ಗಾಂಧಿನಗರದ ಹೆಚ್.ಪಿ. ಪೆಟ್ರೋಲ್ ಬಂಕ್ ಹತ್ತಿರ ಅನಿರೀಕ್ಷಿತವಾಗಿ ಹಸುವೊಂದು ಅಡ್ಡ ಬಂದಿದ್ದರಿಂದ ವ್ಯಾಗನಾರ್ (WagonR) ಕಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಕಾರಿನ ಮುಂಭಾಗ ಸ್ವಲ್ಪ ಮಟ್ಟಿಗೆ ಜಖಂಗೊಂಡಿದ್ದು, ಅದೃಷ್ಟವಶಾತ್ ಯಾರಿಗೂ ಹಾಗೂ ಹಸುವಿಗೆ ಯಾವುದೇ ಗಂಭೀರ ಸ್ವರೂಪದ ಗಾಯಗಳಾಗಿಲ್ಲ, ಎಂದು ತಿಳಿದುಬಂದಿದೆ.
