ಜಾತಿ-ಧರ್ಮ ಮೀರಿದ ಅಪರೂಪದ ಸ್ನೇಹ: ಆರ್ಟಿಐ ಕಾರ್ಯಕರ್ತ ಶಾರಿಕ್ ಅಂತಿಮ ಯಾತ್ರೆಯಲ್ಲಿ ಸೌಹಾರ್ದತೆ ಮೆರೆದ ಗೆಳೆಯ ಅಶೋಕ್ ಎಡಮಲೆ
Sullia (ಮೊಗರ್ಪಣೆ): ಜಾತಿ-ಧರ್ಮಗಳ ಎಲ್ಲೆಯನ್ನು ಮೀರಿದ ನಿಜವಾದ ಸ್ನೇಹ ಮತ್ತು ಸೌಹಾರ್ದತೆಗೆ ಸುಳ್ಯದ ಮೊಗರ್ಪಣೆಯಲ್ಲಿ ಇಂದು ಅಪರೂಪದ ಕ್ಷಣವೊಂದು ಸಾಕ್ಷಿಯಾಯಿತು. ಮಾಹಿತಿ ಹಕ್ಕು (RTI) ಕಾರ್ಯಕರ್ತರಾಗಿದ್ದ ಶಾರಿಕ್ ಅವರು ನಿಧನರಾಗಿದ್ದು, ಅವರ ಅಂತಿಮ ವಿಧಿವಿಧಾನಗಳು ಮೊಗರ್ಪಣೆ ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ನೆರವೇರಿದವು. ಸಮಾಜಮುಖಿ ಚಿಂತನೆ ಹಾಗೂ ಆರ್ಟಿಐ ಹೋರಾಟಗಳಲ್ಲಿ ಶಾರಿಕ್ ಅವರೊಂದಿಗೆ ಹೆಜ್ಜೆ ಹಾಕಿದ್ದ, ಅದೇ ಮನಸ್ಥಿತಿಯ ಆಪ್ತ ಗೆಳೆಯ ಅಶೋಕ್ ಎಡಮಲೆ ಅವರು ತಮ್ಮ ಪ್ರೀತಿಯ ಮಿತ್ರನನ್ನು ಕಡೆಯದಾಗಿ ಬೀಳ್ಕೊಡಲು ಮಸೀದಿಗೆ ಆಗಮಿಸಿದ್ದರು. ಧಾರ್ಮಿಕ ವಿಧಿವಿಧಾನಗಳು […]
Read More