ಅರಂತೋಡು ಬದ್ರಿಯಾ ಜುಮಾ ಮಸೀದಿ ಮೇಲಂತಸ್ತು ಕಾಮಗಾರಿ ವೀಕ್ಷಿಸಿದ ಟಿ.ಎಂ. ಶಾಹೀದ್ ತೆಕ್ಕಿಲ್

News

ಅರಂತೋಡು: ಕರ್ನಾಟಕ ಸರ್ಕಾರದ ವಕ್ಫ್ ಇಲಾಖೆಯಿಂದ ಮಂಜೂರಾದ ಅನುದಾನದಡಿ ನೆರವೇರುತ್ತಿರುವ ಅರಂತೋಡು ಬದ್ರಿಯಾ ಜುಮಾ ಮಸೀದಿಯ ಮೇಲಂತಸ್ತು ಕಟ್ಟಡ ನಿರ್ಮಾಣ ಕಾಮಗಾರಿಯ ಪ್ರಗತಿಯನ್ನು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ (ಸಚಿವ ದರ್ಜೆ) ಟಿ.ಎಂ. ಶಾಹೀದ್ ತೆಕ್ಕಿಲ್ ಅವರು ಸೆಪ್ಟೆಂಬರ್ 5 ರಂದು ಭೇಟಿ ನೀಡಿ ವೀಕ್ಷಿಸಿದರು.
ಕಾಮಗಾರಿ ವೀಕ್ಷಿಸಿ ಮಾತನಾಡಿದ ಟಿ.ಎಂ. ಶಾಹೀದ್ ತೆಕ್ಕಿಲ್ ಅವರು, “ಮಸೀದಿಯ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಈ ವಿಷಯವನ್ನು ಅಲ್ಪ ಸಂಖ್ಯಾತ ವ್ಯವಹಾರಗಳು ಹಾಗೂ ಹಜ್ ಮತ್ತು ವಖ್ಫ್ ಸಚಿವ ಯು.ಟಿ. ಖಾದರ್ ಅವರ ಗಮನಕ್ಕೆ ತಂದು, ಯೋಜನೆಗೆ ಇನ್ನು ಹೆಚ್ಚಿನ ಅನುದಾನವನ್ನು ಆದಷ್ಟು ಬೇಗ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಮಾಅತ್ ಖತೀಬರಾದ ಬಹು ಆಸಿಫ್ ಅಝ್ಹರಿ, ಅಧ್ಯಕ್ಷರಾದ ಅಶ್ರಫ್ ಗುಂಡಿ, ಕಾರ್ಯದರ್ಶಿ ಕೆ.ಎಂ. ಮೂಸಾನ್, ಕೋಶಾಧಿಕಾರಿ ಕೆ. ಅಬೂಬಕರ್ ಪಾರೆಕಲ್ಲು, ನಿರ್ದೇಶಕರಾದ ಹಾಜಿ ಅಬ್ದುಲ್ ಖಾದರ್ ಪಟೇಲ್, ಎ. ಹನೀಫ್, ಅಮೀರ್ ಕುಕ್ಕುಂಬಳ, ಶಂಸುದ್ದೀನ್ ಪೆಲ್ತಡ್ಕ, ಸದರ್ ಉಸ್ತಾದ್ ರವೂಫ್ ಅಝ್ಹರಿ, ಅಬ್ದುಲ್ ರಹಮಾನ್ ಝುಹುರಿ ಸೇರಿದಂತೆ ಜಮಾಅತ್‌ನ ಪ್ರಮುಖರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *