ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ನೂತನ ರಾಜ್ಯಾಧ್ಯಕ್ಷೆಯಾಗಿ ಶಾಹಿದಾ ತಸ್ನೀಮ್ ಆಯ್ಕೆ

News

ಬೆಂಗಳೂರು: ಸೆಪ್ಟೆಂಬರ್ 11: ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಕರ್ನಾಟಕದ 2026ರ ರಾಜ್ಯ ಪ್ರತಿನಿಧಿ ಸಭೆಯು ಸೆಪ್ಟೆಂಬರ್ 13, 2026ರಂದು ಬೆಂಗಳೂರಿನ ಪಾಲನ ಭವನದಲ್ಲಿ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾರವರ ಅದ್ಯಕ್ಷತೆಯಲ್ಲಿ ನಡೆಯಿತು .
ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯದ್ಯಕ್ಷರಾದ ಅಬ್ದುಲ್ ಮಜೀದ್ ರವರು ಗಿಡಕ್ಕೆ ನೀರುಣಿಸುವ ಮೂಲಕ
ಕಾರ್ಯಕ್ರಮವನ್ನು ಉದ್ಘಾಟಿಸಿ ಉದ್ಘಾಟನಾ ಭಾಷಣ ನೆರವೇರಿಸಿದರು.

ರಾಜ್ಯ ಪ್ರತಿನಿಧಿ ಸಭೆಯಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ನಡೆಸಿದ ವಿವಿಧ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಚಟುವಟಿಕೆಗಳ ವಿಸ್ತೃತ ವರದಿಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿನಸ್ರಿಯಾ ಬೆಳ್ಳಾರೆ. ಕಾರ್ಯದರ್ಶಿ ಝುಲೇಖ ಬಜ್ಪೆ ಹಾಗೂ ಸಾನಿಯಾ ಮೈಸೂರು ವರದಿಯನ್ನು ಮಂಡಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಮಹಿಳಾ ಪ್ರತಿನಿಧಿಗಳು ಹಾಗೂ ರಾಜ್ಯ ಮಟ್ಟದ ನಾಯಕಿಯರು ಭಾಗವಹಿಸಿರುವ ಈ ಪ್ರತಿನಿಧಿ ಸಭೆಯಲ್ಲಿ 2026–29ರ ಅವಧಿಗೆ ನೂತನ ಕರ್ನಾಟಕ ರಾಜ್ಯ ಸಮಿತಿಯ ನಾಯಕಿಯರ ಆಯ್ಕೆ ಪ್ರಕ್ರಿಯೆ ನಡೆಯಿತು . ರಾಷ್ಟ್ರೀಯ ಸಮಿತಿಯ ಫಾಯೇಝ ಶಫೀಕ ಹಾಗೂ Adv. H ಖಾಲಿದಾ ರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

2026-29 ರ ಸಾಲಿನ ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕದ ಅಧ್ಯಕ್ಷೆಯಾಗಿ ಶಾಹಿದಾ ತಸ್ನೀಮ್ ಉಪಾಧ್ಯಕ್ಷರಾಗಿ ಫಾತಿಮಾ ನಸೀಮಾ ಹಾಗೂ ಮೇರಿ ವೇಗಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನಸ್ರಿಯಾ ಬೆಳ್ಳಾರೆ ಕಾರ್ಯದರ್ಶಿಯಾಗಿ ಝುಲೇಖ ಬಜ್ಪೆ ನಾಝಿಯಾ ಉಡುಪಿ ಆಶಾ ಚಿಕ್ಕಮಗಳೂರು ಹಾಗೂ ಕೋಶಾಧಿಕಾರಿಯಾಗಿ Adv. ಹಿನಾ ಐಜಾಝ್ ಆಯ್ಕೆಯಾದರು.
ಸಮಿತಿ ಸದಸ್ಯರಾಗಿ ರಮ್ಲತ್ ಮಂಗಳೂರು, ಹಸೀನಾ ಶಿಮೊಗ್ಗ, ಝೋಹರ ಉಡುಪಿ, ನುಝ್ಹತ್ ಯಾದ್ಗಿರಿ, ಅಫ್ರೋಝ್ ಹಾಸನ, ಸಾನಿಯ ಮೈಸೂರು ರವರು ಆಯ್ಕೆಯಾದರು.

ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿದು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.

  1. ಮಹಿಳೆಯರಿಗೆ 50% ರಾಜಕೀಯ ಪ್ರಾತಿನಿಧ್ಯ ಹಾಗೂ ಅಹಿಂದ ವರ್ಗಗಳ ಮಹಿಳೆಯರಿಗೆ ಸೂ ಕ್ತ ಒಳ ಮೀಸಲಾತಿ ನೀಡಬೇಕು.
  2. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಬೇಕು.
  3. ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಿ ದೋಷಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.
  4. ಮಹಿಳೆಯರ ಮತದಾನದ ಹಕ್ಕಿಗೆ ತೊಡಕುಂಟು ಮಾಡುತ್ತಿರುವ ಪ್ರಕ್ರಿಯೆಯಿಂದ ರಕ್ಷಣೆ ಸಿಗುವಂತೆ ಮಾಡಬೇಕು.
  5. ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು.

ಮಹಿಳೆಯರ ಹಕ್ಕು, ಗೌರವ, ಸುರಕ್ಷತೆ, ಸ್ವಾವಲಂಬನೆ ಮತ್ತು ನಾಯಕತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳು ಹಾಗೂ ಕಾರ್ಯತಂತ್ರಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್ ರವರು ಸಮಾರೋಪ ಭಾಷಣ ಮಾಡಿದರು.ನಸ್ರಿಯಾ ಬೆಳ್ಳಾರೆ ಸ್ವಾಗತಿಸಿ ಧನ್ಯವಾದ ನೆರವೇರಿಸಿದರು.

ವಿಮೆನ್ ಇಂಡಿಯಾ ಮೂವ್ಮೆಂಟ್
ಕರ್ನಾಟಕ ರಾಜ್ಯ

Leave a Reply

Your email address will not be published. Required fields are marked *