ಅರಂತೋಡು/ಸುಳ್ಯ: ಗ್ರಾಮೀಣ ಭಾಗದ ಎಲ್ಪಿಜಿ (LPG) ಗ್ರಾಹಕರಿಗೆ ಕೇಂದ್ರ ಸರ್ಕಾರ ಮತ್ತು ಗ್ಯಾಸ್ ಏಜೆನ್ಸಿಗಳು ಸಿಹಿ ಸುದ್ದಿ ನೀಡಿದ್ದು, ಇನ್ಮುಂದೆ ನಗರ ಪ್ರದೇಶಗಳ ಮಾದರಿಯಲ್ಲೇ ಪ್ರತಿ 25 ದಿನಗಳಿಗೊಮ್ಮೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಹಿಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಗ್ಯಾಸ್ ಬುಕಿಂಗ್ ನಡುವಿನ ಅವಧಿಯನ್ನು 45 ದಿನಗಳಿಗೆ ಹೆಚ್ಚಿಸಲಾಗಿತ್ತು. ಆದರೆ, ಪ್ರಸ್ತುತ ಅನಿಲ ಪೂರೈಕೆ ವ್ಯವಸ್ಥೆ ಸಂಪೂರ್ಣವಾಗಿ ಸುಧಾರಿಸಿದ್ದು, ಯಾವುದೇ ಕೊರತೆ ಇಲ್ಲದಿರುವುದರಿಂದ ಈ ನಿಯಮವನ್ನು ಸಡಿಲಗೊಳಿಸಲಾಗಿದೆ.
ಇದೀಗ ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಒಂದೇ ರೀತಿಯ ಅಂದರೆ 25 ದಿನಗಳ ಗ್ಯಾಪ್ನಲ್ಲಿ ಮರುಬುಕಿಂಗ್ (Refill Booking) ಮಾಡಲು ಅವಕಾಶ ನೀಡಿ ಆದೇಶಿಸಲಾಗಿದೆ. ಈ ಕುರಿತು ಅರಂತೋಡಿನ ‘ತೆಕ್ಕಿಲ್ ಹೆಚ್.ಪಿ ಗ್ರಾಮೀಣ್ ಎಲ್ಪಿಜಿ ವಿತರಕರು’ (Thekkil HP Gramin LPG Vitarak) ಪ್ರಕಟಣೆ ಹೊರಡಿಸಿದ್ದು, ಗ್ರಾಹಕರು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
