ಜಾಮಿಅಃ ಅಝೀಝಿಯಾ ಸಮ್ಮೇಳನ: ಉಳ್ಳಾಲ ಝಿಯಾರತ್ ನೊಂದಿಗೆ ಪ್ರಚಾರಕ್ಕೆ ಚಾಲನೆ

News

ಕೇರಳದ ಕೊಡುಂಗಲ್ಲೂರಿನ ಮಾಡವನ ಪ್ರದೇಶದಲ್ಲಿ ತಲೆಯೆತ್ತಿ ನಿಂತಿರುವ ಧಾರ್ಮಿಕ ಮತ್ತು ಭೌತಿಕ ಸಮನ್ವಯ ಶಿಕ್ಷಣ ಸಂಸ್ಥೆಯಾದ ಜಾಮಿಅಃ ಅಝೀಝಿಯ್ಯಃ ಇದರ 43 ನೇ ವಾರ್ಷಿಕ ಹಾಗೂ 11ನೇ ಸನದುದಾನ ಸಮ್ಮೇಳನವು 2026ರ ನವೆಂಬರ್ 22ರಂದು ನಡೆಯಲಿದೆ. ಈ ಸಮ್ಮೇಳನದ ಪ್ರಚಾರದ ಉಧ್ಘಾಟನೆಯನ್ನು ಉಳ್ಳಾಲ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಙಳರ ದರ್ಗಾ ಝಿಯಾರತ್ತಿನೊಂದಿಗೆ ಚಾಲನೆ ನೀಡಲಾಯಿತು. ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್ ಖತೀಬರಾದ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಉಸ್ತಾದರು ಝಿಯಾರತ್ ಗೆ ನೇತೃತ್ವ ನೀಡಿದರು. ಕರ್ನಾಟಕ ರಾಜ್ಯ ಝುಹ್ರೀಸ್ ಅಸೋಸಿಯೇಷನ್ ಗೌರವಾಧ್ಯಕ್ಷ ವಿ.ಯು ಇಸ್ಹಾಕ್ ಝುಹ್‌ರಿ ಸೂರಿಂಜೆ ರವರ ಘನ ಅಧ್ಯಕ್ಷತೆಯಲ್ಲಿ ದರ್ಗಾ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ರವರು ಉಧ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಜಾಮಿಅಃ ಅಝೀಝಿಯಾ ಸಂಸ್ಥೆಯ ಬಗ್ಗೆ ಮತ್ತು ಅದರ ಪ್ರಿನ್ಸಿಪಾಲರಾದ ಮಾಡವನ ಉಸ್ತಾದರ ಕಾರ್ಯಾಚರಣೆ ಬಗ್ಗೆ ಸ್ಮರಿಸಿಕೊಂಡು ಸಂಸ್ಥೆಗೆ ಪೂರ್ಣ ಸಹಕಾರ ಮತ್ತು ಪ್ರೋತ್ಸಾಹದೊಂದಿಗೆ ಕಾರ್ಯಾಚರಣೆ ನಡೆಸಲು ಹುರಿದುಂಬಿಸಿದರು. ಕರ್ನಾಟಕ ರಾಜ್ಯ ಝುಹ್ರೀಸ್ ಅಸೋಸಿಯೇಷನ್ ಅಧ್ಯಕ್ಷರಾದ ನೂರುದ್ದೀನ್ ಝುಹ್‌ರಿ ಪಂಜ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಮ್ಮೇಳನ ಪ್ರಮೇಯ ವಾಕ್ಯವಾದ “ಮಾನವ ಐಕ್ಯ ಜಾಗತಿಕ ಸೌಖ್ಯ” ಎಂಬ ವಿಷಯವನ್ನು ಸಮರ್ಪಕವಾಗಿ ಮಂಡಿಸಿದರು. ಸಮ್ಮೇಳನದ ಸ್ವಾಗತ ಸಮಿತಿ ಕನ್ವೀನರ್ ಶಾಫಿ ಝುಹ್‌ರಿ ಪಡ್ಪು, ಕಾಸರಗೋಡು ರವರು ಮುಖ್ಯ ಪ್ರಭಾಷಣ ಮಾಡಿ ಸರ್ವರನ್ನೂ ನವೆಂಬರ್ 22ರಂದು ನಡೆಯಲಿರುವ ಜಾಮಿಅಃ ಅಝೀಝಿಯಾ ಸಮ್ಮೇಳನಕ್ಕೆ ಆಹ್ವಾನಿಸಿದರು. ಸಯ್ಯಿದ್ ಹಂಝ ಝುಹ್‌ರಿ ತಂಙಳ್ ಕರ್ಪಾಡಿ ರವರು ಸಮಾರೋಪ ದುಆ ಮಾಡಿದರು.

