ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ ಕೋಶ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ಭಾರತ್ ಕೇರ್ ಸಂಸ್ಥೆ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಹಾಗೂ ಸೈಬರ್ ಸೆಕ್ಯುರಿಟಿ ಕುರಿತು ಎರಡು ದಿನಗಳ ವಿಶೇಷ ತರಬೇತಿ ಕಾರ್ಯಾಗಾರವನ್ನು ಆ. 10 ಮತ್ತು ಆ. 11ರಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಭಾರತ್ ಕೇರ್ ಸಂಸ್ಥೆಯಿಂದ ಹನಿವೆಲ್ ಫ್ಯೂಚರ್ ಸ್ಕಿಲ್ ಎಡ್ಜ್ ಕಾರ್ಯಕ್ರಮದಡಿಯಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಭಾರತ್ ಕೇರ್ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕರಾದ ಸುಬ್ರಮಣಿ ಪಿ.ವಿ. ಇವರ ನೇತೃತ್ವದಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಡೇಟಾ ಸೈಂಟಿಸ್ಟ್ ಆಗಿರುವ ಕೋಡ್ ಅಟ್ ಫಸ್ಟ್ ಸೈಟ್ನ ಸ್ಥಾಪಕರಾದ ದೆಹಲಿಯ ಗುರುದೇವ್ ಸಿಂಗ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ಅವರು ಕೃತಕ ಬುದ್ಧಿಮತ್ತೆ, ವ್ಯವಹಾರ ತಂತ್ರ ಮತ್ತು ಪ್ರಸ್ತುತ ಶಿಕ್ಷಣದಲ್ಲಿ ಪ್ರಭಾವಶಾಲಿಯಾಗಿ ಬಳಸಬಹುದಾದ ಪೈಥಾನ್, ಎಸ್.ಕ್ಯೂ.ಎಲ್, ಮೆಷಿನ್ ಲರ್ನಿಂಗ್, ಎಲ್.ಎಲ್.ಎಂ ಅಪ್ಲಿಕೇಶನ್ಗಳು, ಪವರ್ ಬಿಐ ನಂತಹ ವ್ಯಾಪಾರ ಬುದ್ಧಿಮತ್ತೆ ಪರಿಕರಗಳನ್ನು ಪ್ರಾಯೋಗಿಕವಾಗಿ ಬಳಸುವ ಕುರಿತು ತರಬೇತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರ ಕುಮಾರ್ ಎಮ್ ಎಮ್ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕಿ ಡಾ. ಮಮತಾ ಕೆ. ಉಪಸ್ಥಿತರಿದ್ದು ಶುಭಹಾರೈಸಿದರು. ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ ಕೋಶದ ಸಂಯೋಜಕಿ ಅನಂತಲಕ್ಷ್ಮಿಯವರು ಕಾರ್ಯಕ್ರಮ ಸಂಘಟಿಸಿ ನಿರೂಪಿಸಿ ಧನ್ಯವಾದ ಸಲ್ಲಿಸಿದರು. ಕಾಲೇಜಿನ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿ ತರಬೇತಿ ಪಡೆದುಕೊಂಡರು. ಎಲ್ಲಾ ಅಧ್ಯಾಪಕರ ಅಧ್ಯಾಪಕೇತರ ವೃಂದದವರು ಸಹಕರಿಸಿದರು.

Leave a Reply