ಖ್ಯಾತ ಗಾನಗಂಧರ್ವ ಶಶಿಧರ್ ಕೋಟೆಯಿಂದ ನ್ಯಾಯವಾದಿ ಎಂ. ವೆಂಕಪ್ಪ ಗೌಡರ ನೂತನ ಕಚೇರಿಗೆ ಭೇಟಿ; ಶುಭ ಹಾರೈಕೆ

News

ಸುಳ್ಯ/ಬೆಂಗಳೂರು: ಖ್ಯಾತ ಗಾಯಕ, ನಿರೂಪಕ ಹಾಗೂ ಚಲನಚಿತ್ರ ನಟ ‘ಗಾನಗಂಧರ್ವ’ ಶಶಿಧರ್ ಕೋಟೆಯವರು ಅರೋಹಿ ಎನ್ ಕ್ಲೇವ್‌ನಲ್ಲಿರುವ ನ್ಯಾಯವಾದಿ ಎಂ. ವೆಂಕಪ್ಪ ಗೌಡ ಅವರ ನೂತನ ಕಚೇರಿಗೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ.

ಈ ನೂತನ ಕಚೇರಿ ಉದ್ಘಾಟನಾ ಸಂಭ್ರಮ ಹಾಗೂ ಶುಭ ಹಾರೈಕೆ ಸಮಾರಂಭದಲ್ಲಿ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉದ್ಯಮಿಗಳಾದ ಡಿ.ಬಿ. ಬಾಲಕೃಷ್ಣ, ನ್ಯಾಯವಾದಿ ಶ್ಯಾಮ್ ನಿಡ್ಯಮಲೆ ಹಾಗೂ ಸುಪ್ರೀತ್ ಮೋಂಟಡ್ಕ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು, ನೂತನ ಕಚೇರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

Leave a Reply

Your email address will not be published. Required fields are marked *