ಮಂಗಳೂರು ವಿಶ್ವವಿದ್ಯಾಲಯ ಮಹಿಳಾ ಕಬಡ್ಡಿಯಲ್ಲಿ ಎನ್‌ಎಂಸಿ ದ್ವಿತೀಯ ಸ್ಥಾನ

Sports

ಕು. ವೀಕ್ಷಾಳಿಗೆ ಅತ್ಯುತ್ತಮ ಆಲ್‌ರೌಂಡ್ ಆಟಗಾರ್ತಿ ಪ್ರಶಸ್ತಿ

ಸುಳ್ಯ: ಮಂಗಳೂರು ವಿಶ್ವವಿದ್ಯಾಲಯದ ಅಂತರ್‌ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಮಹಿಳಾ ಕಬಡ್ಡಿ ತಂಡವು ಪ್ರಿ-ಚಾಂಪಿಯನ್‌ಶಿಪ್ ಹಂತದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಧರ್ಮಸ್ಥಳದ ಎಸ್‌ಡಿಎಂ ಕಾಲೇಜು, ಉಜಿರೆ ಇಲ್ಲಿ ಸೆಪ್ಟೆಂಬರ್ 29ರಿಂದ 30ರವರೆಗೆ ನಡೆದ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಎನ್‌ಎಂಸಿ ಮಹಿಳಾ ತಂಡವು ಉತ್ತಮ ಪ್ರದರ್ಶನ ನೀಡಿ ಪ್ರಿ-ಚಾಂಪಿಯನ್‌ಶಿಪ್ ಹಂತದ ಫೈನಲ್‌ಗೆ ಪ್ರವೇಶಿಸಿತು. ಫೈನಲ್ ಪಂದ್ಯದಲ್ಲಿ ತಂಡವು ದ್ವಿತೀಯ ಸ್ಥಾನವನ್ನು ಗಳಿಸಿತು.
ತಂಡದ ಆಟಗಾರ್ತಿ ಹಾಗೂ ಪ್ರಥಮ ವರ್ಷದ ಬಿ.ಎಸ್‌ಸಿ ವಿದ್ಯಾರ್ಥಿನಿ ಕು. ವೀಕ್ಷಾ ಅವರು ಅತ್ಯುತ್ತಮ ಆಲ್‌ರೌಂಡ್ ಆಟದ ಮೂಲಕ ಗಮನ ಸೆಳೆದು ಪ್ರಶಸ್ತಿ ಪಡೆದುಕೊಂಡರು.

ತಂಡದ ಸಾಧನೆಗೆ ನೆಹರು ಮೆಮೋರಿಯಲ್ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕ್ಯಾಪ್ಟನ್. ಸೀತಾರಾಮ ಎಂ ಡಿ ಇವರ ಮಾರ್ಗದರ್ಶನದಲ್ಲಿ ತಂಡವು ಈ ಸಾಧನೆ ಮಾಡಿದೆ

Leave a Reply

Your email address will not be published. Required fields are marked *