ಸುಳ್ಯ: ಸುಳ್ಯದ ಕ್ರೀಡಾ ಇತಿಹಾಸದಲ್ಲೇ ಹಿಂದೆಂದೂ ಕಂಡಿರದಂತಹ ಅದ್ದೂರಿ ರಾಷ್ಟ್ರೀಯ ಮಟ್ಟದ ‘ಎ ಗ್ರೇಡ್’ ಮ್ಯಾಟ್ ಕಬಡ್ಡಿ ಪಂದ್ಯಾಟವು ಅಕ್ಟೋಬರ್ 3 ಮತ್ತು 4 ರಂದು ಸುಳ್ಯದಲ್ಲಿ ಜರುಗಲಿದೆ.

ಈ ಮಹತ್ವದ ಕ್ರೀಡಾಕೂಟದಲ್ಲಿ ಉತ್ತರ ಭಾರತದ ಪ್ರಖ್ಯಾತ ಅಂತರಾಷ್ಟ್ರೀಯ ಕಬಡ್ಡಿ ಪಟುಗಳನ್ನೊಳಗೊಂಡ ಬಲಿಷ್ಠ ತಂಡಗಳು ಭಾಗವಹಿಸುತ್ತಿರುವುದು ಪಂದ್ಯಾವಳಿಯ ಪ್ರಮುಖ ಆಕರ್ಷಣೆಯಾಗಿದೆ. ಕ್ರೀಡಾ ಪ್ರೇಮಿಗಳಲ್ಲಿ ಈಗಾಗಲೇ ಈ ಪಂದ್ಯಾಟ ಭಾರಿ ಕುತೂಹಲ ಹಾಗೂ ಸಂಚಲನ ಮೂಡಿಸಿದೆ.

ಪಂದ್ಯಾವಳಿಯ ಉದ್ಘಾಟಕರಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು. ಟಿ. ಖಾದರ್ ಅವರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘಟನಾ ಸಮಿತಿಯ ಪ್ರಮುಖ ಪದಾಧಿಕಾರಿಗಳು ಸಚಿವರನ್ನು ಖುದ್ದಾಗಿ ಭೇಟಿ ಮಾಡಿ, ಆಮಂತ್ರಣ ಪತ್ರವನ್ನು ನೀಡಿ ಅಧಿಕೃತವಾಗಿ ಆಹ್ವಾನಿಸಿದರು.
ಸುಳ್ಯ ಪರಿಸರದ ಕಬಡ್ಡಿ ಪ್ರೇಮಿಗಳಿಗೆ ಉತ್ತರ ಭಾರತದ ಖ್ಯಾತ ಆಟಗಾರರ ರೋಚಕ ಕಾದಾಟವನ್ನು ಕಣ್ತುಂಬಿಕೊಳ್ಳಲು ಈ ಪಂದ್ಯಾವಳಿ ಅತ್ಯುತ್ತಮ ವೇದಿಕೆಯಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
