ನಟ ಆದಿ ಲೋಕೇಶ್ ಸುಳ್ಯ ಭೇಟಿ – ಜೇಸಿಐ ಭಾರತ ವಲಯ 15ರ ವಲಯ ಉಪಾಧ್ಯಕ್ಷರಾದ ಲತಾಶ್ರೀ ಸುಪ್ರೀತ್ ಮೋoಟಡ್ಕ ಗೌರವ ಸನ್ಮಾನ

News

ಕನ್ನಡ ಚಿತ್ರರಂಗದ ಖ್ಯಾತ ನಟ ಆದಿ ಲೋಕೇಶ್ ರವರು ಮಂಗಳೂರಿನಿಂದ ಮೈಸೂರಿಗೆ ತೆರಳುವ ವೇಳೆ ನ.2ರಂದು ಸಂಜೆ ಗಾಂಧಿನಗರದ ಡಿಲೈಟ್ ಕೆಫೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಜೇಸಿಐ ಭಾರತ ವಲಯ 15ರ ವಲಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಜೇಸಿಐ ಸುಳ್ಯ ಪಯಸ್ವಿನಿಯ ಅಧ್ಯಕ್ಷೆ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋoಟಡ್ಕರವರನ್ನು ಆದಿ ಲೋಕೇಶ್ ರವರು ಸನ್ಮಾನಿಸಿ ಗೌರವಿಸಿದರು.
ಅಲ್ಲದೆ ಪಯಸ್ವಿನಿ ಜೇಸಿಐಯವರ ಅಭಿಯಾನವಾದ ಸ್ಟೀಲ್ ಬಾಟಲ್ ವಿತರಣೆಯ ಬಗ್ಗೆ ಮೆಚ್ಚುಗೆ ಮಾತನಾಡಿ ಅಲ್ಲೇ ಪ್ಲಾಸ್ಟಿಕ್ ಬಾಟಲ್ ನಲ್ಲಿದ್ದ ನೀರನ್ನು ಸ್ಟೀಲ್ ಬಾಟಲಿಗೆ ಹಾಕಿ ಅಭಿಯಾನಕ್ಕೆ ಮೆಚ್ಚುಗೆ ಕೂಡಾ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸುಳ್ಯ ಜೇಸಿಐ ಸುಳ್ಯ ಪಯಸ್ವಿಯ ಪೂರ್ವಾಧ್ಯಕ್ಷರಾದ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಪಿ. ಎಸ್ ಗಂಗಾಧರ್, ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ, ಆದಿ ಲೋಕೇಶ್ ರವರ ಆಪ್ತರಾದ ಸುಪ್ರೀತ್ ಮೋoಟಡ್ಕ, ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ ರಿಯಾಜ್ ಕಟ್ಟೆಕ್ಕಾರ್, ಬಿಲ್ಡಿಂಗ್ ಮಾಲಕ ಲತೀಫ್ ಎಂ.ಕೆ, ಕು. ಸ್ಥಿಗ್ನ ಮೋoಟಡ್ಕ, ಪ್ರೊಡ್ಯೂಸರ್ ಶಿವಕುಮಾರ್ ಸೇರಿದಂತೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *