ತಿಲಾವಃ ಪ್ರೀ ಸ್ಕೂಲ್‌ನಿಂದ ‘ಸ್ಟೇಟಸ್ ಚಾಲೆಂಜ್‌’; ಗೋಲ್ಡ್ ಕಾಯಿನ್ ಹಾಗೂ ವಿಶೇಷ ಆಫರ್‌ಗಳ ವಿಜೇತರ ಘೋಷಣೆ

News

ಸುಳ್ಯ: ಸುಳ್ಯ ಗಾಂಧಿನಗರದ KA ನಾಲೆಡ್ಜ್ ಸೆಂಟರ್‌ನ ತಿಲಾವಃ ಪ್ರೀ ಸ್ಕೂಲ್ ಆಯೋಜಿಸಿದ್ದ ‘ಸ್ಟೇಟಸ್ ಚಾಲೆಂಜ್’ ನಲ್ಲಿ ಟೋಕನ್ ಸಂಖ್ಯೆ 308-ಹಸೀಬಾ ಜುನೈದ್ ಹಳೆಗೇಟು ಚಿನ್ನದ ನಾಣ್ಯದ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಲಕ್ಕಿ ಡ್ರಾ ಮೂಲಕ ಆಯ್ಕೆಯಾದ 10 ಕುಟುಂಬಗಳ ಮಕ್ಕಳಿಗೆ ಪ್ರವೇಶಾತಿ ಶುಲ್ಕದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ,20 ಕುಟುಂಬಗಳ ಮಕ್ಕಳಿಗೆ ಶೇಕಡಾ 35 ರಷ್ಟು ರಿಯಾಯಿತಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಶೇಕಡಾ 15 ರಷ್ಟು ಪ್ರವೇಶಾತಿ ರಿಯಾಯಿತಿ ಲಭ್ಯವಾಗಲಿದೆ.
ಮಕ್ಕಳ ಬಾಲ್ಯವು ಕೇವಲ ಆಟಕ್ಕಷ್ಟೇ ಸೀಮಿತವಾಗಿರದೆ, ಅವರ ಶಿಕ್ಷಣ, ಸಂಸ್ಕಾರ ಮತ್ತು ವೈಯಕ್ತಿಕ ಬೆಳವಣಿಗೆಗೆ ಅತ್ಯಂತ ಮಹತ್ವದ ಹಂತವಾಗಿದೆ. ಪುಟಾಣಿಗಳ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿ, ಅವರ ಕನಸುಗಳಿಗೆ ರೆಕ್ಕೆ ಕಟ್ಟುವುದು ತಿಲಾವಃ ಪ್ರೀ ಸ್ಕೂಲ್.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶೈಕ್ಷಣಿಕ ಜ್ಞಾನದ ಜೊತೆಗೆ ಧಾರ್ಮಿಕ, ನೈತಿಕ ಹಾಗೂ ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಉದ್ದೇಶದಿಂದ ತಿಲಾವಃ ಪ್ರೀ ಸ್ಕೂಲ್‌ನಲ್ಲಿ 2 ರಿಂದ 5 ವರ್ಷದ ಮಕ್ಕಳಿಗೆ 4 ತಿಂಗಳ ಆನ್‌ಲೈನ್ ಮತ್ತು ಆಫ್‌ಲೈನ್ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ಬೇಸಿಕ್ ಇಂಗ್ಲಿಷ್, ಅರೇಬಿಕ್, ಕುರಾನ್ ಸೂರಾ, ದೈನಂದಿನ ಅಝ್ ಕಾರ್ ಗಳು, ಹಾಗೂ ನಮಾಝ್ ಅಭ್ಯಾಸಗಳನ್ನು ಒಳಗೊಂಡ ವಿಶಿಷ್ಟ ತರಬೇತಿ ನೀಡಲಾಗುತ್ತದೆ.
ತಮ್ಮ ಮಕ್ಕಳಿಗೆ ಅತ್ಯುತ್ತಮ ಧಾರ್ಮಿಕ ಹಾಗೂ ನೈತಿಕ ಶಿಕ್ಷಣ ನೀಡಲು ಬಯಸುವ ಪೋಷಕರು ಸುಳ್ಯ ಗಾಂಧಿನಗರದಲ್ಲಿರುವ ತಿಲಾವಃ ಪ್ರೀ ಸ್ಕೂಲ್, KA ನಾಲೆಡ್ಜ್ ಸೆಂಟರ್ ಅನ್ನು ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆಗಳು: 74114 27300, 90191 71123.

Leave a Reply

Your email address will not be published. Required fields are marked *