ದುಗ್ಗಲಡ್ಕ: ಕಾರು ರಿವರ್ಸ್ ತೆಗೆಯುವಾಗ ಮಹಿಳೆ ಮೇಲೆ ಹರಿದು ಸಾವು

News



ಸುಳ್ಯ ದುಗಲಡ್ಕ ಮನೆಯೊಂದರಲ್ಲಿ ನಿಲ್ಲಿಸಿದ್ದ ಕಾರನ್ನು  ರಿವರ್ಸ್ ತೆಗೆಯುತ್ತಿರುವಾಗ ಕಾರಿನಡಿಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನ.11 ರಂದು ಸಂಭವಿಸಿದೆ. ದುಗಲಡ್ಕದ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಹಿಂದಕ್ಕೆ ತೆಗೆಯುತ್ತಿರುವಾಗ ಹಿಂದೆ ನಿಂತಿದ್ದ ಮಹಿಳೆಗೆ ಕಾರು ಗುದ್ದಿ ಎಳೆದುಕೊಂಡ ಹೋಗಿದೆ ಎನ್ನಲಾಗಿದೆ. ಇದರಿಂದ ತೀವ್ರ ಗಾಯಗೊಂಡ ಮಹಿಳೆ ಕಮರು ಎಂಬವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಪೋಲಿಸರು ಘಟನಾಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *