Sullia (ಪೈಚಾರ್): ಪೈಚಾರ್ನ ಪ್ರಸಿದ್ಧ ಕಾರ್ ವರ್ಕ್ಶಾಪ್ ‘ಶಕ್ತಿ ಆಟೋ ವರ್ಕ್ಸ್’ ಮಾಲೀಕ ನಾರಾಯಣ ಅವರ ತಾಯಿ ಗುಲಾಬಿ ಅಕ್ಕ (83) ಅವರು ನಿನ್ನೆ ಸಂಜೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ಸಂಜೆ ಕೊನೆಯುಸಿರೆಳೆದಿದ್ದಾರೆ. ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಪೈಚಾರಿನಲ್ಲಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇವರ ನಿಧನಕ್ಕೆ ಪೈಚಾರ್ ಹಾಗೂ ಸುಳ್ಯ ಸುತ್ತಮುತ್ತಲಿನ ಗಣ್ಯರು, ಮತ್ತು ಸ್ಥಳೀಯರು ತೀವ್ರ ಸಂತಾಪ ಸೂಚಿಸಿದ್ದಾರೆ.
