ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಎನ್.ಎಂ.ಸಿ.ಯಲ್ಲಿ ಮಂಗಳೂರು ವಿವಿ ಅಂತರ್ ಕಾಲೇಜು ಗುಡ್ಡಗಾಡು ಓಟ ಚಾಂಪಿಯನ್ ಶಿಪ್

ಆಳ್ವಾಸ್ ಕಾಲೇಜು ಮೂಡಬಿದ್ರಿ: ಚಾಂಪಿಯನ್ಸ್, ಎಸ್.ಡಿ.ಎಂ ಕಾಲೇಜು ಉಜಿರೆ: ರನ್ನರ್ಸ್, ಎನ್.ಎಂ.ಸಿ. ಸುಳ್ಯ ಮತ್ತು ಜಿ.ಎಫ್.ಜಿ.ಸಿ ಬೆಳ್ತಂಗಡಿ: ತೃತೀಯ ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ ಇವರ ಸಹಯೋಗದಲ್ಲಿ, ಎಒಎಲ್‌ಇ (ರಿ.) ಸುಳ್ಯ ಪ್ರಾಯೋಜಕತ್ವದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್ 2026 ಸೆಪ್ಟೆಂಬರ್ 19ರಂದು ನೆಹರು ಮೆಮೋರಿಯಲ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು. ಕುರುಂಜಿ ವಿಶ್ವನಾಥ ಗೌಡ ಸ್ಮಾರಕ ರೋಲಿಂಗ್ ಟ್ರೋಫಿ (ಪುರುಷರು) ಹಾಗೂ ಕೈಕುರೆ ಶ್ರೀ […]

Read More

ಪಂಜದಲ್ಲಿ ದಸರಾ ಫುಟ್‌ಬಾಲ್ ಸಂಭ್ರಮ: ಜೈ ಭಾರತ್ ‘ಎ’ ಚಾಂಪಿಯನ್, ‘ಬಿ’ ರನ್ನರ್ ಅಪ್

ಪಂಜ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಸ್ಥಳೀಯ ಕೋಟಿ-ಚೆನ್ನಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ದಸರಾ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಜೈ ಭಾರತ್ ‘ಎ’ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ಜೈ ಭಾರತ್ ‘ಬಿ’ ತಂಡವು ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ತಾಲೂಕಿನ ಒಟ್ಟು ಎಂಟು ಬಲಿಷ್ಠ ತಂಡಗಳು ಭಾಗವಹಿಸಿದ್ದ ಈ ಕ್ರೀಡಾಕೂಟದಲ್ಲಿ ಆರಂಭದಿಂದಲೇ ತೀವ್ರ ಪೈಪೋಟಿ ಕಂಡುಬಂದಿದ್ದು, ಅಂತಿಮವಾಗಿ ಒಂದೇ ಸಂಸ್ಥೆಯ ಎರಡು ತಂಡಗಳು ಫೈನಲ್ ಹಣಾಹಣಿಗೆ ಪ್ರವೇಶ ಪಡೆದದ್ದು ವಿಶೇಷವಾಗಿತ್ತು. ಕ್ರೀಡಾಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದ […]

Read More

ಸುಳ್ಯ: ಸೆಪ್ಟೆಂಬರ್ 13ರಂದು ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವಾರ್ಷಿಕ ಮಹಾಸಭೆ

ಸುಳ್ಯ: ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ) ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 13, 2026ರ ಆದಿತ್ಯವಾರ ಬೆಳಿಗ್ಗೆ 10:30ಕ್ಕೆ ಸರಿಯಾಗಿ ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯಲಿದೆ.ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಮಾಧವ ಗೌಡ ಬಿ.ಕೆ. ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನೆರವೇರಲಿದೆ.ಸಭೆಯ ಕಾರ್ಯಕ್ರಮಗಳು:

Read More

ಸುಳ್ಯ ತಾಲೂಕು ಮಟ್ಟದ ಫುಟ್ಬಾಲ್: ಗ್ರೀನ್ ವ್ಯೂ ಮತ್ತು ಕೆಪಿಎಸ್ ಸುಳ್ಯ ತಂಡಗಳಿಗೆ ಚಾಂಪಿಯನ್ ಪಟ್ಟ

ಸುಳ್ಯ: ಶಾಲಾ ಶಿಕ್ಷಣ ಇಲಾಖೆ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಗಾಂಧಿನಗರ ಕೆಪಿಎಸ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಗಾಂಧಿನಗರ ಕ್ರೀಡಾಂಗಣದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಫುಟ್ಬಾಲ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಗ್ರೀನ್ ವ್ಯೂ ಪ್ರೌಢಶಾಲೆ ಹಾಗೂ ಬಾಲಕಿಯರ ವಿಭಾಗದಲ್ಲಿ ಕೆಪಿಎಸ್ ಸುಳ್ಯ ಪ್ರೌಢಶಾಲೆ ಚಾಂಪಿಯನ್ ಆಗಿ ಹೊರಹೊಮ್ಮಿವೆ. ರೋಚಕವಾಗಿ ಜರುಗಿದ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಗ್ರೀನ್ ವ್ಯೂ ಪ್ರೌಢಶಾಲಾ ತಂಡವು ಸೈಂಟ್ ಜೋಸೆಫ್ ಪ್ರೌಢಶಾಲೆಯನ್ನು 1-0 ಗೋಲುಗಳ ಅಂತರದಿಂದ […]