ಕಾರ್ಯಕ್ರಮದಲ್ಲಿ ಉಳ್ಳಾಲ ಸಯ್ಯಿದ್ ಮದನಿ ವಿಧ್ಯಾಸಂಸ್ಥೆಯ ಮುದರ್ರಿಸರಾದ ಮುಶರ್ರಫ್ ಸಖಾಫಿ, ಅಜ್ಮಲ್ ಸಅದಿ, ಶುಹೈಬ್ ಅಝ್ಹರಿ, ತಸ್ಲೀಂ ಅಹ್ಸನಿ, ರಾಜ್ಯ ಝುಹ್ರೀಸ್ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಮುಸ್ತಫ ಝುಹ್‌ರಿ ಕೆಸಿ ರೋಡು, ರಾಜ್ಯ ಝುಹ್ರೀಸ್ ಅಸೋಸಿಯೇಷನ್ ಸಮಿತಿ ಸದಸ್ಯರಾದ ಅಬ್ದುಲ್ ಅಝೀಝ್ ಝುಹ್‌ರಿ ಕಿಲ್ಲೂರು, ಹಂಝ ಝುಹ್‌ರಿ ಇರಾ ಮೂಲೆ, ಹಸೈನಾರ್ ಝುಹ್‌ರಿ ಬಿಜಾಪುರ, ಚಿಕ್ಕಮಗಳೂರು ಜಿಲ್ಲಾ ಝುಹ್‌ರೀಸ್ ನಾಯಕರಾದ ಮುಸ್ತಫ ಝುಹ್‌ರಿ, ಉಡುಪಿ ಜಿಲ್ಲಾ ಝುಹ್‌ರೀಸ್ ನಾಯಕರಾದ ಹಾಫಿಳ್ ಶಾಹುಲ್ ಹಮೀದ್ ಝುಹ್‌ರಿ, ವೆಸ್ಟ್ ಜಿಲ್ಲಾ ಝುಹ್‌ರೀಸ್ ಪ್ರಧಾನ ಕಾರ್ಯದರ್ಶಿ ಆರಿಫ್ ಝುಹ್‌ರಿ ಮುಕ್ಕ, ಕೋಶಾಧಿಕಾರಿ ಉಸ್ಮಾನ್ ಝುಹ್‌ರಿ ಕಿನ್ಯ, ಈಸ್ಟ್ ಜಿಲ್ಲಾ ಝುಹ್‌ರೀಸ್ ಅಧ್ಯಕ್ಷರಾದ ಅಯ್ಯೂಬ್ ಝುಹ್‌ರಿ ಮಡಂತ್ಯಾರು, ಕೋಶಾಧಿಕಾರಿ ಸಿದ್ದೀಖ್ ಝುಹ್‌ರಿ ಧರ್ಮಸ್ಥಳ ಹಾಗೂ ಹಲವಾರು ಝುಹ್‌ರಿ ವಿಧ್ವಾಂಸರುಗಳು, ಉಳ್ಳಾಲ ಸಂಸ್ಥೆಯ ಮುತಅಲ್ಲಿಂಗಳು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಎ.ಎಂ.ಫೈಝಲ್ ಝುಹ್‌ರಿ ಕಲ್ಲುಗುಂಡಿ ಸ್ವಾಗತಿಸಿ, ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಝುಹ್‌ರಿ ಕುದ್ರಡ್ಕ ವಂದಿಸಿದರು. ವೆಸ್ಟ್ ಜಿಲ್ಲಾ ಝುಹ್‌ರೀಸ್ ಅಧ್ಯಕ್ಷರಾದ ಹಿದಾಯತುಲ್ಲಾಹ್ ಝುಹ್‌ರಿ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *