ನಮ್ಮ ಸುಳ್ಯದಲ್ಲೂ ಬೆಚ್ಚಿಬೀಳಿಸುತ್ತಿರುವ ದಿನಸಿ ಬೆಲೆ ಏರಿಕೆ: ಕಣ್ಣೀರು ಹಾಕುತ್ತಿರುವ ಜನಸಾಮಾನ್ಯರು!

ಸುಳ್ಯ: ದೇಶದಾದ್ಯಂತ ದಿನದಿಂದ ದಿನಕ್ಕೆ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳು ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆ ಮಾಡುತ್ತಿವೆ. ಅದರಲ್ಲೂ ವಿಶೇಷವಾಗಿ ಪ್ರತಿನಿತ್ಯದ ಊಟದ ತಟ್ಟೆಗೆ ಅನಿವಾರ್ಯವಾಗಿರುವ ಅಕ್ಕಿ ಹಾಗೂ ಬೇಳೆ ಕಾಳುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಕುಟುಂಬದ ಮಾಸಿಕ ಬಜೆಟ್ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಆದರೆ, ಆಹಾರ ಹಣದುಬ್ಬರವನ್ನು ಹತೋಟಿಗೆ ತರುವಲ್ಲಿ ಮತ್ತು ಮಾರುಕಟ್ಟೆಯನ್ನು ಸಮರ್ಪಕವಾಗಿ ನಿಯಂತ್ರಿಸುವಲ್ಲಿ ಆಡಳಿತ ನಡೆಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿಗಳು ಸಂಪೂರ್ಣ ವಿಫಲವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಎರಡು ತಿಂಗಳ ಅಂತರದಲ್ಲಿ […]

Read More

ಸುಳ್ಯದಲ್ಲಿ ‘ಮೊಬೈಲ್ ಟೆಕ್’ ನೂತನ ಮಳಿಗೆ ಉದ್ಘಾಟನೆ ಹಾಗೂ ಭರ್ಜರಿ ಕೊಡುಗೆಗಳು!

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ “ಮೊಬೈಲ್ ಟೆಕ್” (MOBILE TECH) ನೂತನ ಮೊಬೈಲ್ ಮಳಿಗೆಯು ಶುಭಾರಂಭಗೊಂಡಿದೆ. ಈ ಮಳಿಗೆಯ ಉದ್ಘಾಟನೆಯನ್ನು ಕುಞಿಕೋಯ ತಂಙಲ್ ಸಅದಿ ನೆರವೇರಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಮಳಿಗೆಯ ಮಾಲಕರಾದ ಮುಸ್ತಫಾ, ಅನ್ಸಾರ್ ಹಾಗೂ ಅತಿಥಿಗಳಾಗಿ ಬಶೀರ್ ಝುಹರಿ, ಅಬೂಬಕರ್ ಹಾಗೂ ಇಸ್ಮಾಯಿಲ್ ಉಪಸ್ಥಿತರಿದ್ದರು. ವಿಶೇಷ ಉದ್ಘಾಟನಾ ಕೊಡುಗೆಗಳು:

Read More

ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ

ಸುವರ್ಣ ಸಂಭ್ರಮೋತ್ಸವಕ್ಕೆ ಕಾರ್ಯಯೋಜನೆ ಸುಳ್ಯ: ನೆಹರು ಮೆಮೋರಿಯಲ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ(ರಿ.)ದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಡಾ. ಕೆ. ಟಿ. ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 9 ಬುಧವಾರದಂದು ನಡೆಯಿತು. ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಮತ್ತು ಉಪನ್ಯಾಸಕಿ ಸಿಂಧು ಭಾರದ್ವಾಜ್ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭಾಕಾರ್ಯಕ್ರಮದಲ್ಲಿ ನಿರ್ದೇಶಕರಾದ ಆನಂದ ಖಂಡಿಗರವರು ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಮಧುರಾ ಎಂ. ಆರ್. ಅವರು ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದರು. ಅಧ್ಯಕ್ಷರು ಸಂಘದ ಲೆಕ್ಕಪತ್ರದ […]

Read More

ಸುಳ್ಯದಲ್ಲಿ ತಾಲೂಕು ಮಟ್ಟದ ‘ಪ್ರಜಾ ಸೇವೆ ಆಂದೋಲನ’: ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫಾರಿಂದ ವಿವಿಧ ಜ್ವಲಂತ ಸಮಸ್ಯೆಗಳ ಕುರಿತು ಮನವಿ ಸಲ್ಲಿಕೆ

ಸುಳ್ಯ: ತಾಲೂಕು ಮಟ್ಟದಲ್ಲಿ ನಡೆದ ‘ಪ್ರಜಾ ಸೇವೆ ಆಂದೋಲನ’ ಸಭೆಯಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫಾ ಅವರು ಭಾಗವಹಿಸಿ, ಸುಳ್ಯ ತಾಲೂಕು ಹಾಗೂ ನಗರ ವ್ಯಾಪ್ತಿಯ ವಿವಿಧ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿದರು. ಸಭೆಯಲ್ಲಿ ಮಂಡಿಸಲಾದ ಪ್ರಮುಖ ಬೇಡಿಕೆಗಳು ಹಾಗೂ ಸಮಸ್ಯೆಗಳು: ಅಧಿಕಾರಿಗಳ ಸ್ಪಂದನೆ: ಸಲ್ಲಿಕೆಯಾದ ಪ್ರತಿಯೊಂದು ಮನವಿ ಮತ್ತು ಅರ್ಜಿಗಳನ್ನು ಆಯಾ ಇಲಾಖೆಗಳಿಗೆ ಪ್ರತ್ಯೇಕವಾಗಿ ಸ್ಕ್ಯಾನಿಂಗ್ ನಡೆಸಿ ತಕ್ಷಣವೇ ರವಾನಿಸಲಾಗಿದೆ. ಕರ್ನಾಟಕ […]

