ಅಹಮದ್ ಕುಂಞಿ ತೆಕ್ಕಿಲ್ ನಿಧನ

ಸುಳ್ಯ: ಸಂಪಾಜೆ ಗ್ರಾಮದ ಪೇರಡ್ಕ ಗೂನಡ್ಕ ನಿವಾಸಿ, ದಿವಂಗತ ತೆಕ್ಕಿಲ್ ಮೊಹಮ್ಮದ್ ಹಾಜಿ ಹಾಗೂ ಪಟೇಲ್ ಆಮಿನ ಹಜ್ಜುಮ್ಮ ದಂಪತಿಯ ಪ್ರಥಮ ಪುತ್ರ ಅಹಮದ್ ಕುಂಞಿ ತೆಕ್ಕಿಲ್ (86) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪೇರಡ್ಕ ದರ್ಗ ಶರೀಫ್’ಗೆ ಹಾಗೂ ಮುಹಿಯದ್ದೀನ್ ಮಸೀದಿಗೆ ಸ್ಥಳ ನೀಡಿದ ದಾನಿಯಾಗಿದ್ದರು.
ಮೃತರು ಪುತ್ರರಾದ ಬಶೀರ್ ತೆಕ್ಕಿಲ್, ಅಬ್ದುಲ್ ಖಾದರ್ ತೆಕ್ಕಿಲ್, ಮುಸ್ತಫ ತೆಕ್ಕಿಲ್, ಆರೀಫ್ ತೆಕ್ಕಿಲ್, ಪುತ್ರಿ ಸಫಿಯಾ ತೆಕ್ಕಿಲ್, ಸಹೋದರರಾದ ಟಿ.ಎಂ. ಬಾಬ ಹಾಜಿ ತೆಕ್ಕಿಲ್ ಅರಂತೋಡು, ಟಿ.ಎಂ. ಮೂಸಾನ್ ಹಾಜಿ ತೆಕ್ಕಿಲ್ ಗೂನಡ್ಕ, ಸಹೋದರಿಯರಾದ ಬೀಫಾತಿಮ ಅಬ್ಬಾಸ್ ತೆಕ್ಕಿಲ್ ಅರಂತೋಡು, ಆಯಿಷಾ ಹಜ್ಜುಮ್ಮ ತೆಕ್ಕಿಲ್ ಮುನಂಬ ಚೆಂಗಳ, ಜಯ್ಬನ್ನಿಸ ಇಕ್ಬಾಲ್ ತೆಕ್ಕಿಲ್ ಬೆಂಗಳೂರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ದರ್ಜೆ)  ಟಿ.ಎಂ. ಶಹೀದ್ ತೆಕ್ಕಿಲ್ ಅವರ ಸಹೋದರ ಪುತ್ರರಾಗಿದ್ದಾರೆ.  ಇಂದು ರಾತ್ರಿ ಮುಹಿಯದ್ದೀನ್ ಜುಮಾ ಮಸೀದಿ ಪೇರಡ್ಕದಲ್ಲಿ ದಫನ ಕಾರ್ಯ ನಡೆಯಲಿದೆ.

Be the first to comment

Leave a Reply

Your email address will not be published.


*