ಮುಚ್ಚಿಲ: ಕೆ.ಎಸ್. ಗೌಡ ಕ್ರೀಡಾಂಗಣದಲ್ಲಿ ಕ್ಲಾಸಿಕ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ (ರಿ.) ಮುಚ್ಚಿಲ ಇದರ ಆಶ್ರಯದಲ್ಲಿ ಜರುಗಿದ ‘ಕ್ಲಾಸಿಕ್ ಟ್ರೋಫಿ 2026’ ಒಂಬತ್ತು ಜನರ, 8 ತಂಡಗಳ ಲೀಗ್ ಮಾದರಿಯ ಫುಟ್‌ಬಾಲ್ ಪಂದ್ಯಾಟವು ಯಶಸ್ವಿಯಾಗಿ ಸಂಪೂರ್ಣಗೊಂಡಿದೆ.
ರೊಮಾಂಚನಕಾರಿಯಾಗಿ ನಡೆದ ಈ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಸಿಎಫ್‌ಸಿ ಕರಿಂಬಿಲ (CFC Karimbila) ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡರೆ, ವೈಕಿಂಗ್ ಎಫ್‌ಸಿ ಮುಚ್ಚಿಲ (Viking FC Mcl) ತಂಡವು ರನ್ನರ್ಸ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ವೈಯಕ್ತಿಕ ಪ್ರಶಸ್ತಿ ವಿಜೇತರು:
- ಉತ್ತಮ ಡಿಫೆಂಡರ್ (Best Defender): ಶಾನಿಫ್ (Shanif)
- ಉತ್ತಮ ಫಾರ್ವರ್ಡ್ (Best Forward): ಫಹಾದ್ (Fahad)
- ಅತಿ ಹೆಚ್ಚು ಗೋಲುಗಳಿಸಿದ ಆಟಗಾರ (Highest Scorer): ಸಾದಿಕ್ (Sadik)
- ಉತ್ತಮ ಗೋಲ್‌ಕೀಪರ್ (Best Goalkeeper): ಮಾಜ್, ಸುಳ್ಯ (Maaz Sullia)
- ಫೈನಲ್ ಪಂದ್ಯದ ಶ್ರೇಷ್ಠ ಆಟಗಾರ (Man of the Match – Final): ಚಾಜಿ (Chaji), ಪಡೆದುಕೊಂಡರು.
ಫುಟ್‌ಬಾಲ್ ಪ್ರೇಮಿಗಳ ಹರ್ಷೋದ್ಗಾರದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡ ಈ ರೋಚಕ ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ಮತ್ತು ಆಟಗಾರರಿಗೆ ಆಯೋಜಕರ ಕಡೆಯಿಂದ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
