ಅರಂಬೂರು ಟರ್ಫ್‌ನಲ್ಲಿ ಜರ್ಸಿ ಬಿಡುಗಡೆ!;

News Sports

ಅಕ್ಷಯ್ ಕೆ.ಸಿ. ಪ್ರಾಯೋಜಕತ್ವದಲ್ಲಿ SFC ಸುಳ್ಯ Under-15 ಆಟಗಾರರ ಜರ್ಸಿ ಬಿಡುಗಡೆ!

ಸುಳ್ಯ: ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ SFC ಸುಳ್ಯ ಫುಟ್‌ಬಾಲ್ ಕ್ಲಬ್ ತರಬೇತಿ ನೀಡುತ್ತಿರುವ 15 ವರ್ಷ ವಯೋಮಾನದ (Under-15) ಆಟಗಾರರ ಹೊಸ ಜರ್ಸಿ ಬಿಡುಗಡೆ ಸಮಾರಂಭವು ಅರಂಬೂರಿನ ಟರ್ಫ್ ಮೈದಾನದಲ್ಲಿ ವಿಜ್ರಂಭಣೆಯಿಂದ ನೆರವೇರಿತು.

ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಯುವ ನಾಯಕ ಅಕ್ಷಯ್ ಕೆ.ಸಿ. ಅವರು ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿ ಜರ್ಸಿ ಬಿಡುಗಡೆಗೊಳಿಸಿದರು.

“ಚಾಯ್ ಚರ್ಚೆ”ಯಿಂದ ರೂಪುಗೊಂಡ ಫುಟ್‌ಬಾಲ್ ಕ್ರಾಂತಿ:

ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ಷಯ್ ಕೆ.ಸಿ. ಅವರು, “ತರಬೇತುದಾರರು ಕುಳಿತು ಚಹಾ ಕುಡಿಯುತ್ತಾ (Chai) ನಡೆಸಿದ ಒಂದು ಸಾಮಾನ್ಯ ಚರ್ಚೆ, ಇಂದು ಇಷ್ಟೊಂದು ಸುಂದರವಾಗಿ ರೂಪ ಪಡೆದುಕೊಂಡಿದೆ. ಸುಳ್ಯದ ಉದಯೋನ್ಮುಖ ಫುಟ್‌ಬಾಲ್ ಆಟಗಾರರಿಗೆ ಉತ್ತಮ ತರಬೇತಿ ನೀಡಿ, ಸರಿಯಾದ ಹಾದಿ ತೋರಿಸಲು ಆ ಚರ್ಚೆಯಲ್ಲಿ ನಾಂದಿ ಹಾಡಿತು . ಸುಳ್ಯದ ಕ್ರೀಡಾಪಟುಗಳಿಗೆ ನನ್ನ ಕಡೆಯಿಂದ ಎಲ್ಲ ರೀತಿಯ ಬೆಂಬಲ ಸದಾ ಇರಲಿದೆ. ಆದರೆ ಮೈದಾನದಲ್ಲಿ ಆಟಗಾರರನ್ನು ನಿಜವಾದ ಸಾಧಕರನ್ನಾಗಿ ರೂಪಿಸುವ ಶ್ರಮ ತರಬೇತುದಾರರದ್ದು” ಎಂದು ಕ್ರೀಡಾಪಟುಗಳನ್ನು ಹಾಗೂ ತರಬೇತುದಾರರನ್ನು ಶ್ಲಾಘಿಸಿದರು.

ಪ್ರಮುಖರ ಉಪಸ್ಥಿತಿ: ಕಾರ್ಯಕ್ರಮದಲ್ಲಿ KVG ಸಂಸ್ಥೆಯ ಸ್ಪೋರ್ಟ್ಸ್ ಕೋ-ಆರ್ಡಿನೇಟರ್ ಕಾರ್ತಿಕ್, ಆಡಳಿತ ಮಂಡಳಿ ಸದಸ್ಯರಾದ ರಜತ್ ಹಾಗೂ ಕ್ಲಬ್‌ನ ಪ್ರಮುಖರು ಉಪಸ್ಥಿತರಿದ್ದರು.

ಯುವ ಆಟಗಾರರಿಗೆ ಕಠಿಣ ತರಬೇತಿ ನೀಡುತ್ತಿರುವ ಕೋಚ್‌ಗಳಾದ ರಿಜ್ವಾನ್, ರವೂಫ್, ಮತ್ತು ವೈಷ್ಣವ್  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ನಿಝಾರ್ ಶೈನ್ ಅವರು ತಮ್ಮ ಸೊಗಸಾದ ಶೈಲಿಯಲ್ಲಿ ನಡೆಸಿಕೊಟ್ಟರು. SFC ಸುಳ್ಯ ಕ್ಲಬ್‌ನ ಈ ಹೆಜ್ಜೆಗೆ ಇಡೀ ಸುಳ್ಯ ಕ್ರೀಡಾಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *