ಕೊಚ್ಚಿ ಕಾರು ಅಪಘಾತ: ಮೃತ ಯುವಕ ಇಯಾಝ್ ಮನೆಗೆ ಗಣ್ಯರ ಭೇಟಿ; ಕುಟುಂಬಕ್ಕೆ ಸಾಂತ್ವನ ಹಾಗೂ ಬೆಂಬಲದ ಭರವಸೆ

ಸುಳ್ಯ: ಕೇರಳದ ಕೊಚ್ಚಿಯಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಸಾವನಪ್ಪಿದ ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಇಯಾಜ್‌ ಅವರ ನಿವಾಸಕ್ಕೆ ಗಣ್ಯರು ಭೇಟಿ ನೀಡಿ, ಶೋಕಾಸಕ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಹಾಗೂ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ದರ್ಜೆ) ಟಿ.ಎಂ. ಶಹೀದ್ ತೆಕ್ಕಿಲ್ ಅವರು ಕನಕಮಜಲುವಿನಲ್ಲಿರುವ ಇಯಾಜ್‌ ಅವರ ಮನೆಗೆ ತೆರಳಿ, ಮೃತರ ಪೋಷಕರು ಹಾಗೂ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ […]

Read More

ಕೊಚ್ಚಿ ಮಿನಿ ಕೂಪರ್ ಭೀಕರ ಅಪಘಾತ: ಸ್ಥಳ ಮಹಜರು ಪೂರ್ಣ, 120 ಕಿ.ಮೀ ವೇಗದಲ್ಲಿದ್ದ ವಿಚಾರ ಒಪ್ಪಿಕೊಂಡ ಆರೋಪಿ!

ಕೊಚ್ಚಿ: ಕೇರಳದ ಕೊಚ್ಚಿ ಬಳಿಯ ನೆಡುಂಬಸ್ಸೇರಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಭವಿಸಿದ ಭೀಕರ ಮಿನಿ ಕೂಪರ್ ಕಾರು ಅಪಘಾತ ಪ್ರಕರಣದಲ್ಲಿ ಪೊಲೀಸರು ಮಹಜರು ಪ್ರಕ್ರಿಯೆ (ಕ್ರೈಂ ಸೀನ್ ರೀಕನ್‌ಸ್ಟ್ರಕ್ಷನ್) ಪೂರ್ಣಗೊಳಿಸಿದ್ದು, ತನಿಖೆ ವೇಳೆ ಆಘಾತಕಾರಿ ಸತ್ಯಗಳು ಹೊರಬಂದಿವೆ. ಅಪಘಾತದ ವೇಳೆ ಕಾರು ಬರೋಬ್ಬರಿ ಗಂಟೆಗೆ 120 ಕಿ.ಮೀಗೂ ಹೆಚ್ಚಿನ ವೇಗದಲ್ಲಿತ್ತು ಎಂಬ ಅಂಶವನ್ನು ಆರೋಪಿ ಚಾಲಕ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ಘಟನೆಯ ಹಿನ್ನೆಲೆ: ಕೆಲಸ ಮುಗಿಸಿ ತಡರಾತ್ರಿ ಚಹಾ ಕುಡಿಯಲು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಕರ್ನಾಟಕ ಮೂಲದ ಇಯಾಸ್ […]

Read More

ಕೊಚ್ಚಿಯಲ್ಲಿ ಕನ್ನಡಿಗರ ಸಡಗರ: ಕನ್ನಡ ಹಾಗೂ ಜನಪದ ಸಂಸ್ಕೃತಿಯೇ ಸೌಹಾರ್ದದ ಸೇತುವೆ – ಟಿ.ಎಂ. ಶಹೀದ್ ತೆಕ್ಕಿಲ್

ಕೊಚ್ಚಿ: ಕನ್ನಡ ಭಾಷೆ ಹಾಗೂ ಜನಪದ ಸಂಸ್ಕೃತಿ ಕರ್ನಾಟಕ, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಜನರನ್ನು ಬೆಸೆಯುವ ಸೌಹಾರ್ದದ ಸೇತುವೆಯಾಗಿದೆ ಎಂದು ಕರ್ನಾಟಕ ಸರಕಾರದ ಸಚಿವ ಸ್ಥಾನಮಾನ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ಹೇಳಿದರು. ಅವರು ಕೊಚ್ಚಿಯಲ್ಲಿ ಹೋಟೆಲ್ ಗೋಕುಲಂ ಪಾರ್ಕ್ ನಲ್ಲಿ ನಡೆದ ಕನ್ನಡ-ಜನಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕರ್ನಾಟಕವು ವಿವಿಧ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಗಳ ಸಹಬಾಳ್ವೆಯ ನಾಡಾಗಿದೆ. […]

Read More