ಸುಳ್ಯ: ಜ್ವರದಿಂದ ಬಳಲುತ್ತಿದ್ದ ಜಯನಗರದ ಯುವಕ ಲೋಕೇಶ್ ನಿಧನ

News

ಸುಳ್ಯ, : ಜಯನಗರದ ನಿವಾಸಿ ಲೋಕೇಶ್ (36ವ) ಅವರು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 10 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಲೋಕೇಶ್ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಮನೆಯವರು ಅವರನ್ನು ಸುಳ್ಯದ ಖಾಸಗಿ ಜ್ಯೋತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ತಂದೆ ಬಾಬು ಕೊಡಕೇರಿ, ತಾಯಿ ರುಕ್ಮಿಣಿ, ಸಹೋದರರಾದ ಹರೀಶ್ ಮತ್ತು ಕರುಣೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *