ಮನುಷ್ಯನ ಜೀವಿತಾವಧಿಯಲ್ಲಿ ವಿದ್ಯಾರ್ಥಿ ಜೀವನ ತುಂಬಾ ಮುಖ್ಯವಾದುದು. ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಲು ವಿದ್ಯಾರ್ಜನೆಯೊಂದಿಗೆ ಶಿಸ್ತು ಹಾಗೂ ಗುರಿ ಬಹಳ ಮುಖ್ಯ ಎಂದು ಹೇಳಿದ ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಶನ್‌ನ ಕಾರ್ಯದರ್ಶಿ ಶ್ರೀ ಹೇಮನಾಥ್ ಕೆ.ವಿ.

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಶನಿವಾರ (ಆ.10 ) ಶೈಕ್ಷಣಿಕ ವರ್ಷ 2024-25 ನೆ ಸಾಲಿಗೆ ದಾಖಲಾತಿಗೊಂಡ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಸ್ವಾಗತಿಸುವ ಹಾಗೂ ಓರಿಯಂಟೇ‍ಷನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕಲಿಯಲು ಅವಕಾಶಗಳನ್ನು ಉಪಯೋಗಿಸಿಕೊಳ್ಳಲು ಹೇಳಿದರು ಜತೆಗೆ ಪದವಿ ಪಡೆಯುವುದರೊಂದಿಗೆ ಸುಶಿಕ್ಷಿತ ನಾಗರಿಕರಾಗಿ ಸಮಾಜ ಗುರುತಿಸುವ ಕೆಲಸ ಮಾಡಬೇಕು ಎಂದರು. ಬಳಿಕ ವಿದ್ಯಾರ್ಥಿಗಳ ಪೋಷಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರ ಕುಮಾರ್ ಎಂ.ಎಂ. ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿ ಈ ವರ್ಷದ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಪದವಿ ಜೊತೆಗೆ ಅವಿಯೇಷನ್ ಕೋರ್ಸ್ ಅನ್ನು ಕಲಿಯುವ ಅವಕಾಶ ಇರುವುದರ ಬಗ್ಗೆ ತಿಳಿಸಿದರು ಪದವಿ ಮುಗಿಸಿದ ತಕ್ಷಣ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಸಿಗುವಲ್ಲಿ ಉಪಯುಕ್ತವಾದ ಎವಿಯೇಷನ್ ಕೋರ್ಸ್ ಬಗ್ಗೆ ವಿವರವಾಗಿ ಪೋಷಕರಿಗೆ ತಿಳಿಸಿದರು . IQAC ನಿರ್ದೇಶಕಿ ಡಾ. ಮಮತಾ ಕೆ. ಕಾಲೇಜಿನ ನೀತಿ ನಿಯಮಗಳನ್ನು ನೂತನವಾಗಿ ದಾಖಲಾತಿಗೊಂಡ ವಿದ್ಯಾರ್ಥಿಗಳಿಗೆ ವಿವರಿಸಿದರು. ಉಪನ್ಯಾಸಕಿ ಕೃತಿಕಾ ಪ್ರಾರ್ಥಿಸಿದರು., ಭವ್ಯ ರಜತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪೋಷಕರು, ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *