ಸುಳ್ಯ: ನಗರದ ಪ್ರಮುಖ ಮೊಬೈಲ್ ಮಳಿಗೆಯಾದ ‘ಆರ್ಕುಟ್ ಮೊಬೈಲ್ಸ್’ನಲ್ಲಿ ಅತ್ಯಾಧುನಿಕ ಹಾಗೂ ಬಹುನಿರೀಕ್ಷಿತ ಆ್ಯಪಲ್ ಐಫೋನ್ 18 ಸರಣಿಯ ಫೋನ್ಗಳನ್ನು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ನೂತನ ಸರಣಿಯ ಮೊದಲ ಗ್ರಾಹಕರಾಗಿ ಧನುಷ್ ಕುಕ್ಕೆಟ್ಟಿ ಪೆರಾಲು ಅವರು ಐಫೋನ್ 18 ಪ್ರೊ ಮೊಬೈಲ್ ಖರೀದಿಸಿದರು. ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ನಡೆಸಿದ ಬಳಿಕ, ಉಪಸ್ಥಿತರಿದ್ದ ಗಣ್ಯರ ಸಮ್ಮುಖದಲ್ಲಿ ಧನುಷ್ ಅವರಿಗೆ ನೂತನ ಮೊಬೈಲ್ ಹಸ್ತಾಂತರಿಸಿ ಶುಭ ಹಾರೈಸಲಾಯಿತು..
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಮೀದ್ ಜನತಾ, ಹರೀಶ್ ಕಾಮಾತ್, ರಿಜ್ವಾನ್ ಜನತಾ, ಶಾಲಿ ಕಟ್ಟೆಕ್ಕಾರ್, ಡಾ. ಪ್ರಸನ್ನ, ನಾಸಿರ್ ಕಟ್ಟೆಕ್ಕಾರ್, ಶಿಹಾಬ್ ಕಟ್ಟೆಕ್ಕಾರ್, ಹನೀಫ್ ಆಲ್ಫಾ, ಹಾರಿಸ್ ಬಾರ್ಪಣೆ, ಚಂದ್ರಹಾಸ ಬಜಾಜ್ ಹಾಗೂ ಮಶೂದ್ ಚಾಯ್ಮಾಂಕ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಗ್ರಾಹಕರ ಅನುಕೂಲಕ್ಕಾಗಿ ನೂತನ ಐಫೋನ್ 18 ಸರಣಿಯ ಸ್ಮಾರ್ಟ್ಫೋನ್ಗಳು ಆಕರ್ಷಕ ಸುಲಭ ಕಂತುಗಳ (EMI) ಸೌಲಭ್ಯದೊಂದಿಗೆ ಮಳಿಗೆಯಲ್ಲಿ ಲಭ್ಯವಿದ್ದು, ಮೊಬೈಲ್ ಪ್ರಿಯರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಆರ್ಕುಟ್ ಮೊಬೈಲ್ಸ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