Read More

BMS ಹೋರಾಟಕ್ಕೆ ಯಶಸ್ಸು: ಕಾರ್ಮಿಕರ ಬೇಡಿಕೆ ಈಡೇರಿಸಲು ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ ಭರವಸೆ

ನವದೆಹಲಿ: ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಬಿಎಂಎಸ್ (ಭಾರತೀಯ ಮಜ್ದೂರು ಸಂಘ) ನಡೆಸಿದ ನಿರಂತರ ಹೋರಾಟಕ್ಕೆ ಮಹತ್ವದ ಫಲಶ್ರುತಿ ದೊರೆತಿದೆ. ಆಗಸ್ಟ್ 17ರಂದು ದೇಶಾದ್ಯಂತ ಬಿಎಂಎಸ್ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 1ರಂದು ಬಿಎಂಎಸ್ ಅಖಿಲ ಭಾರತ ನಾಯಕತ್ವವು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿತು. ಈ ಸಭೆಯಲ್ಲಿ ಹೊಸ ಕಾರ್ಮಿಕ ಸಂಹಿತೆಗಳಲ್ಲಿರುವ (Labour Codes) ಕಾರ್ಮಿಕ ವಿರೋಧಿ ನಿಯಮಗಳ ತಿದ್ದುಪಡಿ ಹಾಗೂ ನೌಕರರ ಪ್ರಮುಖ […]

Read More

ಸುಳ್ಯ: ತಾಲೂಕು ಮಿಲಾದ್ ಸಮಿತಿ ಕಚೇರಿ ಉದ್ಘಾಟನೆ; ಸೆಪ್ಟೆಂಬರ್ 11ರಂದು ಬೃಹತ್ ಇಸ್ಲಾಮಿಕ್ ಸಾಂಸ್ಕೃತಿಕ ಮೆರವಣಿಗೆಗೆ ನಿರ್ಧಾರ

ಸುಳ್ಯ: ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ ಪವಿತ್ರ ಜನ್ಮದಿನಾಚರಣೆಯ (ಈದ್ ಮಿಲಾದ್) ಅಂಗವಾಗಿ, ತಾಲೂಕು ಮಿಲಾದ್ ಸಮಿತಿಯ ನೂತನ ಕಚೇರಿಯನ್ನು ಗಾಂಧಿನಗರದ ಜಿಟಿಸಿ ಮೆಟ್ರೋ ಬನಾತ್ ಟವರ್‌ನಲ್ಲಿ ವಿಜೃಂಭಣೆಯಿಂದ ಉದ್ಘಾಟಿಸಲಾಯಿತು. ಪ್ರತಿ ವರ್ಷದಂತೆ ಈ ಬಾರಿಯೂ ಈದ್ ಮಿಲಾದ್ ಅನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಸಮಿತಿಯನ್ನು ರಚಿಸಿಕೊಳ್ಳಲಾಗಿದ್ದು, ಇದರ ಅಂಗವಾಗಿ ಸೆಪ್ಟೆಂಬರ್ 11 ಶುಕ್ರವಾರ ಸಂಜೆ 4 ಗಂಟೆಗೆ ಸುಳ್ಯದಲ್ಲಿ ಬೃಹತ್ ಇಸ್ಲಾಮಿಕ್ ಸಾಂಸ್ಕೃತಿಕ ಕಲಾ ವೈಭವದ ಮೆರವಣಿಗೆ ಹಾಗೂ ‘ಇಷ್ಕೆ ಮದೀನಾ’ ಕಾರ್ಯಕ್ರಮವನ್ನು […]

Read More

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸುಳ್ಯದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು 172 ನೇ ಜನ್ಮ ದಿನಾಚರಣೆ

ಗುರುಗಳ ಸಾಮಾಜಿಕ, ,ಶೈಕ್ಷಣಿಕ ಮತ್ತು ಸಂಘಟನಾತ್ಮಕ ಅಭಿವೃದ್ಧಿ ಯ ಪರಿಕಲ್ಪನೆ ಇಂದಿಗೂ ಪ್ರಸ್ತುತ : ಟಿ. ಎಂ. ಶಹೀದ್ ತೆಕ್ಕಿಲ್ 18 ನೇ ಶತಮಾನದ ಸಮಾಜ ಸುಧಾರಕರಾದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆ ಸುಳ್ಯ ತಾಲೂಕು ಕಚೇರಿ ಸಭಾಂಗಣ ದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಿಸಲಾಯಿತು. ಅಧ್ಯಕ್ಷತೆಯನ್ನು ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ ವಹಿಸಿದ್ದರು. ಕಾರ್ಯಕ್ರಮ ವನ್ನು ಉದ್ಘಾಟಿಸಿದ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ […]

Read More