್ಲೆಯ ಅಭಿಮಾನವಾಗಿ ಬೆಳೆಸಿದ ಯೇನೆಪೋಯ ಸಂಸ್ಥೆ ದೇಶದ ಹೆಮ್ಮೆ, ಸಹಸ್ರಾರು ವೈದ್ಯರನ್ನು ಲೋಕಕ್ಕೆ ಸಮರ್ಪಿಸಿದ ಮತ್ತು ಟಾಟಾ ಸಂಸ್ಥೆ ಯ ಸಹಯೋಗದಲ್ಲಿ ಅತ್ಯಾದುನಿಕ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಿರುವುದು ನಿಜಕ್ಕೂ ದೇಶದ ಮಹಾ ನಗರ ಗಳಲ್ಲಿ ಸಿಗುವ ಸೌಲಭ್ಯ ಮಂಗಳೂರಿನಲ್ಲಿಯೇ ದೊರಕುವಂತಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು
ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕ Iron. ಸಂಶುದ್ದಿನ್, ಮಲೆನಾಡು ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್, ಅಲ್ ಮದೀನಾ ಮಂಜನಾಡಿ ಗೌರವ ಸಲಹೆಗಾರ ಎನ್. ಎಸ್. ಕರೀಂ ಉಪಸ್ಥಿತರಿದ್ದರು