ಪೈಚಾರ್: ಅಲ್-ಅಮೀನ್ ಯೂತ್ ಸೆಂಟರ್ ವತಿಯಿಂದ ಸಾಮೂಹಿಕ ಸುನ್ನತ್ (ಮುಂಜಿ) ಕಾರ್ಯಕ್ರಮ ಆಯೋಜನೆ

News

ಪೈಚಾರ್‌ನ ಅಲ್-ಅಮೀನ್ ಯೂತ್ ಸೆಂಟರ್ (ರಿ.) ವತಿಯಿಂದ ಮುಂಬರುವ ಅಕ್ಟೋಬರ್ 11, 2026 ರಂದು ಆದಿವಾರದಂದು ಅಲ್-ಅಮೀನ್ ಕಚೇರಿ ಪೈಚಾರ್‌ನಲ್ಲಿ ಬೃಹತ್ ಸಾಮೂಹಿಕ ಸುನ್ನತ್ (ಮುಂಜಿ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ನುರಿತ ಹಾಗೂ ಅನುಭವಿ ವೈದ್ಯರ ತಂಡದಿಂದ ಈ ಕಾರ್ಯಕ್ರಮವು ಅತ್ಯಂತ ವ್ಯವಸ್ಥಿತವಾಗಿ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತರು ಹೆಸರು ನೋಂದಾಯಿಸುವುದು ಕಡ್ಡಾಯವಾಗಿದ್ದು, ನೋಂದಣಿಗಾಗಿ ಮಗುವಿನ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಒದಗಿಸಬೇಕು. ಹೆಸರು ನೋಂದಾಯಿಸಲು 2026ರ ಅಕ್ಟೋಬರ್ 05 ಕೊನೆಯ ದಿನಾಂಕವಾಗಿದೆ.

ಕಾರ್ಯಕ್ರಮದಲ್ಲಿ ಸೀಮಿತ ಅವಕಾಶಗಳು ಮಾತ್ರ ಲಭ್ಯವಿರುವುದರಿಂದ, ಪೋಷಕರು ಕೂಡಲೇ ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಿ ಸಂಘಟಕರಿಗೆ ಸಹಕರಿಸುವಂತೆ ಕೋರಲಾಗಿದೆ. ಈ ಸಾಮೂಹಿಕ ಮುಂಜಿ ಕಾರ್ಯಕ್ರಮದ ಕುರಿತು ಹೆಚ್ಚಿನ ಹಾಗೂ ನಿಖರವಾದ ಮಾಹಿತಿಗಾಗಿ 9535719893 ಅಥವಾ 9741671893 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *