ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆ

News

ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿಯ ಮುಖ್ಯ ಸಭೆಯು ದಿನಾಂಕ 20 ಸೆಪ್ಟೆಂಬರ್ 2026 ರಂದು ಮಂಗಳೂರಿನ SDPI ಕಛೇರಿಯಲ್ಲಿ ಜರುಗಿತು.
​ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್ ಅವರು, ಮುಂಬರುವ ದಿನಗಳಲ್ಲಿ ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಲು ಎಲ್ಲರೂ ಕೈಜೋಡಿಸಬೇಕಿದೆ ಎಂದು ಕರೆ ನೀಡಿದರು. ಇದೇ ವೇಳೆ ಸಭೆಯಲ್ಲಿ ಮುಂದಿನ 3 ವರ್ಷಗಳ ಸುದೀರ್ಘ ಕಾರ್ಯ ಯೋಜನೆಗಳ ಕುರಿತು ಚರ್ಚೆ ನಡೆಸಿ, ಅಗತ್ಯ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
​ಕಾರ್ಯಕ್ರಮದ ಆರಂಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಅವರು ಆಗಮಿಸಿದ ಎಲ್ಲ ಪದಾಧಿಕಾರಿಗಳನ್ನು ಮತ್ತು ಸದಸ್ಯರನ್ನು ಸ್ವಾಗತಿಸಿದರು.
​ಅಂತಿಮವಾಗಿ ಉಪಾಧ್ಯಕ್ಷೆ ಫಾತಿಮಾ ನಸೀಮಾ ಅವರ ಸಮಾರೋಪ ನುಡಿಗಳೊಂದಿಗೆ ಮತ್ತು ಕಾರ್ಯದರ್ಶಿ ಝುಲೈಕರವರ ಧನ್ಯವಾದ ಸಮರ್ಪಣೆಯೊಂದಿಗೆ ಸಭೆಯು ಮುಕ್ತಾಯಗೊಂಡಿತು. ಸಭೆಯಲ್ಲಿ ಕಾರ್ಯದರ್ಶಿ ಆಶಾ ಹಾಗೂ ನಾಝಿಯಾ, ಕೋಶಾಧಿಕಾರಿ ಹಿನಾ ಹಾಗೂ ಸಮಿತಿ ಸದಸ್ಯರಾದ ರಮ್ಲತ್ ಮಂಗಳೂರು, ಝೋಹರಾ ಉಡುಪಿ, ಹಸೀನಾ ಶಿಮೊಗ್ಗ, ಅಫ್ರೋಝ್ ಹಾಸನ, ನಿಲೋಫರ್ ಖಾನ್ ಪಠಾನ್, ಸಾನಿಯಾ ಮೈಸೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *