ಪೈಚಾರಿನ ಫಲುಲುದ್ದೀನ್ ನಿಧನ

News

ಮಂಗಳೂರು: ಪೈಚಾರ್ ನಿವಾಸಿ ಹಾಗೂ ಪೈಚಾರ್ ಬದ್ರಿಯಾ ಜುಮಾ ಮಸೀದಿ ಜಮಾತ್‌ನ ಸದಸ್ಯರಾದ ಫಲುಲುದ್ದೀನ್ (45ವ) ಅವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು ದಿವಂಗತ ಬೀರಾನ್ ಅವರ ಪುತ್ರರಾಗಿದ್ದಾರೆ. ಇವರು ಐದು ಜನ ಸಹೋದರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕತ್ಯಜಿಸಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮೃತರ ನಿಧನಕ್ಕೆ ಪೈಚಾರ್ ಬದ್ರಿಯಾ ಜುಮಾ ಮಸೀದಿ ಜಮಾತ್ ಸಮಿತಿ, ಸ್ಥಳೀಯ ನಾಗರಿಕರು ಹಾಗೂ ಕುಟುಂಬ ವರ್ಗದವರು ತೀವ್ರ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *