ಒಂಟಿಯಾಗಿ ನದಿ ಸ್ವಚ್ಛಗೊಳಿಸಿ ನೆದರ್‌ಲ್ಯಾಂಡ್ಸ್‌ನಿಂದ ಉದ್ಯೋಗದ ಕರೆ ಪಡೆದ ‘ಬಿಟ್ಟು ತಬಾಹಿ’

News

ಸಾಮಾಜಿಕ ಜಾಲತಾಣಗಳಲ್ಲಿ ‘ಬಿಟ್ಟು ತಬಾಹಿ’ ಎಂದೇ ಖ್ಯಾತಿ ಪಡೆದಿರುವ ಮಧ್ಯಪ್ರದೇಶದ 21 ವರ್ಷದ ಬಿ.ಎಸ್ಸಿ ವಿದ್ಯಾರ್ಥಿ ಸುರೇಂದ್ರ ಸಿಂಗ್ ಚೌಧರಿ, ತಮ್ಮ ಏಕಾಂಗಿ ಶ್ರಮದಿಂದ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ.

ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಬ್ಯಾಓರಾ ನಿವಾಸಿಯಾದ ಸುರೇಂದ್ರ ಸಿಂಗ್, ಅಲ್ಲಿನ ತೀವ್ರ ಕಲುಷಿತಗೊಂಡಿದ್ದ ‘ಅಜ್ನಾರ್ ನದಿ’ಯನ್ನು ಸ್ವಚ್ಛಗೊಳಿಸಲು ನಿರ್ಧರಿಸಿದ್ದರು. ಜನವರಿ 26 ರಂದು ತಮ್ಮದೇ ಸ್ವಂತ ಖರ್ಚಿನಲ್ಲಿ (ಸುಮಾರು ₹30,000) ಯಾವುದೇ ರಕ್ಷಣಾತ್ಮಕ ಉಪಕರಣಗಳಿಲ್ಲದೆ ನದಿಗೆ ಇಳಿದು, ಪ್ಲಾಸ್ಟಿಕ್ ಹಾಗೂ ಇತರ ಕಸವನ್ನು ತೆರವುಗೊಳಿಸಲು ಪ್ರಾರಂಭಿಸಿದರು. ನದಿಯ ‘ಮೊದಲು ಮತ್ತು ನಂತರ’ದ (Before & After) ಬದಲಾವಣೆಯ ವಿಡಿಯೋ ಮತ್ತು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ನಂತರ, ಈ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಯಿತು.

ಆಫರ್ ಬಂದಿದ್ದು ಹೇಗೆ? ಬಿಟ್ಟು ತಬಾಹಿ ಅವರ ಈ ಶ್ರಮ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ನೆದರ್‌ಲ್ಯಾಂಡ್ಸ್ ಮೂಲದ ಪರಿಸರ ಸಂಸ್ಥೆ ‘ದಿ ಓಷನ್ ಕ್ಲೀನಪ್’ (The Ocean Cleanup) ಸ್ಥಾಪಕ ಹಾಗೂ ಸಿಇಒ ಬೊಯಾನ್ ಸ್ಲಾಟ್ (Boyan Slat), ಎಕ್ಸ್ (ಟ್ವಿಟರ್) ನಲ್ಲಿದ್ದ ಬಿಟ್ಟು ಅವರ ಫೋಟೋ ನೋಡಿ, “ನಮ್ಮೊಂದಿಗೆ ಬಂದು ಕೆಲಸ ಮಾಡಿ” (Come work for us) ಎಂದು ನೇರವಾಗಿ ಉದ್ಯೋಗದ ಆಫರ್ ನೀಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಬಿಟ್ಟು, ಸಿಇಒ ಅವರಿಂದ ದೂರವಾಣಿ ಕರೆ ಬಂದಿದ್ದು, ಈ ಜಾಗತಿಕ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಇವರ ಈ ಸಾಹಸಕ್ಕೆ ಪ್ರಮುಖ ಉದ್ಯಮಿ ಆನಂದ್ ಮಹೀಂದ್ರಾ, ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *