ಎತ್ತಿನ ಭುಜ ಶಿಖರದಲ್ಲಿ ಮೊಳಗಿದ ಕನ್ನಡ ಡಿಂಡಿಮ – ಜೇನುಗೂಡು ಬಳಗದ 7ನೇ ಯಶಸ್ವಿ ಚಾರಣ

News


ಮೂಡಿಗೆರೆ, ನ.2: ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದಲ್ಲಿರುವ ಪ್ರಸಿದ್ಧ ಎತ್ತಿನ ಭುಜ ವೀವ್ ಪಾಯಿಂಟ್ ನಲ್ಲಿ ಜಯನಗರದ ಜೇನುಗೂಡು ಚಾರಣ ಬಳಗದವರು ಅರ್ಥಪೂರ್ಣವಾಗಿ ಆಚರಿಸಿದರು.

ಜೇನುಗೂಡು ಚಾರಣ ಬಳಗದ 7ನೇ ಯಶಸ್ವಿ ಟ್ರೆಕ್ಕಿಂಗ್ ಆಗಿದ್ದು, ನವೆಂಬರ್ 1ರಂದು ಬಳಗದ ಸದಸ್ಯರು ಎತ್ತಿನ ಭುಜದ ತುತ್ತ ತುದಿಯನ್ನು ಏರಿದರು. ಈ ರಾಜ್ಯೋತ್ಸವ ಆಚರಣೆಯ ರೂವಾರಿ ಜಯನಗರದ ಜನಾರ್ಧನ.ಜಿ ಅವರು ವಹಿಸಿಕೊಂಡಿದ್ದು, ಟ್ರೆಕ್ಕಿಂಗ್ ನ ಸಂಪೂರ್ಣ ಜವಾಬ್ದಾರಿಯನ್ನು ಹರೀಶ್ ಬೆಂಗಳೂರು ಅವರು ವಹಿಸಿಕೊಂಡಿದ್ದು, ಅವರಿಗೆ ರಹೀಮ್ ಜಯನಗರ, ಮತ್ತು ಅಬ್ದುಲ್ ಅವರು ಸಾತು ನೀಡಿದ್ದರು. ಶಿಖರದಲ್ಲಿ ಬಳಗದವರು ಮತ್ತು ಬೇರೆ ಬೇರೆ ಊರಿನಿಂದ ಬಂದ ಚಾರಣಿಗರು ಜೇನುಗೂಡು ಚಾರಣ ಬಳಗದ ಜೊತೆ ಸೇರಿ ಕನ್ನಡ ಧ್ವಜ ಹಾರಿಸಿ, ಡಾ. ರಾಜ್ ಕುಮಾರ್ ಅವರ ಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು. ನೀಲಿ ಟೀ-ಶರ್ಟ್, ಹಳದಿ-ಕೆಂಪು ಶಾಲು ಧರಿಸಿ, ಕೈಯಲ್ಲಿ ಕನ್ನಡ ಬಾವುಟ ಹಿಡಿದು "ಜೈ ಕರ್ನಾಟಕ ಮಾತೆ" ಘೋಷಣೆ ಕೂಗಿದ ದೃಶ್ಯ ಕಣ್ಮನ ಸೆಳೆಯಿತು.

ವರದಿ: ಜನಾರ್ಧನ.ಜಿ, ಜಯನಗರ

ಫೋಟೋ ಕ್ಯಾಪ್ಷನ್ ಗೆ:
“ಎತ್ತಿನ ಭುಜದಲ್ಲಿ ರಾಜ್ಯೋತ್ಸವ ಆಚರಿಸಿದ ಜಯನಗರದ ಜೇನುಗೂಡು ಚಾರಣ ಬಳಗದ ಸದಸ್ಯರು.”


Leave a Reply

Your email address will not be published. Required fields are marked *