Read More

ಅರಂಬೂರು ಟರ್ಫ್‌ನಲ್ಲಿ ಜರ್ಸಿ ಬಿಡುಗಡೆ!;

ಅಕ್ಷಯ್ ಕೆ.ಸಿ. ಪ್ರಾಯೋಜಕತ್ವದಲ್ಲಿ SFC ಸುಳ್ಯ Under-15 ಆಟಗಾರರ ಜರ್ಸಿ ಬಿಡುಗಡೆ! ಸುಳ್ಯ: ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ SFC ಸುಳ್ಯ ಫುಟ್‌ಬಾಲ್ ಕ್ಲಬ್ ತರಬೇತಿ ನೀಡುತ್ತಿರುವ 15 ವರ್ಷ ವಯೋಮಾನದ (Under-15) ಆಟಗಾರರ ಹೊಸ ಜರ್ಸಿ ಬಿಡುಗಡೆ ಸಮಾರಂಭವು ಅರಂಬೂರಿನ ಟರ್ಫ್ ಮೈದಾನದಲ್ಲಿ ವಿಜ್ರಂಭಣೆಯಿಂದ ನೆರವೇರಿತು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಯುವ ನಾಯಕ ಅಕ್ಷಯ್ ಕೆ.ಸಿ. ಅವರು ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿ ಜರ್ಸಿ ಬಿಡುಗಡೆಗೊಳಿಸಿದರು. “ಚಾಯ್ ಚರ್ಚೆ”ಯಿಂದ ರೂಪುಗೊಂಡ […]

Read More

ಮೈದಾನದಲ್ಲಿ ಇನ್ನು ಮಿಂಚಲ್ಲ ‘ಫುಟ್ಬಾಲ್ ಲೆಜೆಂಡ್’: ಕಣ್ಣೀರಿನಿಂದ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಲಿಯೋನೆಲ್ ಮೆಸ್ಸಿ ವಿದಾಯ!

ವಿಶ್ವ ಫುಟ್‌ಬಾಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿ (39) ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಹಾಗೂ ಅತ್ಯಂತ ಭಾವನಾತ್ಮಕ ಸಂದೇಶವನ್ನು ಹಂಚಿಕೊಳ್ಳುವ ಮೂಲಕ, 21 ವರ್ಷಗಳ ತಮ್ಮ ಬಣ್ಣಬಣ್ಣದ ಬ್ಲೂ-ವೈಟ್ ಜೆರ್ಸಿ ಪಯಣಕ್ಕೆ ಮುಕ್ತಾಯ ಹಾಡಿದ್ದಾರೆ. “ಈ ನೀಲಿ ಮತ್ತು ಬಿಳಿ ಜೆರ್ಸಿಗಾಗಿ ನಾನು ನನ್ನ ಸರ್ವಸ್ವವನ್ನೂ ನೀಡಿದ್ದೇನೆ. ಈ ನಿರ್ಧಾರ ನನ್ನ ಹೃದಯಕ್ಕೆ ತೀವ್ರ ನೋವುಂಟುಮಾಡಿದೆ, ಆದರೆ ದೂರ ಸರಿಯಲು ಇದುವೇ ಸೂಕ್ತ ಸಮಯ” […]

Read More

ಎನ್.ಎಂ.ಸಿ.: ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ “ಅಂತರ ಶಾಂತಿ” ಕಾರ್ಯಕ್ರಮ

ಸುಳ್ಯ: ನೆಹರು ಮೆಮೋರಿಯಲ್ ಕಾಲೇಜು, ಸುಳ್ಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಕಾಲೇಜಿನ ಕ್ರೀಡಾಪಟುಗಳಿಗಾಗಿ “ಅಂತರ ಶಾಂತಿ – Meditation & Mindfulness” ಕಾರ್ಯಕ್ರಮವನ್ನು ಆಗಸ್ಟ್ 29ರಂದು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬ್ರಹ್ಮಕುಮಾರಿ ಸಂಸ್ಥೆಯ ಸುಳ್ಯ ಕೇಂದ್ರದ ಕೇಂದ್ರ ಉಸ್ತುವಾರಿ ಬ್ರಹ್ಮಕುಮಾರಿ ಉಮಾದೇವಿ ಭಾಗವಹಿಸಿ, ಧ್ಯಾನ, ಮೈಂಡ್‌ಫುಲ್‌ನೆಸ್ ಹಾಗೂ ಆಂತರಿಕ ಶಾಂತಿಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಕಾಲೇಜಿನ […]

Read More