ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಸಿಡಿಲು ಬಡಿತಕ್ಕೆ ಯುವಕಯೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.
ಮೃತ ಯುವಕರನ್ನು ಕುಂಡಾರ್ ಮೈಲಾನ್‌ಕೋಟ್ ಹೌಸ್‌ನ ಮುಹಮ್ಮದ್ ನೌಫಲ್ ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ಪಾಂಡಿ ಬಳವಂತುಕ್ಕೆಯಲ್ಲಿರುವ ತಮ್ಮ ಪತ್ನಿಯ ಮನೆಗೆ ತೆರಳಿದಾಗ ಈ ಅಪಘಾತ ಸಂಭವಿಸಿದೆ. ತಕ್ಷಣ ಅವರನ್ನು ಮುಳ್ಳೇರಿಯ ಸಹಕಾರಿ ಮೆಡಿಕಲ್ ಸೆಂಟರ್‌ಗೆ ಕರೆದೊಯ್ಯಲಾಯಿತಾದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಅವರು ತಿರುವನಂತಪುರಂನ ಜ್ಯೂಸ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅರಬಿ ಮತ್ತು ನಬೀಸಾ ದಂಪತಿಯ ಪುತ್ರರಾಗಿದ್ದ ಇವರಿಗೆ ಪತ್ನಿ ಸುಹ್ರಾ ಹಾಗೂ ಇಬ್ಬರು ಮಕ್ಕಳಿದ್ದಾರೆ.
