9/11,ವಿನ್ಯಾಸ ನಕ್ಷೆ ಅನುಮೋದನೆ, ಕಟ್ಟಡ ಪರವಾನಿಗೆಗೆ ಕರಾವಳಿಗೆ ಪ್ರತ್ಯೇಕ ವಲಯ ನಿಯಮಾವಳಿ ರಚಿಸುವಂತೆ ಮತ್ತು ಪ್ರತ್ಯೇಕ ವಿಭಾಗೀಯ ನಿರ್ದೇಶಕ ಕಚೇರಿ ಸ್ಥಾಪಿಸುವಂತೆ ಒತ್ತಾಯ
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಪ್ರಾಧಿಕಾರ ಗಳ ಒಕ್ಕೂಟದ ಪದಾಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕರಾದ ಬಿ. ಕೆ. ಹರಿಪ್ರಸಾದ್ ರವರನ್ನು ಮಂಗಳೂರು ಸರ್ಕ್ಯುಟ್ ಹೌಸ್ ನಲ್ಲಿ ಭೇಟಿ ಮಾಡಿ 9/11 ಸಮಸ್ಯೆ, ಕನ್ವರ್ಷನ್, ವಿನ್ಯಾಸ ನಕ್ಷೆ ಅನುಮೋದನೆ, ಕಟ್ಟಡ ಪರವಾನಿಗೆ ಮೊದಲಾದ ಸಮಸ್ಯೆ ಗಳಿಗೆ ಪರಿಹಾರ ಕಂಡು ಕೊಳ್ಳಲು ಕರಾವಳಿ ಜಿಲ್ಲೆಗಳಿಗೆ ಏಕ ರೂಪ ನಿಯಮ ಗಳನ್ನು ಪಾಲಿಸಲು ಪ್ರತ್ಯೇಕ ವಲಯ ನಿಯಮಾವಳಿ ರಚಿಸಬೇಕು,
ಪ್ರಸ್ತುತ ಕರಾವಳಿ ಜಿಲ್ಲೆಗಳು ಮೈಸೂರು ವಿಭಾಗಕ್ಕೆ ಸೇರಿದ್ದು ಮಂಜೂರಾತಿ ವಿಳಂಬ ಗೊಳ್ಳುತ್ತಿದೆ ಮಂಗಳೂರಿನಲ್ಲಿ ಜಂಟಿ ನಿರ್ದೇಶಕರ ಕಚೇರಿ ಸ್ಥಾಪಿಸಿ ಸಾರ್ವಜನಿಕ ರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಬಿ ಕೆ ಸಿ ಯವರಲ್ಲಿ ನಿಯೋಗ ಬೇಡಿಕೆ ಸಲ್ಲಿಸಿದರು
ನಿಯೋಗದಲ್ಲಿ
ಒಕ್ಕೂಟದ ಸಂಚಾಲಕ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ್ ಹೇರೂರ್, ಒಕ್ಕೂಟ ದ ಸಂಚಾಲಕ ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ ಸುಳ್ಯ, ಮೂಡಬಿದ್ರಿ ನಗರ ಯೋಜನಾ ಪ್ರಾಧಿಕಾರ ಸದಸ್ಯ ಶೇಖರ ಪೂಜಾರಿ, ಉಡುಪಿ ಪ್ರಾಧಿಕಾರ ಸದಸ್ಯರಾದ ಗಿರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು
