ಸುಳ್ಯ: ಇಲ್ಲಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಹಾಗೂ ನೂರುಲ್ ಇಸ್ಲಾಂ ಮದ್ರಸ (2396) ವತಿಯಿಂದ ‘ಅಲ್-ಫರಾಹ್ ಮೀಲಾದ್ ಫೆಸ್ಟ್ 2026’ ಕಾರ್ಯಕ್ರಮವು ಇದೇ ಸೆಪ್ಟೆಂಬರ್ 12ರಂದು ಶನಿವಾರ ಶಾಂತಿನಗರದ ನೂರುಲ್ ಇಸ್ಲಾಂ ಮದ್ರಸ ಕ್ಯಾಂಪಸ್ನಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ಅಂದು ಮಧ್ಯಾಹ್ನ 2:00 ಗಂಟೆಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ವೇಳಾಪಟ್ಟಿ:
ಮಧ್ಯಾಹ್ನ 02:00 ಗಂಟೆಗೆ: ಮೌಲಿದ್ ಪಾರಾಯಣ ಕಾರ್ಯಕ್ರಮ.
ಮಧ್ಯಾಹ್ನ 03:00 ಗಂಟೆಗೆ: ವಿದ್ಯಾರ್ಥಿಗಳ ಕಲಾ ಪ್ರತಿಭೆಗಳ ಪ್ರದರ್ಶನ ‘ಮಕ್ಕಳ ಪ್ರತಿಭಾ ಸಂಗಮ’.
ಮಗ್ರಿಬ್ ನಮಾಜಿನ ನಂತರ: ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಪವಿತ್ರ ಪ್ರವಾದಿ ಪ್ರೇಮ ಸಾರುವ ‘ಹುಬ್ಬುರ್ರಸೂಲ್’ ಪ್ರಭಾಷಣ.
ಸಮಾರಂಭದಲ್ಲಿ ನಾಡಿನ ಪ್ರಸಿದ್ಧ ಉಲಮಾಗಳು, ಉಮರಾ ನೇತಾರರು, ಧಾರ್ಮಿಕ ವಿದ್ವಾಂಸರು ಹಾಗೂ ಗಣ್ಯ ವ್ಯಕ್ತಿಗಳು ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವ ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಾರ್ಯಕ್ರಮದ ಮುಕ್ತಾಯದ ಬಳಿಕ ಸೀರಣಿ (ತಬರ್ರುಕ್) ವಿತರಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಶಾಂತಿನಗರ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್, ನೂರುಲ್ ಇಸ್ಲಾಂ ಮದ್ರಸ ಕಮಿಟಿ ಹಾಗೂ ಸ್ವಲಾತ್ ಮಜ್ಲಿಸ್ ಕಮಿಟಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
