ಅಡ್ಕಾರ್: ಭೀಕರ ಅಪಘಾತ; ಪಾದಚಾರಿ ಮೇಲೆ ಹರಿದ ಗ್ಯಾಸ್ ಲಾರಿ, ಸ್ಥಳದಲ್ಲೇ ಸಾವು

News

ಅಡ್ಕಾರ್ ಗೋಡಂಬಿ ಕಾರ್ಖಾನೆ ಸಮೀಪ ಬಸ್‌ನಿಂದ ಇಳಿದು ರಸ್ತೆ ದಾಟಲು ಯತ್ನಿಸುತ್ತಿದ್ದ ಪಾದಚಾರಿಯೊಬ್ಬರ ಮೇಲೆ ಗ್ಯಾಸ್ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ಅಡ್ಕಾರ್ ನಲ್ಲಿ  ಬಸ್‌ನಿಂದ ಕೆಳಗೆ ಇಳಿದ ವ್ಯಕ್ತಿ ರಸ್ತೆ ದಾಟುತ್ತಿದ್ದ ವೇಳೆ ಗ್ಯಾಸ್ ಲಾರಿ ಅವರ ಮೇಲೆ ಹಾಯ್ದ ಪರಿಣಾಮ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಅವರು ಸ್ಥಳದಲ್ಲೇ ಕೊನೆಯೆಳೆದಿದ್ದಾರೆ.

ಘಟನಾ ಸ್ಥಳಕ್ಕೆ ಲೈಫ್‌ಕೇರ್ ಆಂಬ್ಯುಲೆನ್ಸ್ ಸಿಬ್ಬಂದಿಗಳಾದ ರಫೀಕ್ ಮತ್ತು ಪುನೀತ್ ಸಂಕೇಶ್ ಅವರು ಧಾವಿಸಿ, ಮೃತದೇಹವನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.

Leave a Reply

Your email address will not be published. Required fields are marked *